ಟಿ ಟ್ವೆಂಟಿ ಸರಣಿಯನ್ನಾಡಲು ಬಾಂಗ್ಲಾ ತಲುಪಿದ ನ್ಯೂಜಿಲೆಂಡ್‌ಗೆ ಆರಂಭದಲ್ಲಿಯೇ ಆಘಾತ!

ಇತ್ತೀಚೆಗಷ್ಟೇ ಇಂಗ್ಲೆಂಡ್ ನೆಲದಲ್ಲಿ ನಡೆದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡ ನಂತರ ಇದೀಗ ನ್ಯೂಜಿಲೆಂಡ್ ತನ್ನ ಮುಂದಿನ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಾಡಲು ಬಾಂಗ್ಲಾ ಪ್ರವಾಸವನ್ನು ಕೈಗೊಂಡಿದೆ. 4 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಲು ನ್ಯೂಜಿಲೆಂಡ್ ತಂಡದ ಆಟಗಾರರು ಬಾಂಗ್ಲಾಕ್ಕೆ ಪ್ರವಾಸವನ್ನು ಬೆಳೆಸಿದ್ದು ಢಾಕಾ ನಗರವನ್ನು ತಲುಪಿದ್ದಾರೆ.

ಹೀಗೆ ಬಾಂಗ್ಲಾದೇಶ ತಲುಪಿದ್ದ ನ್ಯೂಜಿಲೆಂಡ್ ಆಟಗಾರರಿಗೆ ಸರಣಿ ಆರಂಭವಾಗುವ ಮುನ್ನವೇ ಆಘಾತ ಎದುರಾಗಿದೆ. ನ್ಯೂಜಿಲೆಂಡ್ ತಂಡದ ಸ್ಫೋಟಕ ಆಟಗಾರ ಫಿನ್ ಅಲೆನ್ ಕೊರೊನಾ ಸೋಂಕಿಗೆ ಒಳಗಾಗಿರುವುದು ಬಾಂಗ್ಲಾದೇಶ ತಲುಪಿದ ನಂತರ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ನಡೆದ ದ ಹಂಡ್ರೆಡ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡವನ್ನು ಪ್ರತಿನಿಧಿಸಿದ್ದ ನ್ಯೂಜಿಲೆಂಡ್ ತಂಡದ ಫಿನ್ ಅಲೆನ್ ಇಂಗ್ಲೆಂಡ್‌ನಿಂದ ನೇರವಾಗಿ ಬಾಂಗ್ಲಾದೇಶದ ಪ್ರಯಾಣವನ್ನು ಕೈಗೊಂಡಿದ್ದರು. ಹೀಗೆ ಬಾಂಗ್ಲಾದ ಢಾಕಾ ನಗರಕ್ಕೆ ಬಂದಿಳಿದ ಫಿನ್ ಅಲೆನ್‌ಗೆ 48 ಗಂಟೆಗಳ ಬಳಿಕ ಕೊರೊನಾ ಸೋಂಕು ತಗುಲಿರುವುದು ಪರೀಕ್ಷೆಯ ಮೂಲಕ ತಿಳಿದುಬಂದಿದೆ.

ಹೀಗೆ ಕೊರೊನಾ ಸೋಂಕಿಗೆ ಒಳಗಾಗಿರುವ ಫಿನ್ ಅಲೆನ್ ಅವರಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯ ವೈದ್ಯರೂ ಸಹ ಫಿನ್ ಅಲೆನ್ ಅವರ ಸಂಪರ್ಕದಲ್ಲಿದ್ದುಕೊಂಡು ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದಾರೆ. ಫಿನ್ ಅಲೆನ್ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವುದು ಸದ್ಯ ಆಶ್ಚರ್ಯಕ್ಕೆ ಕಾರಣವಾಗಿದೆ. ಏಕೆಂದರೆ ಫಿನ್ ಅಲೆನ್ ಕೊರೊನಾ ಲಸಿಕೆಯ ಎಲ್ಲಾ ಡೋಸ್‌ಗಳನ್ನೂ ಸಹ ಪಡೆದುಕೊಂಡಿದ್ದಾರೆ, ಆದರೂ ಸಹ ಫಿನ್ ಅಲೆನ್ ಅವರಿಗೆ ಸೋಂಕು ತಗುಲಿರುವುದು ಸದ್ಯ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದ್ದು ನ್ಯೂಜಿಲೆಂಡ್ ತಂಡಕ್ಕೆ ಆಘಾತ ಉಂಟಾಗಿದೆ.

