ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ vs ಬಾಂಗ್ಲಾದೇಶ ಪ್ರಥಮ ಟೆಸ್ಟ್: ಪಾಕ್ ವಿಕೆಟ್ ಪಡೆಯಲಾಗದೇ ಹೈರಾಣಾದ ಬಾಂಗ್ಲಾ ಬೌಲರ್ಸ್

Pakistan vs Bangladesh First Test: Pakistan scored 145 with no loss for the end of day 2

ಒಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಕೂಡ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಇತ್ತ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆದಂತೆ, ಅತ್ತ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಕೂಡ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆದಿತ್ತು.

ಧೋನಿ vs ಕೊಹ್ಲಿ vs ರೋಹಿತ್: ನಾಯಕತ್ವದ ಸಕ್ಸಸ್ ರೇಟ್‌ನಲ್ಲಿ ಈ ನಾಯಕನೇ ನಂಬರ್ ಒನ್!ಧೋನಿ vs ಕೊಹ್ಲಿ vs ರೋಹಿತ್: ನಾಯಕತ್ವದ ಸಕ್ಸಸ್ ರೇಟ್‌ನಲ್ಲಿ ಈ ನಾಯಕನೇ ನಂಬರ್ ಒನ್!

ಇತ್ತ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 3 ಪಂದ್ಯಗಳಲ್ಲಿಯೂ ಗೆಲ್ಲುವುದರ ಮೂಲಕ ವೈಟ್ ವಾಷ್ ಸಾಧನೆ ಮಾಡಿದರೆ, ಅತ್ತ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿರುವ ಪಾಕಿಸ್ತಾನ ಕೂಡ ಬಾಂಗ್ಲಾದೇಶದ ವಿರುದ್ಧ ನಡೆದ ಎಲ್ಲಾ 3 ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ಜಯಗಳಿಸುವುದರ ಮೂಲಕ ವೈಟ್ ವಾಷ್ ಬಳಿದಿದೆ. ಹೀಗೆ ಬಾಂಗ್ಲಾದೇಶದ ನೆಲದಲ್ಲಿಯೇ ಟಿ ಟ್ವೆಂಟಿ ಸರಣಿಯಲ್ಲಿ ಬಾಂಗ್ಲಾದೇಶಕ್ಕೆ ವೈಟ್ ವಾಶ್ ಬಳಿಯುವ ಮೂಲಕ ಪಾಕಿಸ್ತಾನ ಬಾಂಗ್ಲಾ ಆಟಗಾರರು ಮುಖಭಂಗಕ್ಕೊಳಗಾಗುವಂತೆ ಮಾಡಿದೆ.

ಇನ್ನು ಪಾಕಿಸ್ತಾನ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಹೀನಾಯವಾಗಿ ಸೋಲುವುದರ ಮೂಲಕ ಅವಮಾನಕ್ಕೊಳಗಾಗಿರುವ ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಾದರೂ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿ ಪ್ರತೀಕಾರ ತೀರಿಸಿಕೊಳ್ಳುವ ಯೋಜನೆಯಲ್ಲಿದೆ. ಸದ್ಯ ಇತ್ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಚತ್ತೋಗ್ರಮ್ ನಗರದ ಜಹುರ್ ಅಹ್ಮದ್ ಚೌಧರಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ದುಕೊಂಡಿತು.

ಕೊನೆಗೂ ಷರತ್ತನ್ನು ಗೆದ್ದು ತನ್ನ ಕೋಚ್‌ನ್ನು ಮನೆಗೆ ಆಹ್ವಾನಿಸುವ ಅವಕಾಶ ಪಡೆದ ಶ್ರೇಯಸ್ ಐಯ್ಯರ್ಕೊನೆಗೂ ಷರತ್ತನ್ನು ಗೆದ್ದು ತನ್ನ ಕೋಚ್‌ನ್ನು ಮನೆಗೆ ಆಹ್ವಾನಿಸುವ ಅವಕಾಶ ಪಡೆದ ಶ್ರೇಯಸ್ ಐಯ್ಯರ್

