ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಸೋತ ಬಳಿಕ ಸುಳ್ಳು ಸುದ್ದಿ ಹರಡಿದ ಪಾಕಿಸ್ತಾನ ಅಭಿಮಾನಿ ಮೇಲೆ ಇಂಗ್ಲೆಂಡ್ ದಿಗ್ಗಜ ಕಿಡಿ

Nasser Hussain disappointed for Pakistani fan spreading fake news after Team India win against Pakistan

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಬಂದ ಅತ್ಯಮೋಘ ಬ್ಯಾಟಿಂಗ್‌ ಪ್ರದರ್ಶನದ ಕಾರಣದಿಂದಾಗಿ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ರೋಚಕ ಪಂದ್ಯವೊಂದಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಸಾಕಷ್ಟು ಏರಿಳಿತಗಳನ್ನು ಕಂಡ ಈ ಪಂದ್ಯ ಸುದೀರ್ಘ ಕಾಲ ಅಭಿಮಾನಿಗಳ ನೆನಪಿನಲ್ಲಿ ಉಳಿಯುವ ಪಂದ್ಯ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.

ಆದರೆ ಈ ಪಂದ್ಯದ ಅಂತಿಮ ಘಟ್ಟದಲ್ಲಿ ಅಂಪೈರ್‌ಗಳ ಕೆಲ ನಿರ್ಧಾರಗಳು ಪಾಕಿಸ್ತಾನ ತಂಡದ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ಅಸಮಾಧಾನ ತರಿಸಿದೆ. ಪಾಕಿಸ್ತಾನದ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಪ್ರಯತ್ನಗಳನ್ನು ನಡೆಸಿದ್ದಾರೆ. ಅದರಲ್ಲೂ ಓರ್ವ ಅಭಿಮಾನಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಹೆಸರನ್ನು ಉಲ್ಲೇಖಿಸಿ ಅವರ ಹೇಳಿಕೆಯೆಂಬಂತೆ ಟ್ವೀಟ್‌ವೊಂದನ್ನು ಮಾಡಿದ್ದು ಇದಕ್ಕೆ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.

IND vs PAK: ಸಚಿನ್ ಮಾತ್ರವಲ್ಲ, ಕೋಚ್ ದ್ರಾವಿಡ್ ದಾಖಲೆಯನ್ನೂ ಪುಡಿಪುಡಿ ಮಾಡಿದ ವಿರಾಟ್ ಕೊಹ್ಲಿIND vs PAK: ಸಚಿನ್ ಮಾತ್ರವಲ್ಲ, ಕೋಚ್ ದ್ರಾವಿಡ್ ದಾಖಲೆಯನ್ನೂ ಪುಡಿಪುಡಿ ಮಾಡಿದ ವಿರಾಟ್ ಕೊಹ್ಲಿ

ಸುಳ್ಳು ಹೇಳಿಕೆ ಉಲ್ಲೇಖಿಸಿದ ಪಾಕ್ ಅಭಿಮಾನಿ

ಸುಳ್ಳು ಹೇಳಿಕೆ ಉಲ್ಲೇಖಿಸಿದ ಪಾಕ್ ಅಭಿಮಾನಿ

ನಾಸಿರ್ ಹುಸೇನ್ ಅವರ ಪ್ರಾಮಾಣಿಕ ಹೇಳಿಕೆ ಎಂದು ಉಲ್ಲೇಖಿಸಿ ಪಾಕಿಸ್ತಾನದ ಅಭಿಮಾನಿಯೋರ್ವ ಈ ರೀತಿಯಾಗಿ ಟ್ವೀಟ್ ಮಾಡಿದ್ದ. ಇಂದು ಭಾರತ ತಂಡಕ್ಕೆ ಅನುಕೂಲವಾಗುವಂತೆ ಅಂಪಾಯರ್‌ಗಳು ಕೆಲ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಐಸಿಸಿ ಹಾಗೂ ಬಿಸಿಸಿಐಗೆ ಬೇಸರವಾಗದಿರಲು ನಾವು ಕೂಡ ಇದಕ್ಕೆ ಸುಮ್ಮನಿಸಬೇಕಾಗಿದೆ" ಎಂದು ಪಾಕಿಸ್ತಾನ ತಂಡದ ಅಭಿಮಾನಿ ಟ್ವೀಟ್ ಮಾಡಿದ್ದ.

