ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಟೀಮ್ ಇಂಡಿಯಾಗೆ ಈ 2 ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ'; ಪಣತೊಟ್ಟ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ!

My main aim is to help India win the Asia cup and world cup says Virat Kohli

ವಿರಾಟ್ ಕೊಹ್ಲಿ ಸದ್ಯ ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿಗೆಂದು ಹೊರಗುಳಿದಿದ್ದಾರೆ. ಹೌದು, ಕಳೆದ ಎರಡೂವರೆ ವರ್ಷಗಳಿಂದ ಅಂತರರಾಷ್ಟ್ರೀಯ ಶತಕ ಬಾರಿಸಲಾಗದೇ ತನ್ನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳ ಪಂದ್ಯಗಳಲ್ಲಿಯೂ ದೊಡ್ಡ ಮೊತ್ತ ಕಲೆ ಹಾಕಲಾಗದೇ ನೆಲ ಕಚ್ಚಿದ್ದರು.

ಭಾರತ vs ವಿಂಡೀಸ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್‌, ಸೋನಿ ಚಾನೆಲ್‌ಗಳಲ್ಲಿ ಪ್ರಸಾರವಾಗದಿರಲು ಇದೇ ಕಾರಣಭಾರತ vs ವಿಂಡೀಸ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್‌, ಸೋನಿ ಚಾನೆಲ್‌ಗಳಲ್ಲಿ ಪ್ರಸಾರವಾಗದಿರಲು ಇದೇ ಕಾರಣ

ಹೀಗೆ ಸತತವಾಗಿ ವಿಫಲರಾಗುತ್ತಿರುವ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದು, ಕೊಹ್ಲಿ ಕಳಪೆ ಫಾರ್ಮ್ ಕುರಿತಾಗಿ ಕೆಲ ಹಿರಿಯ ಕ್ರಿಕೆಟಿಗರು ಬೆಂಬಲಾತ್ಮಕ ಹೇಳಿಕೆಗಳನ್ನು ನೀಡಿ ಕೊಹ್ಲಿಗೆ ಬೆಂಬಲವನ್ನು ಸೂಚಿಸಿದ್ದರೆ, ಇನ್ನೂ ಕೆಲ ಹಿರಿಯ ಕ್ರಿಕೆಟಿಗರು ವಿರಾಟ್ ಕೊಹ್ಲಿಗೆ ಪದೇ ಪದೇ ಅವಕಾಶ ಕೊಟ್ಟದ್ದು ಸಾಕು ಕೆಲಸಮಯ ತಂಡದಿಂದ ಹೊರಗಿಟ್ಟು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಎಂಬ ಹೇಳಿಕೆಗಳನ್ನು ನೀಡುವುದರ ಮೂಲಕ ಕಾಲನ್ನು ಎಳೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಇಶಾನ್ ಕಿಶನ್ ಬದಲು ಈ ಇಬ್ಬರು ಉತ್ತಮರಿಗೆ ಅವಕಾಶ ನೀಡಿ ಎಂದ ಪಾಂಟಿಂಗ್ಟಿ20 ವಿಶ್ವಕಪ್‌ನಲ್ಲಿ ಇಶಾನ್ ಕಿಶನ್ ಬದಲು ಈ ಇಬ್ಬರು ಉತ್ತಮರಿಗೆ ಅವಕಾಶ ನೀಡಿ ಎಂದ ಪಾಂಟಿಂಗ್

ತಮ್ಮ ವಿರುದ್ಧ ಹಲವಾರು ಟೀಕಾಪ್ರಹಾರಗಳು ಎದುರಾಗುತ್ತಿದ್ದರೂ ಯಾವುದಕ್ಕೂ ಪ್ರತಿಕ್ರಿಯಿಸದ ವಿರಾಟ್ ಕೊಹ್ಲಿ ಇದೀಗ ತಮ್ಮ ಭವಿಷ್ಯದ ಕುರಿತು ನೂತನ ಹೇಳಿಕೆಯೊಂದನ್ನು ನೀಡುವುದರ ಮೂಲಕ ಸದ್ದು ಮಾಡುತ್ತಿದ್ದಾರೆ. ಹೌದು, ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಕುರಿತಾಗಿ ನೀಡಿರುವ ಹೇಳಿಕೆಯೊಂದರ ಟ್ವೀಟ್ ಮಾಡಿದ್ದು, ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಟ್ವೀಟ್ ಕುರಿತಾಗಿ ಕೆಲವರು ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರಾಟ್ ಕೊಹ್ಲಿಯ ಈ ಹೇಳಿಕೆಯನ್ನು ಕೂಡ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಭವಿಷ್ಯದ ಕುರಿತಾಗಿ ನೀಡಿರುವ ಹೇಳಿಕೆಯಾದರೂ ಏನು ಎಂಬುದರ ಮಾಹಿತಿ ಕೆಳಕಂಡಂತಿದೆ ಓದಿ.