ಹೀಗೆ ಮೊದಲು ಬ್ಯಾಟಿಂಗ್ ಮಾಡಿರುವ ಬಾಂಗ್ಲಾದೇಶ ಮೊದಲನೇ ಇನ್ನಿಂಗ್ಸ್‌ನಲ್ಲಿ 330 ರನ್‌ಗಳಿಗೆ ಆಲ್ ಔಟ್ ಆಗಿದೆ. ಬಾಂಗ್ಲಾದೇಶದ ಪರ ಲಿಟನ್ ದಾಸ್ 114 ರನ್ ಬಾರಿಸುವುದರ ಮೂಲಕ ಶತಕ ಸಿಡಿಸಿ ಮಿಂಚಿದರು ಮತ್ತು ಮುಷ್ಫಿಕರ್ ರಹೀಮ್ 91 ರನ್ ಕಲೆ ಹಾಕಿ ಉತ್ತಮ ಪ್ರದರ್ಶನ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿದರೆ ಬಾಂಗ್ಲಾದೇಶದ ಮತ್ಯಾವುದೇ ಆಟಗಾರ ಕೂಡ ಜವಾಬ್ದಾರಿಯುತ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಲೇ ಇಲ್ಲ. ಈ ಇಬ್ಬರ ಆಟದ ನೆರವಿನಿಂದ ಪೈಪೋಟಿಯುತ ಮೊತ್ತವನ್ನು ಬಾಂಗ್ಲಾದೇಶ ಕಲೆಹಾಕುವಲ್ಲಿ ಸಫಲತೆ ಕಂಡಿದೆ. ಪಾಕಿಸ್ತಾನದ ಪರ ಹಸನ್ ಅಲಿ 5 ವಿಕೆಟ್, ಶಾಹೀನ್ ಅಫ್ರಿದಿ ಮತ್ತು ಫಾಹೀಮ್ ಅಶ್ರಫ್ ತಲಾ 2 ವಿಕೆಟ್ ಮತ್ತು ಸಜಿದ್ ಖಾನ್ 1 ವಿಕೆಟ್ ಪಡೆದರು.

ನಂತರ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಅಬೀದ್ ಅಲಿ ಮತ್ತು ಅಬ್ದುಲ್ಲಾ ಶಫೀಕ್ ಅತ್ಯುತ್ತಮ ಆರಂಭವನ್ನು ಮಾಡಿದ್ದಾರೆ. ಅಬಿದ್ ಅಲಿ ಅಜೇಯ 93 ರನ್ ಗಳಿಸಿ ಶತಕದ ಸನಿಹದಲ್ಲಿದ್ದರೆ, ಅಬ್ದುಲ್ ಶಫೀಕ್ ಅಜೇಯ 52 ರನ್ ಕಲೆಹಾಕಿದ್ದಾರೆ. ಹೀಗೆ ಎರಡನೆ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಪಾಕಿಸ್ತಾನ 145 ಗಳಿಸಿದ್ದು ಇನ್ನೂ 185 ರನ್‌ಗಳಷ್ಟು ಹಿಂದಿದೆ. ಇನ್ನು ಉತ್ತಮ ಆರಂಭವನ್ನು ಮಾಡಿರುವ ಪಾಕಿಸ್ತಾನದ ಆರಂಭಿಕರು ಮೂರನೇ ದಿನದಾಟದಂದು ಕೂಡ ಇದೇ ರೀತಿಯ ಆರಂಭವನ್ನು ಮಾಡಿದರೆ ನಂತರ ಕಣಕ್ಕಿಳಿಯಲಿರುವ ಆಟಗಾರರು ಮತ್ತಷ್ಟು ಉತ್ತಮ ಆಟವನ್ನು ಆಡುವ ಸಾಧ್ಯತೆಗಳಿವೆ.

Story first published: Saturday, November 27, 2021, 20:12 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X