ಈತನಿಂದ ಎಬಿಡಿ, ಮ್ಯಾಕ್ಸ್‌ವೆಲ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಹುದು ಎಂದ ಆರ್‌ಸಿಬಿ ನೂತನ ಕೋಚ್!ಈತನಿಂದ ಎಬಿಡಿ, ಮ್ಯಾಕ್ಸ್‌ವೆಲ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಹುದು ಎಂದ ಆರ್‌ಸಿಬಿ ನೂತನ ಕೋಚ್!

ಕೊರೊನಾ ಸೋಂಕಿಗೆ ಒಳಗಾಗಿರುವ ನ್ಯೂಜಿಲೆಂಡ್ ತಂಡದ ಆಟಗಾರ ಫಿನ್ ಅಲೆನ್ ಅವರ ವೈದ್ಯಕೀಯ ಪರಿಸ್ಥಿತಿಯ ಕುರಿತು ಮಾತನಾಡಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವ್ಯವಸ್ಥಾಪಕ ಸದ್ಯ ಫಿನ್ ಅಲೆನ್ ಐಸೋಲೇಶನ್ ನಿಯಮವನ್ನು ಅನುಸರಿಸುತ್ತಿದ್ದು ಯಾವುದೇ ರೀತಿಯ ಆತಂಕವಿಲ್ಲ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೂ ಫಿನ್ ಅಲೆನ್ ಅವರು ಅಗತ್ಯವಾದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಆದಷ್ಟು ಬೇಗ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಲಿದ್ದಾರೆ ಎಂಬ ವಿಶ್ವಾಸವನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವ್ಯವಸ್ಥಾಪಕರು ವ್ಯಕ್ತಪಡಿಸಿದ್ದಾರೆ.

ಹಾಗೂ ಇನ್ನುಳಿದ ನ್ಯೂಜಿಲೆಂಡ್ ಆಟಗಾರರು ಐಸೋಲೇಷನ್ ನಿಯಮವನ್ನು ಅನುಸರಿಸುತ್ತಿದ್ದು ಸೆಪ್ಟೆಂಬರ್ 1 ರಿಂದ ಬಾಂಗ್ಲಾದೇಶದ ವಿರುದ್ಧ ಆರಂಭವಾಗಲಿರುವ 4 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಸದ್ಯ ಕೊರೊನಾ ಸೋಂಕಿಗೆ ಒಳಗಾಗಿರುವ ಫಿನ್ ಅಲೆನ್ ಅವರ ಬದಲು ಯಾವ ಆಟಗಾರನಿಗೆ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಿದ್ದಾರೆ ಎಂಬುದನ್ನು ನ್ಯೂಜಿಲೆಂಡ್ ತಂಡ ಇದುವರೆಗೂ ಬಿಟ್ಟುಕೊಟ್ಟಿಲ್ಲ.

ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!

ನಮ್ಮ ಗೆಲುವಿಗೆ ಅವರು ಕಾರಣ ಅಲ್ವೇ ಅಲ್ಲ ಎಂದು ಪತ್ರಕರ್ತನ ಮೇಲೆ ಕಿಡಿಕಾರಿದ ಕೊಹ್ಲಿ | Oneindia Kannada

ಮತ್ತೊಂದೆಡೆ ಇತ್ತೀಚಿಗಷ್ಟೆ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡವನ್ನು ಬಾಂಗ್ಲಾದೇಶ ಕ್ರಿಕೆಟ್ ತಂಡ 4-1 ಅಂತರದಲ್ಲಿ ಮಣಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಹೌದು, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಆಡಿತ್ತು. ಈ 5 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ ಬಾಂಗ್ಲಾದೇಶ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಆಸ್ಟ್ರೇಲಿಯಾ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿತ್ತು. ಹೀಗೆ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿ ಇತಿಹಾಸ ನಿರ್ಮಿಸಿರುವ ಬಾಂಗ್ಲಾದೇಶ ಮುಂಬರಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿಯೂ ಸಹ ಉತ್ತಮ ಪ್ರದರ್ಶನವನ್ನು ನೀಡಿ ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, August 24, 2021, 18:04 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X