ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ಗೆ 'ಐತಿಹಾಸಿಕ' ಪ್ರವಾಸ ಕೈಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡ

Pakistan Squad Embarks On Historic Tour To England

ಕೊರೊನಾ ವೈರಸ್‌ನ ಹಾವಳಿಯ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಪ್ರವಾಸವನ್ನು ಆರಂಭಿಸಿದೆ. ಪಾಕಿಸ್ತಾನ ತಂಡದ ಸೀಮಿತ ಓವರ್‌ಗಳ ನಾಯಕ ಬಾಬರ್ ಅಝಮ್ ಈ ಪ್ರವಾಸವನ್ನು ಐತಿಹಾಸಿಕ ಪ್ರವಾಸ ಎಂದು ಹೇಳಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ 20 ಆಟಗಾರರು ಮತ್ತು 11 ಇತರ ಸದಸ್ಯರನ್ನು ಹೊತ್ತ ವಿಮಾನ ಇಂಗ್ಲೆಂಡ್‌ಗೆ ಹಾರಿದೆ. ಮೂರು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ ಇಂಗ್ಲೆಂಡ್ ತಂಡದ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ.

ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಿಮಾನ ಇಳಿಯಲಿದೆ. ಬಳಿಕ ಪಾಕಿಸ್ತಾನ ತಂಡದ ಎಲ್ಲಾ ಸದಸ್ಯರಿಗೂ ಕೊವಿಡ್-19 ಪರೀಕ್ಷೆಯನ್ನು ನಡೆಸಲಾಗುತ್ತದೆ. ಅದರ ವರದಿ ಬಂದ ಬಳಿಕ ಪಾಕಿಸ್ತಾನ ಕ್ರಿಕೆಟ್‌ನ ಎಲ್ಲಾ ಆಟಗಾರರೂ ಸಿಬ್ಬಂದಿಗಳು ಹದಿನಾಲ್ಕು ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಬೇಕಿದೆ.

ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?

ಆರಂಭದಲ್ಲಿ ಪಾಕಿಸ್ತಾನ ಮಂಡಳಿ ಇಂಗ್ಲೆಂಡ್‌ಗೆ 29 ಆಟಗಾರರ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸಲು ಯೋಜನೆ ರೂಪಿಸಿತ್ತು. ಆದರೆ ಪ್ರವಾಸಕ್ಕೂ ಮುನ್ನ ನಡೆಸಿದ ಮೊದಲ ಕೊರೊನಾ ಪರೀಕ್ಷೆಯಲ್ಲಿ 10 ಆಟಗಾರರಿಗೆ ಕೊರೊನಾ ವೈರಸ್ ಇದೆ ಎಂಬ ವರದಿ ಬಂದಿತ್ತು. ಆದರೆ ಎರಡನೇ ವರದಿಯಲ್ಲಿ ಹತ್ತು ಆಟಗಾರರ ಪೈಕಿ ಆರು ಆಟಗಾರರ ವರದಿ ನೆಗೆಟಿವ್ ಬಂದಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇಂಗ್ಲೆಂಡ್ ಪ್ರವಾಸದ ಫೋಟೋವನ್ನು ಪಿಸಿಬಿ ಹಂಚಿಕೊಂಡಿದೆ. ಇನ್ನು ಪಾಕಿಸ್ತಾನ ಕ್ರಿಕೆಟ್‌ ತಂಡದ ಸೀಮಿತ ಓವರ್‌ಗಳ ನಾಯಕ ಬಾಬರ್ ಅಝಮ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಪಾಕಿಸ್ತಾನ ಐತಿಹಾಸಿಕ ಪ್ರವಾಸಕ್ಕೆ ಇಂಗ್ಲೆಂಡ್‌ಗೆ ತೆರಳುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆ

ಜೈವಿಕ ಸುರಕ್ಷತಾ ವಾತಾವರಣದಲ್ಲಿ ಇಂಗ್ಲೆಂಡ್ ವಿರುದ್ಧ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಸರಣಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡ ಆಡಲಿದೆ. ಕೊರೊನಾ ವೈರಸ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸಿದ್ದವಾಗಿದೆ. ಜುಲೈ 8 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿಲಿದೆ. ವಿಂಡೀಡ್ ವಿರುದ್ಧ ಸರಣಿ ಮುಕ್ತಾಯದ ನಂತರ ಪಾಕಿಸ್ತಾನದ ಜೊತೆಗಿನ ಸರಣಿ ಆರಂಭವಾಗಲಿದೆ. ಪಾಕ್ ವಿರುದ್ಧದ ಸರಣಿಯ ದಿನಾಂಕಕಗಳು ಇನ್ನಷ್ಟೇ ಅದಿಕೃತವಾಗಬೇಕಾಗಿದೆ.

Story first published: Sunday, June 28, 2020, 15:42 [IST]
Other articles published on Jun 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X