ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Pak vs NZ: ಅಂತಿಮ ಏಕದಿನದಲ್ಲೂ ಪಾಕಿಸ್ತಾನಕ್ಕೆ ಸೋಲು: ಹಿನ್ನಡೆಗೆ ಕಾರಣ ಹೇಳಿದ ಪಾಕ್ ನಾಯಕ ಬಾಬರ್

Pak vs NZ ODI series: New Zealand won 3rd ODI by 2 wickets and won series by 2-1 against Pakistan

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ಪಾಕಿಸ್ತಾನ ಸೋಲು ಅನುಭವಿಸಿದೆ. ಈ ಮೂಲಕ ತವರಿನಲ್ಲಿ ಪಾಕ್ ಪಡೆ ಮತ್ತೊಂದು ಮುಖಭಂಗಕ್ಕೆ ಒಳಗಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪ್ರವಾಸಿ ನ್ಯೂಜಿಲೆಂಡ್ 2-1 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ ಅಜಂ ತಂಡ ಅಗತ್ಯವಿರುವಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದುವೇ ಸೋಲಿಗ ಕಾರಣವಾಯಿತು ಎಂದಿದ್ದಾರೆ. ಪಾಕಿಸ್ತಾನ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಳಿಕ ಫಕರ್ ಜಮಾನ್ ಹಾಗೂ ಮೊಹಮ್ಮದ್ ರಿಜ್ವಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಪಾಕಿಸ್ತಾನ 280 ರನ್‌ಗಳ ಉತ್ತಮ ಮೊತ್ತವನ್ನು ಗಳಿಸಲು ಸಾಧ್ಯವಾಯಿತು. ಆದರೆ ಕಿವೀಸ್ ಪಡೆ ಇದನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ತನ್ನದಾಗಿಸಿಕೊಂಡಿದೆ.

ಪಾಕಿಸ್ತಾನ ತಂಡದ ಪರವಾಗಿ ಆರಂಭಿಕ ಆಟಗಾರ ಫಕರ್ ಜಮಾನ್ ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದರೆ ರಿಜ್ವಾನ್ 77 ರನ್‌ಗಳ ಕೊಡುಗೆ ನೀಡಿದರು. ಉಳಿದಂತೆ ಅಘಾ ಸಲ್ಮಾನ್ 45 ರನ್‌ಗಳಿಸಿದ್ದಾರೆ. ಆದರೆ ಉಳಿದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ತಂಡಕ್ಕೆ 281 ರನ್‌ಗಳ ಗುರಿ ನಿಗದಿಪಡಿಸಿತು.

ಇದನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭವನ್ನು ಪಡೆಯಿತು. ಅಗ್ರ ಕ್ರಮಾಂಕದ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಮಿಂಚುವ ಮೂಲಕ ತಂಡಕ್ಕೆ ನೆರವಾದರು. ಇನ್ನು ಕೆಳ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ ಅಜೇಯ 63 ರನ್‌ಗಳನ್ನು ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಈ ಮೂಲಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನದಲ್ಲಿ ಚೊಚ್ಚಲ ಏಕದಿನ ಸರಣಿ ಗೆದ್ದುಕೊಂಡಂತಾಗಿದೆ.

ಈ ಸೋಲಿನ ಬಳಿಕ ಮಾತನಾಡಿದ ಬಾಬರ್ ಅಜಂ, "ನಾವು 20 ರನ್‌ಗಳನ್ನು ಕಡಿಮೆ ಗಳಿಸಿದೆವು. ರಿಜ್ವಾನ್ ಹಾಗೂ ಫಕರ್ ಜಮಾನ್ ಆಡುತ್ತಿದ್ದಾಗ ನಾವು 300 ರನ್‌ಗಳನ್ನು ಗಳಿಸುವ ವಿಶ್ವಾಸ ಹೊಂದಿದ್ದೆವು. ಆದರೆ ವಿಕೆಟ್‌ಗಳು ಉರುಳಿದ ಕಾರಣ ಅದು ಹೊಸ ಬ್ಯಾಟರ್‌ಗಳಿಗೆ ಕಷ್ಟವಾಯಿತು. ಬಹಳ ವಿಕೆಟ್‌ಗಳನ್ನು ನಾವು ಸುಲಭವಾಗಿ ಕೈಚೆಲ್ಲಿದೆವು. 20-30 ರನ್ ನಮಗೆ ಕೊರತೆಯಾಯಿತು" ಎಂದಿದ್ದಾರೆ ಪಾಕ್ ನಾಯಕ ಬಾಬರ್ ಅಜಂ.

ಇತ್ತಂಡಗಳ ಆಡುವ ಬಳಗ
ಪಾಕಿಸ್ತಾನ ಆಡುವ ಬಳಗ: ಫಖರ್ ಜಮಾನ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಹಾರಿಸ್ ಸೊಹೈಲ್, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ಹಸ್ನೇನ್, ಹರಿಸ್ ರೌಫ್
ಬೆಂಚ್: ಇಮಾಮ್-ಉಲ್-ಹಕ್. ಕಮ್ರಾನ್ ಗುಲಾಮ್, ಶಹನವಾಜ್ ದಹಾನಿ, ತಯ್ಯಬ್ ತಾಹಿರ್, ನಸೀಮ್ ಶಾ

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್
ಬೆಂಚ್: ಬ್ಲೇರ್ ಟಿಕ್ನರ್, ಹೆನ್ರಿ ನಿಕೋಲ್ಸ್, ಹೆನ್ರಿ ಶಿಪ್ಲಿ, ಜಾಕೋಬ್ ಡಫಿ

Story first published: Saturday, January 14, 2023, 8:36 [IST]
Other articles published on Jan 14, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X