ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾವೂ ಪೂಜಾರ, ಕೊಹ್ಲಿಯಂತೆ ಆಡಬೇಕಿದೆ: ಕಮಿನ್ಸ್

Need to bat like Pujara, Kohli in second innings-Cummins

ಮೆಲ್ಬರ್ನ್, ಡಿಸೆಂಬರ್ 28: ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಅವರು ಬ್ಯಾಟಿಂಗ್‌ಗಾಗಿ ಭಾರತದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿಯನ್ನು ಉದಾಹರಿಸಿದ್ದಾರೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾವು ಇವರಿಬ್ಬರನ್ನು ಅನುಸರಿಸಬೇಕು ಎಂದಿದ್ದಾರೆ.

ಎಂಸಿಜಿಯಲ್ಲಿ ಮಾರಕ ಬೌಲಿಂಗ್‌ ನಡೆಸಿದರ ಗುಟ್ಟು ಬಿಟ್ಟುಕೊಟ್ಟ ಬೂಮ್ರಾಎಂಸಿಜಿಯಲ್ಲಿ ಮಾರಕ ಬೌಲಿಂಗ್‌ ನಡೆಸಿದರ ಗುಟ್ಟು ಬಿಟ್ಟುಕೊಟ್ಟ ಬೂಮ್ರಾ

ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಬುಧವಾರ (ಡಿಸೆಂಬರ್ 26) ಆಂಭಗೊಂಡಿರುವ ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಬರೋಬ್ಬರಿ 443 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ಭಾರತದ ರನ್ ಏರಿದ್ದು ಪೂಜಾರ, ಕೊಹ್ಲಿ, ಮಯಾಂಕ್ ಅಗರ್ವಾಲ್ ಮತ್ತು ರೋಹಿತ್ ಶರ್ಮಾ ಅವರಿಂದ.

ವಿಕೆಟ್ ಕಾವಲಿಗೆ ನಿಂತ ಪೂಜಾರ 106 ರನ್‌ನೊಂದಿಗೆ ತನ್ನ 17ನೇ ಟೆಸ್ಟ್ ಶತಕವನ್ನು ಪೂರೈಸಿಕೊಂಡಿದ್ದರು. ಭಾರತದ ನಾಯಕ ಕೊಹ್ಲಿ ಕೂಡ 82 ರನ್ ಸೇರಿಸಿ ತಂಡದ ರನ್ ಹೆಚ್ಚಳಕ್ಕೆ ಕಾರಣವಾಗಿದ್ದರು. ಹೀಗಾಗಿ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಕೊಹ್ಲಿ, ಪೂಜಾರ ಅವರಂತೆ ಬ್ಯಾಟ್‌ ಮಾಡಿದರೆ ಮಾತ್ರ ಪಂದ್ಯದ ಗೆಲುವಿಗೆ ಅವಕಾಶವಿದೆ ಎಂಬುದನ್ನು ಆಸೀಸ್‌ ಆಟಗಾರರು ಅರಿತಿದ್ದಾರೆ.

'ಭಾರತದ ಮೊದಲ ಇನ್ನಿಂಗ್ಸ್‌ನ್ನು ನಾವು ಗಮನಿಸಿದ್ದೇವೆ. ಆ ಇನ್ನಿಂಗ್ಸ್‌ ವೇಳೆ ಪೂಜಾರ ಮತ್ತು ಕೊಹ್ಲಿಯ ತಂಡದ ಬೆಂಬಲಕ್ಕೆ ನಿಂತ ರೀತಿಯನ್ನೂ ನಾವು ನೋಡಿದ್ದೇವೆ. ಅವರಿಬ್ಬರೂ ಕ್ರೀಸಿಗೆ ಅಂಟಿನಿಂತು ಎದುರಾಳಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಉತ್ತಮ ಮೊತ್ತವನ್ನೂ ಕಲೆ ಹಾಕಿದರು' ಎಂದು ಕಮಿನ್ಸ್ ಶುಕ್ರವಾರ (ಡಿ.28) ದಿನದಾಟದ ಬಳಿಕ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡರು.

ಗಂಗೂಲಿ ದಾಖಲೆ ಸರಿಗಟ್ಟಿ, ಲಕ್ಷ್ಮಣ್ ದಾಖಲೆ ಸರಿದೂಗಿಸಿದ ಚೇತೇಶ್ವರಗಂಗೂಲಿ ದಾಖಲೆ ಸರಿಗಟ್ಟಿ, ಲಕ್ಷ್ಮಣ್ ದಾಖಲೆ ಸರಿದೂಗಿಸಿದ ಚೇತೇಶ್ವರ

'ಹೆಚ್ಚು ರನ್ ಗಳಿಬೇಕಾದರೆ ನಾವು ಹೆಚ್ಚು ಎಸೆತಗಳನ್ನು ಎದುರಿಸಬೇಕು. ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಬೇಕು. ಆದರೆ ಇದಕ್ಕೆ ಹಿಂದಿನ ಪರಿಶ್ರಮ ಅತ್ಯಗತ್ಯ. ಹೆಚ್ಚುಕಾಲ ಕ್ರೀಸ್‌ನಲ್ಲಿ ನಿಂತಷ್ಟೂ ಎದುರಾಳಿ ಒತ್ತಡಕ್ಕೀಡಾಗುತ್ತಾನೆ. ಹೀಗಾಗಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾವೂ ಪೂಜಾರ, ಕೊಹ್ಲಿಯಂತೆ ಆಡಬೇಕು' ಎಂದು ಕಮಿನ್ಸ್ ಹೇಳಿಕೊಂಡಿದ್ದಾರೆ.

ಆಸೀಸ್ ಪ್ರಥಮ ಇನ್ನಿಂಗ್ಸ್‌ ವೇಳೆ ಜಸ್‌ಪ್ರೀತ್‌ ಬೂಮ್ರಾ ಮಾರಕ ಬೌಲಿಂಗ್‌ ನಡೆಸಿದ್ದರಿಂದ ಆತಿಥೇಯರು 151 ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ದರು. ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿರುವ ಭಾರತ ಕೆಟ್ಟ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದೆ. ಶುಕ್ರವಾರ (ಡಿ.28) ದಿನದಾಂತ್ಯಕ್ಕೆ ಭಾರತ 27 ಓವರ್‌ಗಳಲ್ಲಿ 5 ವಿಕೆಟ್ ಕಳೆದು 54 ರನ್ ಗಳಿಸಿತ್ತು.

Story first published: Friday, December 28, 2018, 20:27 [IST]
Other articles published on Dec 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X