ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs SA T20: ಟಿವಿ ಮಾರಿ ರಿಮೋಟ್ ತಗೊಂಡಂಗಾಯ್ತು: ಮೊಹಮ್ಮದ್ ಸಿರಾಜ್ ಆಯ್ಕೆಗೆ ನೆಟ್ಟಿಗರ ಟ್ರೋಲ್

Netizens Reacts With Memes After Mohammed Siraj replaces Bumrah In T20 Series Against South Africa

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯಿಂದ ಭಾರತದ ಹಿರಿಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.

ಅಂತಿಮ ಓವರ್‌ಗಳಲ್ಲಿ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಡುತ್ತಿರುವುದರಿಂದ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ಇತ್ತೀಚೆಗೆ ಹೆಣಗಾಡುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಯುವ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ರನ್‌ ಗಳಿಕೆಗೆ ಕಡಿವಾಣ ಹಾಕಿದ್ದಲ್ಲದೆ, ಆರಂಭದಲ್ಲೇ ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ಸೋಲಿಗೆ ಕಾರಣವಾಗಿದ್ದರು.

ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಪ್ರಮುಖ ದಾಖಲೆ ಸರಿಗಟ್ಟಿದ ಬಾಬರ್ ಅಜಂಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಪ್ರಮುಖ ದಾಖಲೆ ಸರಿಗಟ್ಟಿದ ಬಾಬರ್ ಅಜಂ

ಗಾಯದ ಗಂಭೀರತೆಯಿಂದಾಗಿ ಬುಮ್ರಾ ಆಸ್ಟ್ರೇಲಿಯಾದಲ್ಲಿ ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ವೇಗಿಯು ನಾಲ್ಕರಿಂದ ಆರು ತಿಂಗಳುಗಳವರೆಗೆ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

ಉಳಿದ ಎರಡು ಟಿ20 ಪಂದ್ಯಗಳಿಗೆ ಟೀಮ್ ಇಂಡಿಯಾ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವಕಾಶ ಪಡೆದಿದ್ದಾರೆ. ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಸಿರಾಜ್‌ಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಒದಗಿ ಬಂದಿದೆ.

ಸಿರಾಜ್ ಅವರ ಸೇರ್ಪಡೆಯು ವೇಗದ ಬೌಲಿಂಗ್‌ನಲ್ಲಿ ಹೆಚ್ಚಿನ ಶಕ್ತಿ ತುಂಬುತ್ತದೆ ಎಂದು ಎಂದು ತಂಡದ ನಿರ್ವಹಣೆ ಮತ್ತು ಅಭಿಮಾನಿಗಳು ಆಶಾವಾದ ವ್ಯಕ್ತಪಡಿಸುತ್ತಾರೆ.

 2021ರ ಐಪಿಎಲ್‌ನಲ್ಲಿ ಯಶಸ್ಸು ಕಂಡಿದ್ದ ಸಿರಾಜ್

2021ರ ಐಪಿಎಲ್‌ನಲ್ಲಿ ಯಶಸ್ಸು ಕಂಡಿದ್ದ ಸಿರಾಜ್

2021ರ ಐಪಿಎಲ್‌ ಸೀಸನ್‌ನಲ್ಲಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರು ನಿಖರವಾದ ಯಾರ್ಕರ್‌ಗಳು, ಲೈನ್ ಮತ್ತು ಲೆಂಗ್ತ್‌ನಲ್ಲಿ ಬದಲಾವಣೆ ಮಾಡಿಕೊಂಡು ಅಂತಿಮ ಓವರ್‌ಗಳಲ್ಲಿ ಯಶಸ್ಸನ್ನು ಸಾಧಿಸಿದ್ದರು. 15 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದ ಸಿರಾಜ್, 6.78 ಎಕನಾಮಿ ಹೊಂದಿದ್ದರು.

