ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Murali Vijay : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್

Murali Vijay Has Announced Retirement From International Cricket

ಟೀಂ ಇಂಡಿಯಾ ಆಟಗಾರ ಮುರಳಿ ವಿಜಯ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ತಂಡದ ಪರವಾಗಿ ಹಲವು ಮರೆಯಲಾಗ ಇನ್ನಿಂಗ್ಸ್‌ಗಳನ್ನು ಆಡಿರುವ ಅವರು ಇತ್ತೀಚಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.

2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು 2018ರವರೆಗೆ ಭಾರತ ತಂಡಕ್ಕಾಗಿ ಆಡಿದ್ದಾರೆ. 61 ಟೆಸ್ಟ್, 17 ಏಕದಿನ ಮತ್ತು 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್‌ ವರದಿ ನೋಡಿ ತಂಡದಲ್ಲಿ ಬದಲಾವಣೆInd vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್‌ ವರದಿ ನೋಡಿ ತಂಡದಲ್ಲಿ ಬದಲಾವಣೆ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗಾಗಿ ಘೋಷಣೆಯಾದ ಭಾರತ ತಂಡದಲ್ಲಿ ಮುರಳಿ ವಿಜಯ್ ಆಯ್ಕೆಯಾಗಿರಲಿಲ್ಲ.

ಕೆಲವು ದಿನಗಳ ಹಿಂದಷ್ಟೇ ಅವರು ಭಾರತ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಬೇಸರ ಹೊರಹಾಕಿದ್ದರು. 30 ವರ್ಷ ದಾಟಿದ ನಂತರ ಭಾರತದಲ್ಲಿ ಕ್ರಿಕೆಟಿಗರನ್ನು 80 ವರ್ಷದವರಂತೆ ನೋಡಲಾಗುತ್ತಿದೆ, ನನಗೆ ಇನ್ನೂ ಕ್ರಿಕೆಟ್ ಆಡುವ ಇಚ್ಛೆಯಿದೆ ಆದರೆ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದ್ದರು.

ಜಸ್ಪ್ರೀತ್ ಬೂಮ್ರಾ ಪಾಕ್ ವೇಗಿ ಶಾಹಿನ್ ಅಫ್ರಿದಿಯ ಹತ್ತಿರಕ್ಕೂ ಬರಲ್ಲ ಎಂದ ಪಾಕ್ ಮಾಜಿ ಕ್ರಿಕೆಟಿಗಜಸ್ಪ್ರೀತ್ ಬೂಮ್ರಾ ಪಾಕ್ ವೇಗಿ ಶಾಹಿನ್ ಅಫ್ರಿದಿಯ ಹತ್ತಿರಕ್ಕೂ ಬರಲ್ಲ ಎಂದ ಪಾಕ್ ಮಾಜಿ ಕ್ರಿಕೆಟಿಗ

ಅವರ ಹೇಳಿಕೆ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ವಿದೇಶಗಳಲ್ಲಿ ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರ ಮುರಳಿ ವಿಜಯ್ ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

 ಎಲ್ಲರಿಗೂ ಧನ್ಯವಾದ ಹೇಳಿದ ಮುರಳಿ ವಿಜಯ್

ಎಲ್ಲರಿಗೂ ಧನ್ಯವಾದ ಹೇಳಿದ ಮುರಳಿ ವಿಜಯ್

ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿರುವ ಮುರಳಿ ವಿಜಯ್ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. 2002 ರಿಂದ 2018 ರವರೆಗೆ ಸಮಯ ನನ್ನ ಜೀವನದಲ್ಲಿ ಮರೆಯಲಾಗದು. ಭಾರತಕ್ಕಾಗಿ ಆಡಿದ ಹೆಮ್ಮೆ ನನಗಿದೆ.

ನನಗೆ ಅವಕಾಶ ನೀಡಿದ ಬಿಸಿಸಿಐ, ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ನಾನು ಆಡಿದ ಎಲ್ಲಾ ತಂಡಗಳ ಸದಸ್ಯರು, ಕೋಚ್‌ಗಳು ಮತ್ತು ಸಿಬ್ಬಂದಿಗೆ ನನ್ನ ಕನಸನ್ನು ನನಸು ಮಾಡಲು ಶ್ರಮಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ನನಗೆ ಬೆಂಬಲ ನೀಡಿದ ಅಭಿಮಾನಿಗಳು, ಕುಟುಂಬದ ಸದಸ್ಯರಿಗೆ ಅನಂತ ಧನ್ಯವಾದಗಳು. ನಾನು ವಿಶ್ವ ಕ್ರಿಕೆಟ್‌ನಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

 ವಿದೇಶಿ ಲೀಗ್‌ಗಳಲ್ಲಿ ಆಡುವ ಸಾಧ್ಯತೆ

ವಿದೇಶಿ ಲೀಗ್‌ಗಳಲ್ಲಿ ಆಡುವ ಸಾಧ್ಯತೆ

ಭಾರತ ತಂಡದಿಂದ, ಐಪಿಎಲ್ ಫ್ರಾಂಚೈಸಿಗಳಿಂದ ಕೂಡ ತಿರಸ್ಕೃತವಾಗಿರುವ ಮುರಳಿ ವಿಜಯ್ ತಾನು ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಅವರು ವಿದೇಶಿ ಲೀಗ್‌ಗಳಲ್ಲಿ ಅವಕಾಶಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ.

ಭಾರತ ತಂಡ ಮತ್ತು ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಬಿಸಿಸಿಐ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ ಎನ್ನಲಾಗಿದೆ. ರಾಬಿನ್ ಉತ್ತಪ್ಪ ಸೇರಿದಂತೆ ಹಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ನಂತರ ಯುಎಇಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಲೀಗ್ ಟಿ20 ಪಂದ್ಯಾವಳಿಯಲ್ಲಿ ಆಡುತ್ತಿರುವುದನ್ನು ನೋಡಬಹುದಾಗಿದೆ.

 ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಆಟಗಾರ

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಆಟಗಾರ

ಭಾರತದ ಪರವಾಗಿ 61 ಟೆಸ್ಟ್ ಪಂದ್ಯಗಳನ್ನಾಡಿರುವ ಮುರಳಿ ವಿಜಯ್, 105 ಇನ್ನಿಂಗ್ಸ್‌ಗಳಲ್ಲಿ 38.29 ಸರಾಸರಿಯಲ್ಲಿ 3982 ರನ್‌ಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 12 ಶತಕ 15 ಅರ್ಧಶತಕಗಳನ್ನು ಗಳಿಸಿದ್ದಾರೆ.

ಅದರಲ್ಲೂ ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮುರಳಿ ವಿಜಯ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ 8 ಶತಕಗಳನ್ನು ಸಿಡಿಸಿದ್ದು, ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

17 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಅವರು 21.19 ಸರಾಸರಿಯಲ್ಲಿ 339 ರನ್ ಗಳಿಸಿದ್ದಾರೆ. 9 ಟಿ20 ಪಂದ್ಯಗಳಿಂದ 18.78 ಸರಾಸರಿಯಲ್ಲಿ 169 ರನ್ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಿದ್ದಾರೆ. 109 ಐಪಿಎಲ್‌ ಪಂದ್ಯಗಳಲ್ಲಿ 25.93 ಸರಾಸರಿಯಲ್ಲಿ 2619 ರನ್ ಗಳಿಸಿದ್ದಾರೆ.

Story first published: Monday, January 30, 2023, 15:44 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X