ನಾಸಿರ್ ಹುಸೇನ್ ಕಿಡಿ

ಈ ಟ್ವೀಟ್ ಗಮನಕ್ಕೆ ಬಂದ ಕೂಡಲೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ನಾಸಿರ್ ಹುಸೇನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಈ ಹೇಲಿಕೆ ನನ್ನದಲ್ಲ ಇದು ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಟ್ವಿಟ್‌ಅನ್ನು ಡಿಲೀಟ್ ಮಾಡುವಂತೆ ನಾಸಿರ್ ಹುಸೇನ್ ಮನವಿ ಮಾಡಿದ್ದು ಎರಡು ದಿಗ್ಗಜ ತಂಡಗಳ ನಡುವಿನ ಶ್ರೇಷ್ಠ ಪಂದ್ಯಕ್ಕೆ ಅಗೌರವ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. "ಈ ಸಂದೇಶವನ್ನು ಡಿಲೀಟ್ ಮಾಡಿದರೆ ಉತ್ತಮ. ಇದು ಸುಳ್ಳು ಸುದ್ದಿ ಹಾಗೂ ತಪ್ಪು ಉಲ್ಲೇಖ. ಎರಡು ಶ್ರೇಷ್ಠ ತಂಡಗಳ ನಡುವಿನ ಅದ್ಭುತ ಪಂದ್ಯಕ್ಕೆ ತಕ್ಕನಾದ ಸಂದೇಶ ಇದಲ್ಲ"ಎಂದು ನಾಸಿರ್ ಹುಸೇನ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ತಂಡಕ್ಕೆ ಮತ್ತೆ ಆಘಾತ ನೀಡಿದ ವಿರಾಟ್ ಕೊಹ್ಲಿ

ಪಾಕಿಸ್ತಾನ ತಂಡಕ್ಕೆ ಮತ್ತೆ ಆಘಾತ ನೀಡಿದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಎಂದಿನ ಲಯಕ್ಕೆ ಮರಳಿದ್ದು ಅತ್ಯಂತ ಆತ್ಮವಿಶ್ವಾಸದಿಂದ ಕಾಣಿಸುತ್ತಿದ್ದಾರೆ. ಇನ್ನು ಪಾಕಿಸ್ತಾನದ ವಿರುದ್ಧ ಯಾವಾಗಲೂ ಅಬ್ಬರಿಸುತ್ತಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಉಗ್ರ ರೂಪವನ್ನು ತಾಳಿದ್ದರು. ಆರಂಭದಲ್ಲಿಯೇ ಭಾರತ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ನಂತರ ಹಾರ್ದಿಕ್ ಪಾಂಡ್ಯ ಜೊತೆಗೆ ಸೇರಿಕೊಂಡು ಅದ್ಭುತ ಜೊತೆಯಾಟ ನೀಡಿದ ವಿರಾಟ್ ಕೊಹ್ಲಿ ಅಂತಿಮ ಹಂತದಲ್ಲಿ ವೇಗವಾಗಿ ರನ್ ಗಳಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಆಘಾತ ನೀಡಿದರು. ಈ ಮೂಲಕ ಭಾರತ ತಂಡ ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಮತ್ತೊಂದು ಪಂದ್ಯಕ್ಕೆ ಸಜ್ಜಾದ ಟೀಮ್ ಇಂಡಿಯಾ

ಮತ್ತೊಂದು ಪಂದ್ಯಕ್ಕೆ ಸಜ್ಜಾದ ಟೀಮ್ ಇಂಡಿಯಾ

ಪಾಕಿಸ್ತಾನದ ವಿರುದ್ಧ ಸಾಧಿಸಿದ ರೋಚಕ ಗೆಲುವು ಭಾರತಕ್ಕೆ ಸಹಲವಾಗಿಯೇ ಆತ್ಮವಿಶ್ವಾಸ ಹೆಚ್ಚಿಸಿದೆ. ಯಾವುದೇ ಹಂತದಿಂದಲೂ ಮೇಲೇಳುವ ಹುಮ್ಮಸ್ಸು ತಂಡಕ್ಕೆ ದೊರೆತಿರುವುದು ಮುಂದಿನ ಪಂದ್ಯಗಳಿಗೆ ಹುರುಪು ಮೂಡಿಸಲಿದೆ. ಭಾರತ ತನ್ನ ಎರಡನೇ ಪಂದ್ಯವನ್ನು ನೆದರ್ಲೆಂಡ್ಸ್ ತಂಡದ ವಿರುದ್ಧ ಆಡಲಿದ್ದು ಆ ಪಂದ್ಯಕ್ಕೆ ಈಗಾಗಲೇ ಅಭ್ಯಾಸ ಆರಂಭಿಸಿದೆ. ಅದಾದ ಬಳಿಕ ಮುಂದಿನ ಭಾನುವಾರ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದ್ದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

Story first published: Tuesday, October 25, 2022, 10:55 [IST]
Other articles published on Oct 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X