ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ vs ಪಾಕಿಸ್ತಾನ: ಕರಾಚಿ ಟೆಸ್ಟ್‌ನಲ್ಲಿ 7 ವಿಕೆಟ್‌ಗಳ ಗೆಲುವು ಸಾಧಿಸಿದ ಪಾಕ್

Pakistan won the 1st test against South Africa by 7 wickets

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಕರಾಚಿಯ ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಆರಂಭದಿಂದಲೂ ಸಂಪೂರ್ಣವಾಗಿ ಮೇಲುಗೈ ಸಾಧಿಸಿಕೊಂಡು ಬಂದಿದ್ದು ಪಂದ್ಯದ ನಾಲ್ಕನೇ ದಿನವೇ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಗೆಲುವಿಗಾಗಿ ಕೇವಲ 88 ರನ್‌ಗಳ ಗುರಿಯನ್ನು ಪಡೆದುