ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವನಿತೆಯರ ಕ್ರಿಕೆಟ್‌ನಲ್ಲಿಯೂ ಪುಷ್ಪ ಹವಾ; 'ತಗ್ಗೆದೆ ಲೇ' ಎಂದ ನೇಪಾಳಿ ಕ್ರಿಕೆಟ್ ಆಟಗಾರ್ತಿ

Nepali cricketer Sita Rana Magar celebrates wicket with Pushpa move

ಪುಷ್ಪ ಸಿನಿಮಾದ ನಟ ಅಲ್ಲು ಅರ್ಜುನ್ ಅವರ ಜನಪ್ರಿಯ ತಗ್ಗೆದೆಲೇ ಡೈಲಾಗ್‌ಗೆ ಈಗಾಗಲೇ ಹಲವಾರು ಕ್ರಿಕೆಟಿಗರು ಹಾಗೂ ಫುಟ್‌ಬಾಲ್ ಆಟಗಾರರು ಡಬ್ ಸ್ಮ್ಯಾಶ್ ಮತ್ತು ಕ್ರೀಡಾಂಗಣಗಳಲ್ಲಿ ಅನುಕರಣೆ ಮಾಡಿರುವ ಹಲವಾರು ಉದಾಹರಣೆಗಳಿವೆ. ಮೊದಲಿಗೆ ಭಾರತೀಯ ಕ್ರಿಕೆಟ್ ಆಟಗಾರರಿಂದ ಶುರುವಾದ ಪುಷ್ಪ ಸಿನಿಮಾದ ತಗ್ಗೆದೆಲೇ ಕ್ರೇಜ್ ವಿಶ್ವದ ಮೂಲೆ ಮೂಲೆಗೂ ತಲುಪಿದೆ.

ಇದೀಗ ಪ್ರಸ್ತುತ ನಡೆಯುತ್ತಿರುವ ಫೇರ್ ಬ್ರೇಕ್ ಗ್ಲೋಬಲ್ ಕ್ರಿಕೆಟ್ ಲೀಗ್‌ನಲ್ಲಿಯೂ ಕ್ರಿಕೆಟ್ ಆಟಗಾರ್ತಿಯೋರ್ವರು ಪುಷ್ಪ ಚಿತ್ರದ ಇದೇ ತಗ್ಗೆದೆಲೇ ಡೈಲಾಗ್‌ಗೆ ಅನುಕರಣೆ ಮಾಡಿ ವೈರಲ್ ಆಗಿದ್ದಾರೆ. ಹೌದು, ಇಂದು ( ಮೇ 10 ) ನಡೆದ ಫೇರ್ ಬ್ರೇಕ್ ಗ್ಲೋಬಲ್ ಲೀಗ್‌ನಲ್ಲಿ ನಡೆದ ವಾರಿಯರ್ಸ್ vs ಸ್ಪಿರಿಟ್ ನಡುವಿನ ಪಂದ್ಯದಲ್ಲಿ ನೇಪಾಳ ಮೂಲದ ಕ್ರಿಕೆಟ್ ಆಟಗಾರ್ತಿ ಸೀತಾ ರಾಣಾ ಮಗರ್ ಕ್ಯಾಚ್ ಹಿಡಿದಾಗ ಮತ್ತು ವಿಕೆಟ್ ಪಡೆದಾಗ ಪುಷ್ಪ ಚಿತ್ರದ ಈ ಅನುಕರಣೆಯನ್ನು ಮಾಡಿ ಸಂಭ್ರಮಿಸಿದ್ದಾರೆ. ಇನ್ನು ಈ ವಿಡಿಯೋವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಾಕಷ್ಟು ವೈರಲ್ ಆಗಿದೆ ಎಂದು ಬರೆದುಕೊಂಡಿದೆ.

ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!

ಇನ್ನು ಈ ಫೇರ್ ಬ್ರೇಕ್ ಗ್ಲೋಬಲ್ ಕ್ರಿಕೆಟ್ ಟೂರ್ನಿ ಐಸಿಸಿ ಅನುದಾನಿತ ಪಂದ್ಯಾವಳಿಯಾಗಿದ್ದು, ಮೇ 1ರಿಂದ ಮೇ15ರವರೆಗೆ ಹದಿನೈದು ದಿನಗಳ ಕಾಲ ನಡೆಯಲಿದ್ದು, 6 ತಂಡಗಳು ಭಾಗವಹಿಸಿವೆ ಹಾಗೂ ಈ ತಂಡಗಳ ನಡುವೆ ಒಟ್ಟು 19 ಪಂದ್ಯಗಳು ನಡೆಯಲಿದ್ದು, ಎಲ್ಲಾ ಪಂದ್ಯಗಳೂ ಸಹ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ಆಯೋಜನೆಯಾಗಿವೆ.

Rashid Khan ಗುಜರಾತ್ ತಂಡಕ್ಕೆ ಕೊಟ್ಟ ಕೊಡುಗೆ ಇದೇ | Oneindia Kannada

ಸೀತಾ ರಾಣಾ ಮಗರ್ ಕಿರು ಪರಿಚಯ
ನೇಪಾಳಿ ಕ್ರಿಕೆಟ್ ಆಟಗಾರ್ತಿಯಾಗಿರುವ ಸೀತಾ ರಾಣಾ ಮಗರ್ 30 ವರ್ಷ ವಯಸ್ಸಿನವರಾಗಿದ್ದು, ಆಲ್ ರೌಂಡರ್ ಆಟಗಾರ್ತಿಯಾಗಿದ್ದಾರೆ. ಇಲ್ಲಿಯವರೆಗೂ ಒಟ್ಟು 21 ಮಹಿಳಾ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸಿತಾ ರಾಣಾ ಮಗರ್ 439 ರನ್ ಕಲೆಹಾಕಿದ್ದು, ಅಜೇಯ 82 ರನ್ ಸಿತಾ ರಾಣಾ ಮಗರ್ ಕಲೆಹಾಕಿರುವ ಅತ್ಯಧಿಕ ಟಿ ಟ್ವೆಂಟಿ ರನ್ ಆಗಿದೆ. ಇನ್ನು ಬೌಲಿಂಗ್‌ನಲ್ಲಿ 21 ಪಂದ್ಯಗಳ ಪೈಕಿ 363 ಎಸೆತಗಳನ್ನು ಎಸೆದಿರುವ ಸೀತಾ ರಾಣಾ ಮಗರ್ 216 ರನ್ ನೀಡಿ 21 ವಿಕೆಟ್ ಕಬಳಿಸಿದ್ದಾರೆ. 10 ರನ್ ನೀಡಿ 3 ವಿಕೆಟ್ ಪಡೆದಿರುವುದು ಸೀತಾ ರಾಣಾ ಮಗರ್ ನೀಡಿರುವ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

Story first published: Wednesday, May 11, 2022, 9:23 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X