ಆದರೆ, 2022ರ ಐಪಿಎಲ್‌ ಋತುವಿನಲ್ಲಿ ಸಿರಾಜ್‌ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. ಭಾರತದಲ್ಲಿ ನಡೆದ ಐಪಿಎಲ್‌ನಲ್ಲಿ 15 ಪಂದ್ಯಗಳನ್ನಾಡಿದ ಅವರು, 9 ವಿಕೆಟ್ ಪಡೆದರು. ಆದರೆ, 10.08 ಎಕಾನಮಿ ಹೊಂದಿರುವುದು, ಹೆಚ್ಚಿನ ರನ್ ಬಿಟ್ಟುಕೊಟ್ಟದ್ದು ತಂಡಕ್ಕೆ ತಲೆನೋವಾಗಿತ್ತು.

ಭಾರತ vs ದ. ಆಫ್ರಿಕಾ: ಟಿ20 ಸರಣಿಯ 2ನೇ ಪಂದ್ಯಕ್ಕೆ ಮಳೆ ಅಡ್ಡಿ?: ಪಿಚ್ ರಿಪೋರ್ಟ್ ಮಾಹಿತಿ

ಸಿಕ್ಕಿರುವ ಅವಕಾಶ ಬಳಸಿಕೊಳ್ಳಬೇಕು

ಸಿಕ್ಕಿರುವ ಅವಕಾಶ ಬಳಸಿಕೊಳ್ಳಬೇಕು

2021ರ ಐಪಿಎಲ್ ಋತುವಿನಂತೆ ಅವರು ಉತ್ತಮ ಪ್ರದರ್ಶನ ನೀಡಿದರೆ ಭಾರತಕ್ಕೆ ಅನುಕೂಲವಾಗುತ್ತದೆ. ಆದರೆ, 2022ರ ಐಪಿಎಲ್ ಪಂದ್ಯಗಳಂತೆ ಹೆಚ್ಚಿನ ರನ್ ಬಿಟ್ಟುಕೊಟ್ಟರೆ ಮಾತ್ರ ಭಾರತಕ್ಕೆ ಹೊಸ ಚಿಂತೆ ಶುರುವಾಗುತ್ತದೆ.

ದಕ್ಷಿಣ ಆಫ್ರಿಕಾ ಸರಣಿಯ ತಂಡದಲ್ಲಿ ಮೊಹಮ್ಮದ್ ಸಿರಾಜ್ ಸೇರ್ಪಡೆಯ ಬಗ್ಗೆ ತಿಳಿದ ನಂತರ, ಅಭಿಮಾನಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹಲವು ಮೆಮೆಗಳನ್ನು ಹಂಚಿಕೊಳ್ಳುವ ಮೂಲಕ ಸಿರಾಜ್ ಆಯ್ಕೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮೊಹಮ್ಮದ್ ಸಿರಾಜ್‌ರನ್ನು ಟ್ರೋಲ್ ಮಾಡಿದ ನೆಟ್ಟಿಗರು

ಮೊಹಮ್ಮದ್ ಸಿರಾಜ್‌ರನ್ನು ಟ್ರೋಲ್ ಮಾಡಿದ ನೆಟ್ಟಿಗರು

ಟ್ವಿಟರ್ ಬಳಕೆದಾರರೊಬ್ಬರು ರಿಮೋಟ್ ಕೊಳ್ಳಲು ಟಿವಿ ಮಾರಿದಂತಾಯಿತು ಎಂದು ಹೇಳಿದ್ದಾರೆ. ಬುಮ್ರಾ ಬದಲಿಗೆ ಸಿರಾಜ್‌ರನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರರು ಯಾವ ಮಾನದಂಡದ ಆಧಾರದ ಮೇಲೆ ಮೊಹಮ್ಮದ್ ಸಿರಾಜ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಸಿರಾಜ್‌ಗಿಂತ ಉತ್ತಮ ಬೌಲರ್ ಇದ್ಯಾಗ್ಯೂ ಸಿರಾಜ್‌ರನ್ನು ಆಯ್ಕೆ ಮಾಡಬಾರದಿತ್ತು ಎಂದು ಹೇಳಿದ್ದಾರೆ.

Story first published: Friday, September 30, 2022, 23:45 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X