ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಘೋಷಿಸಿದ ಪಾಕಿಸ್ತಾನ: ಅನುಭವಿ ಅಟಗಾರನಿಗಿಲ್ಲ ಸ್ಥಾನ!

Pakistan Squad announced for Test series against England at home Fawad Alam and Hasan Ali dropped

ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಿದ್ದ ಪಾಕಿಸ್ತಾನ ಈಗ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸಕ್ಕೆ ತೆರಳಲಿದ್ದು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಈ ಸರಣಿಗೆ ಪಾಕಿಸ್ತಾನ 18 ಆಟಗಾರರ ಬಳಗವನ್ನು ಪ್ರಕಟಿಸಿದೆ.

ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಕೆಲ ಕುತೂಹಲಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು ಅಬ್ರಾರ್ ಅಹ್ಮದ್ ಹಾಗೂ ವೇಗಿ ಮೊಹಮ್ಮದ್ ಅಲಿ ಇದೇ ಮೊದಲ ಬಾರಿಗೆ ಸ್ಥಾನವನ್ನು ಪಾಕಿಸ್ತಾನ ರಾಷ್ಟ್ರೀಯ ತಂಡದ ಕರೆ ಸ್ವೀಕರಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ಅನುಭವಿ ಆಟಗಾರ ಫಾವದ್ ಅಲಂ, ಲೆಗ್ ಸ್ಪಿನ್ನರ್ ಯಾಸಿರ್ ಶಾ ಹಾಗೂ ವೇಗಿ ಹಸನ್ ಅಲಿ ಈ ಸರಣಿಯಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದಾರೆ.

ವಿಜಯ್ ಹಜಾರೆ ಟ್ರೋಫಿ 2022: ಸತತ 5ನೇ ಶತಕ ಸಿಡಿಸಿ ದಿಗ್ಗಜರನ್ನು ಹಿಂದಿಕ್ಕಿದ ಎನ್ ಜಗದೀಸನ್ವಿಜಯ್ ಹಜಾರೆ ಟ್ರೋಫಿ 2022: ಸತತ 5ನೇ ಶತಕ ಸಿಡಿಸಿ ದಿಗ್ಗಜರನ್ನು ಹಿಂದಿಕ್ಕಿದ ಎನ್ ಜಗದೀಸನ್

17 ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಟೆಸ್ಟ್ ಆಡಲಿದೆ ಇಂಗ್ಲೆಂಡ್

17 ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಟೆಸ್ಟ್ ಆಡಲಿದೆ ಇಂಗ್ಲೆಂಡ್

ಇನ್ನು ಈ ಸರಣಿ ಪಾಕಿಸ್ತಾನದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಇಂಗ್ಲೆಂಡ್ ತಂಡ 17 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಟೆಸ್ಟ್ ಸರಣಿಯನ್ನಾಡಲು ಆಗಮಿಸುತ್ತಿದೆ. ಇದಕ್ಕೂ ಮುನ್ನ 2005ರಲ್ಲಿ ಇಂಗ್ಲೆಂಡ್ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿತ್ತು. ಅದಾದ ಬಳಿಕ ಪಾಕಿಸ್ತಾನ ಎರಡು ಬಾರಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಯೋಜನೆ ಮಾಡಿತ್ತಾದರೂ ಆ ಸರಣಿ ಯುಎಇನಲ್ಲಿ ಆಡಿಸಲಾಗಿತ್ತು.

ಪಾಕ್ ತಂಡದಲ್ಲಿಲ್ಲ ಶಾಹೀನ್ ಅಫ್ರಿದಿ

ಪಾಕ್ ತಂಡದಲ್ಲಿಲ್ಲ ಶಾಹೀನ್ ಅಫ್ರಿದಿ

ಇನ್ನು ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಆಯ್ಕೆಯಾಗಿಲ್ಲ. ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿ ಗಾಯಗೊಂಡಿದ್ದು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಈ ಕಾರಣದಿಮದಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೂ ಶಾಹೀನ್ ಅಫ್ರಿದಿ ಭಾಗಿಯಾಗುತ್ತಿಲ್ಲ. ನಸೀಮ್ ಶಾ, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್, ಫಹೀಮ್ ಅಶ್ರಮ್ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನವನ್ನು ಪಡೆದುಕೊಂಡು ಆಟಗಾರರಾಗಿದ್ದಾರೆ. ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅಬ್ರಾರ್ ಹಾಗೂ ಮೊಹಮ್ಮದ್ ಅಲಿ ಈ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಪಾಕಿಸ್ತಾನ ತಂಡ ಹೀಗಿದೆ

ಪಾಕಿಸ್ತಾನ ತಂಡ ಹೀಗಿದೆ

ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಅಜರ್ ಅಲಿ, ಫಹೀಮ್ ಅಶ್ರಫ್, ಹಾರಿಸ್ ರೌಫ್, ಇಮಾಮ್-ಉಲ್-ಹಕ್, ಮೊಹಮ್ಮದ್ ಅಲಿ, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ನೌಮನ್ ಅಲಿ, ಸಲ್ಮಾನ್ ಅಲಿ ಅಘಾ, ಸರ್ಫರಾಜ್ ಅಹ್ಮದ್, ಸೌದ್ ಶಕೀಲ್, ಶಾನ್ ಮಸೂದ್ ಮತ್ತು ಜಾಹಿದ್ ಮೆಹಮೂದ್.

Story first published: Monday, November 21, 2022, 17:04 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X