ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Pak vs Eng 1st Test : ಅಂತಿಮ ಹಂತದಲ್ಲಿ ಪಾಕಿಸ್ತಾನ ನಾಟಕೀಯ ಕುಸಿತ: ರೋಚಕ ಕಾದಾಟದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್

Pak vs Eng 1st Test Highlights: England beat Pakistan by 74 runs in the first Test match

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ರೋಚಕವಾಗಿ ಅಂತ್ಯಕಂಡಿದೆ. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲಿಗೆ ಇಂಗ್ಲೆಂಡ್ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಬಿಗಿ ಹಿಡಿತವನ್ನು ಸಾಧಿಸಿತ್ತು. ಆದರೆ ಆತಿಥೇಯ ಪಾಕಿಸ್ತಾನ ಈ ಪಂದ್ಯದಲ್ಲಿ ಪಟ್ಟು ಸಡಿಲಿಸದೆ ಅದ್ಭುತ ಪೈಪೋಟಿ ನೀಡಿತ್ತು. ಆದರೆ ಅಂತಿಮ ಹಂತದಲ್ಲಿ ಎಡವಿದ ಪಾಕಿಸ್ತಾನ ಸೋಲಿಗೆ ಶರಣಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಪೈಪೋಟಿ ನೀಡಿತ್ತು. ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ 338 ರನ್‌ಗಳಖ ಗುರಿಯನ್ನು ನಿಗದಿಪಡಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಪಾಕಿಸ್ತಾನ ಒಂದು ಹಂತದಲ್ಲಿ ಗೆಲುವಿನ ವಿಶ್ವಾಸವನ್ನು ಮೂಡಿಸಿತ್ತು. ಆದರೆ ಅಂತಿಮ ದಿನದಾಟದ ಮೂರನೇ ಸೆಶನ್‌ನ ಅಂತಿಮ ಹಂತದಲ್ಲಿ ಪಾಕಿಸ್ತಾನ ತಂಡ ನಾಟಕೀಯ ಕುಸಿತಕ್ಕೆ ಒಳಗಾಯಿತು. ಇದರ ಪರಿಣಾಮವಾಗಿ ಪಾಕಿಸ್ತಾನ ತಂಡ ಈ ಪಂದ್ಯವನ್ನು ಇಂಗ್ಲೆಂಡ್‌ಗೆ ಒಪ್ಪಿಸಿದೆ. ಪ್ರವಾಸಿ ಇಂಗ್ಲೆಂಡ್ 74 ರನ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

IND Vs BAN : ಇದಕ್ಕೆ ಅವರೇ ಉತ್ತರ ನೀಡಬೇಕು! ಭಾರತ ತಂಡದ ಫೀಲ್ಡಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆIND Vs BAN : ಇದಕ್ಕೆ ಅವರೇ ಉತ್ತರ ನೀಡಬೇಕು! ಭಾರತ ತಂಡದ ಫೀಲ್ಡಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ದಾಖಲೆಯ ಆಟ

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ದಾಖಲೆಯ ಆಟ

ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಆರಂಭಿಕ ದಿನ ಸ್ಪೋಟಕ ಪ್ರದರ್ಶನ ನೀಡಿದ ಬೆನ್ ಸ್ಟೋಕ್ಸ್ ಪಡೆ ಮೊದಲ ದಿನ 500ಕ್ಕೂ ಅಧಿಕ ರನ್‌ಗಳಿಸಿ ಹೊಸ ದಾಖಲೆ ಬರೆಯಿತು. ಈ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ನಾಲ್ವರು ಆಟಗಾರರು ಶತಕ ಸಿಡಿಸಿದರು. ಅಂತಿಮವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 657 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು.

