ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಧಾನ ಮಂತ್ರಿ ಉಡುಗೊರೆಗಳ ಹರಾಜಿನಲ್ಲಿ ಬೃಹತ್ ಮೊತ್ತ ಬಾಚಿದ ನೀರಜ್ ಚೋಪ್ರಾ ಜಾವೆಲಿನ್!

Neeraj Chopras javelin got huge bid price in E-auction of PMs gifts

ನವದೆಹಲಿ: ಕಳೆದ ಸೆಪ್ಟೆಂಬರ್ 17ರಂದು ಆರಂಭವಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಗೊರೆಗಳ ಇ - ಹರಾಜಿಗೆ ಅಕ್ಟೋಬರ್ 7ರಂದು ತೆರೆ ಬಿದ್ದಿದೆ. ಈ ಹರಾಜಿನಲ್ಲಿ ಸರ್ದಾರ್ ಪಟೇಲ್ ಅವರ ಶಿಲ್ಪಕಲೆಗೆ ಅತಿಹೆಚ್ಚು ಬಿಡ್‌ಗಳು ನಡೆದಿವೆ ಮತ್ತು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ನೀರಜ್ ಚೋಪ್ರಾ ಅವರ ಜಾವೆಲಿನ್ ಅತಿ ದೊಡ್ಡ ಮೊತ್ತಕ್ಕೆ ಹರಾಜಾಗಿದೆ.

ಸರ್ದಾರ್ ಪಟೇಲ್ ಶಿಲ್ಪಕಲೆಯು 140 ಬಿಡ್‌ಗಳನ್ನು ಪಡೆದುಕೊಳ್ಳುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಗೊರೆಗಳ ಇ - ಹರಾಜಿನಲ್ಲಿ ಅತಿ ಹೆಚ್ಚು ಬಿಡ್‌ಗಳನ್ನು ಪಡೆದುಕೊಂಡ ಉಡುಗೊರೆ ಎನಿಸಿಕೊಂಡರೆ, ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಜಾವೆಲಿನ್ ಬರೋಬ್ಬರಿ 1.5 ಕೋಟಿ ರೂ. ಗೆ ಹರಾಜಾಗಿದೆ.

ಕೆಕೆಆರ್ ಗೆದ್ದ ನಂತರವೂ ಮುಂಬೈಗಿದೆ ಪ್ಲೇಆಫ್ ಅವಕಾಶ; ಪಂದ್ಯದ ಟಾಸ್ ಇಡೀ ಲೆಕ್ಕಾಚಾರವನ್ನೇ ಉಲ್ಟಾ ಮಾಡಲಿದೆ!ಕೆಕೆಆರ್ ಗೆದ್ದ ನಂತರವೂ ಮುಂಬೈಗಿದೆ ಪ್ಲೇಆಫ್ ಅವಕಾಶ; ಪಂದ್ಯದ ಟಾಸ್ ಇಡೀ ಲೆಕ್ಕಾಚಾರವನ್ನೇ ಉಲ್ಟಾ ಮಾಡಲಿದೆ!

ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಗೊರೆಗಳ ಇ - ಹರಾಜಿನಲ್ಲಿ ಸುಮಾರು 1348 ಉಡುಗೊರೆಗಳ ಹರಾಜನ್ನು ನಡೆಸಲಾಯಿತು. ಇದರಲ್ಲಿ ಮರದ ಗಣೇಶನ ಪ್ರತಿಮೆ 117 ಬಿಡ್‌ಗಳು, ಪುಣೆ ಮೆಟ್ರೋ ಮಾರ್ಗದ ನೆನಪಿನ ಕಾಣಿಕೆ 104 ಬಿಡ್‌ಗಳು ಮತ್ತು ವಿಜಯ ಜ್ವಾಲೆಯ ಸ್ಮರಣಿಕೆ 98 ಬಿಡ್‌ಗಳನ್ನು ಪಡೆದುಕೊಂಡವು.

ಇನ್ನು ಇತ್ತೀಚೆಗಷ್ಟೇ ನಡೆದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಸಾಧನೆ ಮಾಡಿದ್ದ ನೀರಜ್ ಚೋಪ್ರಾ ಅವರ ಜಾವೆಲಿನ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಗೊರೆಗಳ ಇ - ಹರಾಜಿನಲ್ಲಿ 1.5 ಕೋಟಿಗೆ ಹರಾಜಾಗುವ ಮೂಲಕ ಅತಿ ದೊಡ್ಡ ಮೊತ್ತಕ್ಕೆ ಹರಾಜಾದ ಉಡುಗೊರೆ ಎನಿಸಿಕೊಂಡಿದೆ. ಉಳಿದಂತೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಸಹಿ ಮಾಡಿದ್ದ ಅಂಗವಸ್ತ್ರವು 1 ಕೋಟಿ, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಾಕ್ಸರ್ ಲವ್ಲಿನಾ ಬೊರ್ಗಹೈನ್ ಅವರ ಕೈಗವಸುಗಳು 91 ಲಕ್ಷ ಮತ್ತು ಸುಮಿತ್ ಅಂಟಿಲ್ ಅವರ ಜಾವೆಲಿನ್ 1.2 ಕೋಟಿಗೆ ಹರಾಜಾದವು.

ಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರ

KL Rahul ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

ಹೀಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಗೊರೆಗಳ ಇ - ಹರಾಜಿನಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ಹಲವಾರು ಉಡುಗೊರೆಗಳನ್ನು ಹರಾಜು ಮಾಡಲಾಗಿದ್ದು, ಇದರಿಂದ ಸಂಗ್ರಹಿಸಲ್ಪಟ್ಟ ಎಲ್ಲಾ ಹಣವನ್ನು ಗಂಗಾ ನದಿಯನ್ನು ಸ್ವಚ್ಛಗೊಳಿಸಲು ನಡೆಸಲಾಗುತ್ತಿರುವ ನಮಾಮಿ ಗಂಗೆ ಯೋಜನೆಗೆ ನೀಡಲಾಗಿದೆ.

Story first published: Friday, October 8, 2021, 12:02 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X