ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 ವಿಶ್ವಕಪ್ ಮುಗಿದ ಬಳಿಕವಾದ್ರೂ, ಕೊಹ್ಲಿ ಜೊತೆಗೆ ಪಾಕ್‌ನ ಬಾಬರ್ ಅಜಮ್ ಹೋಲಿಕೆ ನಿಲ್ಲಿಸಿ!

Virat kohli and babar azam

ಟೀಂ ಇಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಭಾರತ ಮತ್ತು ಪಾಕಿಸ್ತಾನ ತಂಡದ ಸೂಪರ್ ಸ್ಟಾರ್ ಬ್ಯಾಟರ್‌ಗಳಾಗಿದ್ದಾರೆ. ಇಬ್ಬರೂ ಆಟಗಾರರು ತಮ್ಮ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಈಗಾಗಲೇ ಅನೇಕ ಮಾಜಿ ಕ್ರಿಕೆಟಿಗರು ಬಾಬರ್ ಅಜಮ್ ಆಟವನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಆಟದ ಜೊತೆಗೆ ಆತನ ಶಾಟ್‌ಗಳ ಕುರಿತಾಗಿ ಬಾಬರ್ ಹೋಲಿಕೆ ನಡೆಯುತ್ತಲೇ ಇರುತ್ತದೆ. ವಿರಾಟ್ ಕೊಹ್ಲಿ ತನ್ನ ಕ್ಲಾಸಿಕಲ್ ಶಾಟ್ ಜೊತೆಗೆ ಅಬ್ಬರದ ಬ್ಯಾಟಿಂಗ್ ಮಾಡಲು ಹೆಸರುವಾಸಿ. ಅದ್ರಲ್ಲೂ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ 3 ಅರ್ಧಶತಕ ದಾಖಲಿಸಿರುವ ವಿರಾಟ್ ಎರಡು ಪಂದ್ಯಗಳಲ್ಲಿ ಅಜೇಯರಾಗಿ ಉಳಿದರು. ಆದ್ರೆ ಬಾಬರ್ ಈ ಬಾರಿ ಸಂಪೂರ್ಣ ವಿಫಲರಾಗಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಕವರ್ ಡ್ರೈವ್ ಶಾಟ್‌ಗಳನ್ನ ಆಗಾಗ್ಗೆ ಹೋಲಿಕೆ ಮಾಡಲಾಗುತ್ತಿರುತ್ತದೆ. ಇಬ್ಬರು ಬ್ಯಾಟರ್‌ಗಳ ಶಾಟ್‌ಗಳನ್ನ ಜನರು ಹೋಲಿಕೆ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ತಂಡದ ಪೇಸರ್ ಮಾರ್ಕ್‌ವುಡ್‌ ಈ ಇಬ್ಬರು ಬ್ಯಾಟರ್‌ಗಳಲ್ಲಿ ಯಾವ ಬ್ಯಾಟ್ಸ್‌ಮನ್ ಅದ್ಭುತ ಕವರ್ ಡ್ರೈವ್ ಹೊಡೆಯಬಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ವಿರಾಟ್‌ ಕೊಹ್ಲಿ ಕವರ್‌ಡ್ರೈವ್‌ ಬಾಬರ್‌ ಕವರ್‌ಡ್ರೈವ್‌ಗಿಂತ ಹೆಚ್ಚು ಉತ್ತಮವಾಗಿದೆ ಎಂದು ಹೇಳಿದ್ದಾರೆ.

ದ.ಆಫ್ರಿಕಾ ವಿರುದ್ಧ ಪಾಕಿಸ್ತಾನಕ್ಕೆ ಜಯ: ಧನ್ಯವಾದ ಎಂದ ಭಾರತದ ಅಭಿಮಾನಿಗಳು! ಕಾರಣ ಏನು?ದ.ಆಫ್ರಿಕಾ ವಿರುದ್ಧ ಪಾಕಿಸ್ತಾನಕ್ಕೆ ಜಯ: ಧನ್ಯವಾದ ಎಂದ ಭಾರತದ ಅಭಿಮಾನಿಗಳು! ಕಾರಣ ಏನು?

ಇಂಗ್ಲೆಂಡ್ ಪೇಸರ್ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗಿವೆ. ಹೆಚ್ಚಿನ ಜನರು ಹೇಳುವ ಪ್ರಕಾರ ಕೊಹ್ಲಿಗೆ ಬಾಬರ್‌ ಹೋಲಿಕೆ ಮಾಡುವುದೇ ಸರಿಯಲ್ಲ. ಏಕೆಂದರೆ ವಿರಾಟ್ ಬೇರೆ ಹಂತದಲ್ಲಿದ್ದಾರೆ ಎಂದ್ರೆ, ಮತ್ತೆ ಕೆಲವರು ಬಾಬರ್ ಇನ್ನೂ ಬೆಳೆಯುತ್ತಿದ್ದು ವಿರಾಟ್‌ಗೆ ಸರಿಸಮಾನರಾಗುವರೇ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಹಂತದಲ್ಲಿ ಟ್ವೀಟ್‌ಗಳು ಹರಿದಾಡಿದ್ದು, ಬಾಬರ್ ಕವರ್‌ಡ್ರೈವ್‌ ವಿರಾಟ್‌ಗಳ್ಲ ಭಾರತದ ಬೌಲರ್‌ಗಳಾದ ಬುಮ್ರಾ ಇಲ್ಲವೆ ಸಿರಾಜ್‌ಗೆ ಹೋಲಿಕೆ ಮಾಡಬಹುದು ಎಂದು ಕಾಲೆಳೆದಿದ್ದಾರೆ. ಆ ಕೆಲವೊಂದು ಟ್ವೀಟ್‌ಗಳನ್ನ ಈ ಕೆಳಗೆ ಕಾಣಬಹುದಾಗಿದೆ.

Story first published: Thursday, November 3, 2022, 23:39 [IST]
Other articles published on Nov 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X