ಪಾಕಿಸ್ತಾನದಿಂದಲೂ ಭರ್ಜರಿ ಪ್ರದರ್ಶನ

ಪಾಕಿಸ್ತಾನದಿಂದಲೂ ಭರ್ಜರಿ ಪ್ರದರ್ಶನ

ಇಂಗ್ಲೆಂಡ್ ತಂಡ ಬೃಹತ್ ಮೊತ್ತವನ್ನು ಪೇರಿಸಿದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ಕೂಡ ಅದ್ಭುತ ಬ್ಯಾಟಿಂಗ್ ನಡೆಸಿತು. ಪಾಕಿಸ್ತಾನದ ಪರವಾಗಿ ಮೂರು ಆಟಗಾರರು ಶತಕ ಸಿಡಿಸಿದರು. ಆರಂಭಿಕರಾದ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಹಾಗೂ ನಾಯಕ ಬಾಬರ್ ಅಜಂ ಶತಕ ಸಿಡಿಸಿದ್ದಾರೆ. ಅಘ ಸಲ್ಮಾನ್ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಅಂತಿಮವಾಗಿ ಪಾಕಿಸ್ತಾನ 579 ರನ್‌ಗಳನ್ನು ಗಳಿಸಿ ಅಲ್ಪ ಮೊತ್ತದ ಹಿನ್ನಡೆಯನ್ನು ಅನುಭವಿಸಿತು.

ಸವಾಲಿನ ಗುರಿ ನೀಡಿದ ಇಂಗ್ಲೆಂಡ್

ಸವಾಲಿನ ಗುರಿ ನೀಡಿದ ಇಂಗ್ಲೆಂಡ್

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಸ್ಪೋಟಕವಾಗಿ ಆಡಿದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಷ್ಟು ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. 264 ರನ್‌ಗಳನ್ನು ಗಳಿಸಿದ್ದಾಗ ಇಂಗ್ಲೆಂಡ್ ತಂಡ ಇನ್ನೀಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಅಂತಿಮ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡಕ್ಕೆ 338 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ ನೀಡಿದ ಹೋರಾಟದ ಪ್ರದರ್ಶನದ ಹೊರತಾಗಿಯೂ ಪಾಕಿಸ್ತಾನ ತಂಡಕ್ಕೆ ಈ ಮೊತ್ತವನ್ನು ಇಂಗ್ಲೆಂಡ್ ನಿಗದಿಪಡಿಸಿದ್ದು ಬಹುತೇಕ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿತ್ತು.

ಗೆಲುವಿನ ಸನಿಹ ತಲುಪಿ ಸೋಲಿಗೆ ಶರಣಾದ ಪಾಕ್

ಗೆಲುವಿನ ಸನಿಹ ತಲುಪಿ ಸೋಲಿಗೆ ಶರಣಾದ ಪಾಕ್

ಇನ್ನು ಇಂಗ್ಲೆಂಡ್ ತಂಡ ನೀಡಿದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಭಿಕ ಎರಡು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದಿಂದ ಉತ್ತಮ ಹೋರಾಟ ವ್ಯಕ್ತವಾದ ಕಾರಣ ಪಾಕಿಸ್ತಾನ ಗೆಲ್ಲುವ ವಿಶ್ವಾಸವನ್ನು ಉಳಿಸಿಕೊಂಡಿತ್ತು. 259 ರನ್‌ಗಳನ್ನು ಗಳಿಸುವ ವರೆಗೂ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಪಾಕಿಸ್ತಾನ ತಂಡ ತಂಡದ ಗೆಲುವಿಗೆ 79 ರನ್‌ಗಳ ಅಗತ್ಯವಿದ್ದು 5 ವಿಕೆಟ್‌ಗಳು ಕೈಯಲ್ಲಿತ್ತು. ಬಹುತೇಕರು ಪಾಕಿಸ್ತಾನ ಈ ಪಂದ್ಯವನ್ನು ಗೆಲ್ಲಲಿದೆ ಎಂದೇ ಭಾವಿಸಿದ್ದರು. ಆದರೆ ಬಳಿಕ ಒಂದಾದ ಬಳಿಕ ಒಂದರಂತೆ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಕೇವಲ 9 ರನ್‌ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಪಾಕಿಸ್ತಾನ ಈ ಪಂದ್ಯದಲ್ಲಿ 74 ರನ್‌ಗಳ ಅಂತರದ ಸೋಲು ಅನುಭವಿಸಿದೆ.

Story first published: Monday, December 5, 2022, 18:24 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X