ಭಾರತೀಯರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ: ಟ್ರೆಂಟ್ ಬೋಲ್ಟ್ ಪ್ರತಿಕ್ರಿಯೆ

ಈ ಬಾರಿಯ ಐಪಿಎಲ್ ಟೂರ್ನಿ ಮುಂದೂಡಿಕೆಯಾದ ಕಾರಣದಿಂದಾಗಿ ಎಲ್ಲಾ ವಿದೇಶಿ ಆಟಗಾರರು ತವರಿಗೆ ಮರಳಿದ್ದಾರೆ. ಶನಿವಾರ ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಮೊದಲ ಹಂತದ ಪ್ರಯಾಣದಲ್ಲಿ ಕೆಲ ಆಟಗಾರರು ತಲುಪಿದ್ದು ಈ ತಂಡದಲ್ಲಿ ವೇಗಿ ಟ್ರೆಂಟ್ ಬೋಲ್ಟ್ ಕೂಡ ಇದ್ದರು. ತವರಿಗೆ ಮರಳಿದ ಬಳಿಕ ಮೊದಲ ಬಾರಿಗೆ ಟ್ರೆಂಟ್ ಬೋಲ್ಟ್ ಪ್ರತಿಕ್ರಿಯೆ ನೀಡಿದ್ದಾರೆ.

ಓರ್ವ ಕ್ರಿಕೆಟಿಗನಾಗಿ ಹಾಗೂ ವ್ಯಕ್ತಿಯಾಗಿ ಭಾರತ ತನಗೆ ಸಾಕಷ್ಟು ನೀಡಿದೆ. ಆದರೆ ಈ ಸಂದರ್ಭದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆಯಲ್ಲಿ ಭಾರತ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ನೋಡಲು ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಟ್ರೆಂಟ್ ಬೋಲ್ಟ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ವಾರ್ನರ್‌ರನ್ನು ನಾಯಕತ್ವದಿಂದ ವಜಾಗೊಳಿಸಿದಾಗ ನಾವ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ ಎಂದ ಹೈದರಾಬಾದ್ ಆಟಗಾರ

"ನನ್ನ ಹೃದಯ ಈಗ ಭಾರತದ ಜನರಿಗಾಗಿ ಮಿಡಿಯುತ್ತಿದೆ. ಮುಂಬೈ ಇಂಡಿಯನ್ಸ್ ಕುಟುಂಬವನ್ನು ತೊರೆಯುವಾಗ ಹಾಗೂ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟಾಗ ನನಗೆ ಬೇಸರವಾಯಿತು. ಆದರೆ ಅದ್ಯಾವುದನ್ನು ಕೂಡ ನಾನು ಈಗ ಭಾರತದ ಜನರು ಎದುರಿಸುತ್ತಿರುವ ಸಂಕಷ್ಟಕ=ಗಳಿಗೆ ಹೋಲಿಸಲು ಬಯಸುವುದಿಲ್ಲ"

"ಓರ್ವ ಕ್ರಿಕೆಟರ್ ಆಗಿ ಹಾಗೂ ವ್ಯಕ್ತಿಯಾಗಿ ನನಗೆ ಭಾರತ ಸಾಕಷ್ಟು ನೀಡಿದೆ. ಭಾರತದಲ್ಲಿರುವ ನನ್ನ ಅಭಿಮಾನಿಗಳಿಂದ ನಾನು ಪಡೆದ ಬೆಂಬಲವನ್ನು ನಾನು ಯಾವಾಗಲೂ ಮೆಚ್ಚಿಕೊಳ್ಳುತ್ತೇನೆ. ಇದೊಂದು ಬಹಳ ಕಠಿಣವಾದ ಸಂದರ್ಭ ಹಾಗೂ ಇದು ಶೀಘ್ರದಲ್ಲಿಯೇ ಉತ್ತಮ ಪರಿಸ್ಥಿತಿಯತ್ತ ಮರಳುವ ಭರವಸೆಯಿದೆ. ಸಾಧ್ಯವಾದಷ್ಟು ಶೀಘ್ರವಾಗಿ ಈ ಸುಂದರವಾದ ದೇಶಕ್ಕೆ ಮರಳಲು ಎದುರು ನೋಡುತ್ತಿದ್ದೇನೆ" ಎಂದು ಟ್ರೆಂಟ್ ಬೋಲ್ಟ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, May 9, 2021, 18:50 [IST]
Other articles published on May 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X