ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ಭಾರತದ ನೂತನ ಜೆರ್ಸಿ ಅಕ್ಟೋಬರ್ 13ಕ್ಕೆ ಬಿಡುಗಡೆ

New Indian team jersey for T20 World Cup to be revealed on October 13

ನವದೆಹಲಿ: ಮುಂಬರಲಿರುವ ಟಿ20 ವಿಶ್ವಕಪ್‌ಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಟೀಮ್ ಇಂಡಿಯಾದ ನೂತನ ಜೆರ್ಸಿ ಬಿಡುಗಡೆ ಮಾಡಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ತಂಡ ಧರಿಸಲಿರುವ ನೂತನ ಜೆರ್ಸಿಯನ್ನು ಅಕ್ಟೋಬರ್‌ 13ರಂದು ಬಿಡುಗಡೆ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ಚಚ್ಚಿದ ಇಶಾನ್ ಕಿಶನ್!ಐಪಿಎಲ್‌ನಲ್ಲಿ ಅತೀ ವೇಗದ ಅರ್ಧ ಶತಕ ಚಚ್ಚಿದ ಇಶಾನ್ ಕಿಶನ್!

ಟಿ20 ವಿಶ್ವಕಪ್‌ ಟೂರ್ನಿ ಅಕ್ಟೋಬರ್ 17ರಿಂದ ಯುಎಇ ಮತ್ತು ಓಮನ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಒಟ್ಟು 16 ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಸೆಣಸಾಡಲಿವೆ. ಅಕ್ಟೋಬರ್ 13ರಂದು ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆಯಾಗಲಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಭಾರತದ ಕಿಟ್ ಸ್ಪಾನ್ಸರ್ ಎಂಪಿಎಲ್ ಮತ್ತು ಬಿಸಿಸಿಐ ನೂತನ ಜೆರ್ಸಿ ಬಿಡುಗಡೆ ಮಾಡಲಿವೆ.

ನೀವು ಕಾತರರಾಗಿದ್ದೀರಾ?
"ಇದೇ ಸಂದರ್ಭಕ್ಕಾಗಿ ನಾವೆಲ್ಲರೂ ಕಾಯುತ್ತಿದ್ದೆವು. ಎಂಪಿಎಲ್ ಸ್ಪೋರ್ಟ್ಸ್‌ನಲ್ಲಿ ನಮ್ಮೊಂದಿಗೆ ಜೊತೆಯಾಗಿ, ನಾವು ನಿಮ್ಮೊಂದಿಗೆ ಅಕ್ಟೋಬರ್‌ 13ರಂದು ದೊಡ್ಡದೊಂದು ವಿಚಾರ ಬಹಿರಂಗಪಡಿಸಲಿದ್ದೇವೆ. ಇದಕ್ಕೆ ನೀವು ಉತ್ಸುಕರಾಗಿ ಇದ್ದೀರಿ ತಾನೆ?," ಎಂದು ಬಿಸಿಸಿಐ ಮಾಡಿರುವ ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಐಪಿಎಲ್ ಮುಗಿದು ಎರಡು ದಿನಗಳ ಬಳಿಕ ಟಿ20 ವಿಶ್ವಕಪ್ ಶುರುವಾಗಲಿದೆ.

ಲಾಸ್ಟ್ ಬಾಲ್ ಥ್ರಿಲ್ಲರ್ ಗೆದ್ದ ಆರ್‌ಸಿಬಿ: ಡೆಲ್ಲಿ ಆವೇಶ ಇಳಿಸಿದ ಭರತ್, ಮ್ಯಾಕ್ಸ್‌ವೆಲ್ಲಾಸ್ಟ್ ಬಾಲ್ ಥ್ರಿಲ್ಲರ್ ಗೆದ್ದ ಆರ್‌ಸಿಬಿ: ಡೆಲ್ಲಿ ಆವೇಶ ಇಳಿಸಿದ ಭರತ್, ಮ್ಯಾಕ್ಸ್‌ವೆಲ್

ಟೀಮ್ ಇಂಡಿಯಾಕ್ಕೆ ಕಿಟ್ ಸ್ಪಾನ್ಸರ್ ಆಗಿ ಎಂಪಿಎಲ್ ಸ್ಪೋರ್ಟ್ಸ್ ಇದೆ. ಡಿಸೆಂಬರ್ 2023ರ ವರೆಗೂ ಎಂಪಿಎಲ್ ಭಾರತೀಯ ತಂಡಕ್ಕೆ ಕಿಟ್ ಸ್ಪಾನ್ಸರ್ ಆಗಿ ಇರಲಿದೆ. ಸದ್ಯ ವೈಟ್‌ಬಾಲ್ ಕ್ರಿಕೆಟ್‌ಗಾಗಿ ಟೀಮ್ ಇಂಡಿಯಾವು ರೆಟ್ರೋ ಜೆರ್ಸಿ ಧರಿಸುತ್ತಿದೆ. ನೀಲಿ ಬಣ್ಣದ ಈ ಜೆರ್ಸಿಯ ಭುಜದ ಭಾಗದಲ್ಲಿ ನೀಲಿ, ಹಸಿರು, ಬಿಳಿ, ಕೆಂಪು ಗೆರೆಗಳಿವೆ. 1992ರ ವಿಶ್ವಕಪ್‌ ಕಿಟ್‌ನಿಂದ ಸ್ಫೂರ್ತಿಯಾಗಿ ಈ ಜೆರ್ಸಿಯನ್ನು ಬಿಸಿಸಿಐ ಹೊರ ತಂದಿತ್ತು.

Story first published: Saturday, October 9, 2021, 10:42 [IST]
Other articles published on Oct 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X