ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಕೋಚ್ ಮಿಸ್ಬಾ ಉಲ್ ಹಕ್‌ಗೆ ಕೋವಿಡ್ 19 ದೃಢ, ಜಮೈಕಾದಲ್ಲಿ ಕ್ವಾರಂಟೈನ್

Pakistan Head coach Misbah-ul-Haq tests positive for Covid-19, quarantined in Jamaica

ಪಾಕಿಸ್ತಾನ ಕ್ರಿಕೆಟ್ ತಂಡ ಈ ಬಾರಿಯ ವೆಸ್ಟ್ ಇಂಡೀಸ್ ಸರಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆದರೆ ತವರಿಗೆ ವಾಪಾಸಾಗುವ ಮುನ್ನ ತಂಡಕ್ಕೆ ಕೊರೊನಾವೈರಸ್ ಆಘಾತ ನೀಡಿದ್ದು ತಂಡದ ಕೋಚ್ ಮಿಸ್ಬಾ ಉಲ್ ಹಕ್ ಕೊರೊನಾವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಉಳಿದೆಲ್ಲಾ ಸದಸ್ಯರು ಕೂಡ ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದು ತವರಿಗೆ ಮರಳಿದ್ದಾರೆ.

ಇಡೀ ಪಾಕಿಸ್ತಾನ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಮುಗಿಸಿ ತವರಿಗೆ ವಾಪಾಸಾಗಲು ಸಿದ್ಧವಾಗಿದೆ. ಆದರೆ ತಂಡದ ಕೋಚ್ ಆಗಿರುವ ಮಿಸ್ಬಾ ಉಲ್ ಹಕ್ ಉನ್ನು 10 ದಿನಗಳ ಕಾಲ ಜಮೈಕಾದಲ್ಲಿಯೇ ಉಳಿದುಕೊಳ್ಳಬೇಕಿದ್ದು ಕ್ವಾರಂಟೈನ್ ಪೂರೈಸಬೇಕಿದೆ. ಆ ಬಳಿಕವೇ ಮಿಸ್ಬಾ ಯವರಿಗೆ ವಾಪಾಸಾಗಲಿದ್ದಾರೆ.

ತವರಿಗೆ ಮರಳುವ ಮುನ್ನ ನಡೆಸಲಾದ ಕೊರೊನಾವೈರಸ್ ಪರೀಕ್ಷೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಸ್ಬಾ ಉಲ್ ಹಕ್ ಮಾತ್ರವೇ ಪಾಸಿಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ತಮಡದ ಉಳಿದ ಎಲ್ಲಾ ಸದಸ್ಯರು ಬುಧವಾರ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಟಿಟ್ವೆಂಟಿ ಪಂದ್ಯಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿವೆ ಈ 5 ಹೊಸ ನಿಯಮಗಳು!; ವೀಕ್ಷಕರಿಗೆ ಹಬ್ಬದೂಟಟಿಟ್ವೆಂಟಿ ಪಂದ್ಯಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿವೆ ಈ 5 ಹೊಸ ನಿಯಮಗಳು!; ವೀಕ್ಷಕರಿಗೆ ಹಬ್ಬದೂಟ

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ. "ಪಿಸಿಬಿ ಕ್ರಿಕೆಟ್ ವೆಸ್ಟ್ ಇಂಡೀಸ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ. ಮಿಸ್ಬಾ ಉಲ್ ಹಕ್ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳಲು ನಿಯೋಜಿಸಲಾಗಿರುವ ವೈದ್ಯಕೀಯ ತಜ್ಞರೊಂದಿಗೆ ಸಂಪರ್ಕದಲ್ಲಿದ್ದಾರೆ. 10 ದಿನಗಳ ಕ್ವಾರಂಟೈನ್‌ಗಾಗಿ ಬೇರೆ ಹೋಟೆಲ್‌ಗೆ ವರ್ಗಾಯಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ" ಎಂದು ಪಿಸಿಬಿ ತನ್ನ ಪ್ರಕಟಣೆಯನ್ನು ತಿಳಿಸಿದೆ.

ವೆಸ್ಟ್ ಇಂಡೀಸ್‌ಗೆ ಪಾಕಿಸ್ತಾನ ಕೈಗೊಂಡ ಈ ಪ್ರವಾಸದಲ್ಲಿ ವಿಂಡೀಸ್ ನೆಲದಲ್ಲಿ ಪಾಕ್ ಪಡೆ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳು ಮಳೆಯಿಮದಾಗಿ ಸಂಪೂರ್ಣ ರದ್ದಾಗಿತ್ತು. ಆಡಿದ ಒಂದು ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲುವಿ ಸಾಧಿಸಿದೆ. ಇನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳು 1-1 ಅಂತರದಿಂದ ಗೆಲುವು ಸಾಧಿಸಿತ್ತು.

Virat Kohli ವಿಕೆಟ್ ಪಡೆದು ಕುಣಿದು ಕುಪ್ಪಳಿಸಿದ Anderson | Oneindia Kannada

ಅಪ್ಘಾನಿಸ್ತಾನ ವಿರುದ್ಧದ ಸರಣಿ ಅನಿಷ್ಟಾವಧಿ ಮುಂದಕ್ಕೆ: ಪಾಕಿಸ್ತಾನ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿದ ನಂತರ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಸಜ್ಜಾಗಬೇಕಾಗಿತ್ತು. ಆದರೆ ಈ ಸರಣಿ ಈಗ ರದ್ದಾಗಿದೆ. ಅಪ್ಘಾನಿಸ್ತಾನವನ್ನು ಸಂಪೂರ್ಣವಾಗಿ ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡ ಕಾರಣ ಕ್ರಿಕೆಟ್ ಚಟುವಟಿಕೆಗಳನ್ನು ಮುಂದುವರಿಸಲು ಸಧ್ಯದ ಸ್ಥಿತಿಯಲ್ಲಿ ಅಸಾಧ್ಯವಾಗಿದೆ. ತಾಲಿಬಾನ್ ಅಪ್ಘಾನಿಸ್ತಾನ ಕ್ರಿಕೆಟ್‌ಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಘೋಷಿಸಿದೆ. ಆದರೆ ಸದ್ಯ ಅಪ್ಘಾನಿಸ್ತಾನ ದೇಶಾದ್ಯಂತ ಗೊಂದಲಕಾರಿ ವಾತಾವರಣ ಇರುವ ಕಾರಣದಿಂದಾಗಿ ಲಾಜಿಸ್ಟಿಕ್ ಸಮಸ್ಯೆಗಳು ಕ್ರಿಕೆಟ್ ತಂಡಕ್ಕೆ ಎದುರಾಗಿದೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಸರಣಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಮುಂದಿನ ಜನವರಿ ತಿಂಗಳಿನಲ್ಲಿ ಈ ಸರಣಿ ಶ್ರೀಲಂಕಾ ಬದಲಿಗೆ ಪಾಕಿಸ್ತಾನದಲ್ಲಿಯೇ ನಡಯುವ ಸಾಧ್ಯತೆಯಿದೆ.

Story first published: Thursday, August 26, 2021, 9:52 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X