ಟೀಮ್ ಇಂಡಿಯಾಗೆ ಈ 2 ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ

"ಟೀಮ್ ಇಂಡಿಯಾ ಮುಂಬರುವ ಏಷ್ಯಾ ಕಪ್ ಮತ್ತು ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲಲು ಸಹಾಯ ಮಾಡಬೇಕೆಂಬುದೇ ನನ್ನ ಗುರಿ ಹಾಗೂ ಇದಕ್ಕೆ ಏನು ಬೇಕಾದರೂ ಮಾಡಲು ನಾನು ಸಿದ್ಧನಾಗಿದ್ದೇನೆ" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಕಳಪೆ ಫಾರ್ಮ್‌ನಿಂದ ಹೊರ ಬರುವ ಮುನ್ಸೂಚನೆ ನೀಡಿದ ಕೊಹ್ಲಿ

ಕಳಪೆ ಫಾರ್ಮ್‌ನಿಂದ ಹೊರ ಬರುವ ಮುನ್ಸೂಚನೆ ನೀಡಿದ ಕೊಹ್ಲಿ

ವಿರಾಟ್ ಕೊಹ್ಲಿ ಈ ರೀತಿಯ ಹೇಳಿಕೆಯನ್ನು ನೀಡುವುದರ ಮೂಲಕ ಪ್ರಸ್ತುತ ತಾನು ಎದುರಿಸುತ್ತಿರುವ ಕಳಪೆ ಫಾರ್ಮ್‌ಗೆ ಶೀಘ್ರದಲ್ಲಿಯೇ ಅಂತ್ಯಹಾಡುವ ಸೂಚನೆಯನ್ನು ನೀಡಿದ್ದಾರೆ. ಇದೇ ವರ್ಷ ಏಷ್ಯಾ ಕಪ್ ಹಾಗೂ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು ಇದ್ದು, ಕೊಹ್ಲಿ ನೀಡಿರುವ ಹೇಳಿಕೆ ಪ್ರಕಾರ ಮುಂಬರುವ 2 ತಿಂಗಳುಗಳಲ್ಲಿಯೇ ತಾನು ಕಮ್ ಬ್ಯಾಕ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ಏಷ್ಯಾ ಕಪ್ ಮತ್ತು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು ಯಾವಾಗ?

ಏಷ್ಯಾ ಕಪ್ ಮತ್ತು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು ಯಾವಾಗ?

ಪ್ರತಿಷ್ಠಿತ ಐಸಿಸಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಇದೇ ವರ್ಷದ ಆಗಸ್ಟ್ 26ರ ಶನಿವಾರದಂದು ಆರಂಭವಾಗಲಿದ್ದು, ಸೆಪ್ಟೆಂಬರ್ 11ರ ಭಾನುವಾರದಂದು ಮುಕ್ತಾಯಗೊಳ್ಳಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಈ ಬಾರಿಯ ಏಷ್ಯಾಕಪ್ ಟೂರ್ನಿ ಅಲ್ಲಿನ ಆರ್ಥಿಕತೆಯ ಸಮಸ್ಯೆಯಿಂದಾಗಿ ಯುಎಇ ನೆಲದಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಿವೆ.


ಇನ್ನು ಪ್ರತಿಷ್ಠಿತ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕೂಡ ಇದೇ ವರ್ಷ ಜರುಗಲಿದ್ದು, ಪ್ರಥಮ ಪಂದ್ಯ ಅಕ್ಟೋಬರ್ 16ರಂದು ನಡೆಯಲಿದ್ದರೆ, ಟೂರ್ನಿಯ ಅಂತಿಮ ಪಂದ್ಯ ನವೆಂಬರ್ 13ರಂದು ನಡೆಯಲಿದೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾ ನೆಲದಲ್ಲಿ ಆಯೋಜನೆಗೊಂಡಿದೆ.

Story first published: Saturday, July 23, 2022, 19:54 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X