ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾವೈರಸ್ ಪರೀಕ್ಷೆಗಾಗಿ ಕಿವೀಸ್ ವೇಗಿ ಲಾಕಿ ಫರ್ಗುಸನ್‌ಗೆ ನಿರ್ಬಂಧ!

New Zealand bowler Lockie Ferguson quarantined for coronavirus test

ಸಿಡ್ನಿ, ಮಾರ್ಚ್ 14: ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್‌ಗೆ ಕೊರೊನಾ ವೈರಸ್ ಭೀತಿ ಶುರುವಾಗಿದೆ. ಗಂಟಲು ನೋವು ಕಾಣಿಸಿಕೊಂಡ ಬಳಿಕ ಫರ್ಗುಸನ್ ಅವರನ್ನು ಪತ್ಯೇಕವಾಗಿರಿ ಕೊರೊನಾವೈರಸ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ನ್ಯೂಜಿಲೆಂಡ್ vs ಆಸ್ಟ್ರೇಲಿಯಾ ಮೊದಲನೇ ಏಕದಿನ ಪಂದ್ಯದ ಬಳಿಕ ಈ ಬೆಳವಣಿಗೆ ನಡೆದಿದೆ.

ಕೊರೋನಾ ಕಾಟಕ್ಕೆ ಮಹತ್ವದ ಕ್ರಿಕೆಟ್ ಟೂರ್ನಿ ಬಲಿ: ದಿಗ್ಗಜರ ಕ್ರಿಕೆಟ್ ಕ್ಯಾನ್ಸಲ್ಕೊರೋನಾ ಕಾಟಕ್ಕೆ ಮಹತ್ವದ ಕ್ರಿಕೆಟ್ ಟೂರ್ನಿ ಬಲಿ: ದಿಗ್ಗಜರ ಕ್ರಿಕೆಟ್ ಕ್ಯಾನ್ಸಲ್

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡ, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮೊದಲ ಏಕದಿನ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 71 ರನ್‌ಗಳಿಂದ ಗೆದ್ದಿತ್ತು. ಪಂದ್ಯದ ವೇಳೆ ಫರ್ಗುಸನ್‌ಗೆ ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ನಡೆಸಲು ಕಿವೀಸ್ ನಿರ್ಧರಿಸಿದೆ.

ಬೆಂಗಾಲ್ ಸೋಲಿಸಿ ಚೊಚ್ಚಲ ರಣಜಿ ಟ್ರೋಫಿ ಜಯಿಸಿದ ಸೌರಾಷ್ಟ್ರಬೆಂಗಾಲ್ ಸೋಲಿಸಿ ಚೊಚ್ಚಲ ರಣಜಿ ಟ್ರೋಫಿ ಜಯಿಸಿದ ಸೌರಾಷ್ಟ್ರ

ಆರೋಗ್ಯ ಸಮಸ್ಯೆಯ ಭೀತಿಯಿರುವುದರಿಂದ ಲಾಕಿ ಫರ್ಗುಸನ್‌ ಅವರನ್ನು ತಂಡದ ಹೋಟೆಲ್‌ನ ಪ್ರತ್ಯೇಕ ರೂಮ್‌ನಲ್ಲಿ ಮುಂದಿನ 24 ಗಂಟೆಗಳ ಕಾಲ ಇಡಲಾಗುವುದು ಎಂದು ನ್ಯೂಜಿಲೆಂಡ್ ಕ್ರಿಕೆಟ್‌ ಮಾಹಿತಿ ನೀಡಿದೆ. ಆಸ್ಟ್ರೇಲಿಯಾ ವೇಗಿ ಕೇನ್ ರಿಚರ್ಡ್ಸನ್‌ಗೂ ವೈರಸ್ ಭೀತಿ ಶುರುವಾಗಿತ್ತು. ಆದರೆ ಅವರ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿರುವುದರಿಂದ ರಿಚರ್ಡ್ಸನ್ ನಿರಾಳರಾಗಿದ್ದಾರೆ.

ಕೊರೊನಾ ಭೀತಿ: ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿ ರದ್ದುಕೊರೊನಾ ಭೀತಿ: ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿ ರದ್ದು

'ಒಮ್ಮೆ ಪರೀಕ್ಷೆಯ ಫಲಿತಾಂಶ ಬಂದು ರೋಗ ನಿರ್ಣಯವಾದ ಬಳಿಕ ಲಾಕಿ ಫರ್ಗುಸನ್ ತಂಡಕ್ಕೆ ಮರಳುತ್ತಾರೋ ಇಲ್ಲವೋ ಎನ್ನವು ಬಗ್ಗೆ ನಿರ್ಧರಿಸಲಾಗುವುದು,' ಎಂದು ನ್ಯೂಜಿಲೆಂಡ್ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಲಾಕಿ, 2 ವಿಕೆಟ್‌ಗಳನ್ನು ಮುರಿದಿದ್ದರು.

ಟೋಕಿಯೋ ಒಲಿಂಪಿಕ್ ಮುಂದೂಡಲು ಟ್ರಂಪ್ ಇತ್ತ ಸಲಹೆ ಬದಿಗಿಟ್ಟ ಜಪಾನ್ಟೋಕಿಯೋ ಒಲಿಂಪಿಕ್ ಮುಂದೂಡಲು ಟ್ರಂಪ್ ಇತ್ತ ಸಲಹೆ ಬದಿಗಿಟ್ಟ ಜಪಾನ್

ವಿಶ್ವದಗಲ ಹಬ್ಬಿರುವ ಕೊರೊನಾ ವೈರಸ್ ನಿಂದಾಗಿ ಕ್ರೀಡಾಲೋಕ ತಲ್ಲಣಿಸಿದೆ. ಪ್ರಮುಖ ಕ್ರೀಡಾಸ್ಪರ್ಧೆಗಳೆಲ್ಲ ರದ್ದಾಗಿವೆ. ಕೆಲವು ಕ್ರೀಡಾಸ್ಪರ್ಧೆಗಳು ಮುಂದೂಡಲ್ಪಡುತ್ತಿವೆ. ಶುಕ್ರವಾರ (ಮಾರ್ಚ್ 13) ನಡೆದ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದ ವೇಳೆಯೂ ಮೈದಾನದ 48,000 ಸೀಟ್‌ಗಳು ಖಾಲಿ ಖಾಲಿ ಇದ್ದವು.

Story first published: Saturday, March 14, 2020, 10:47 [IST]
Other articles published on Mar 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X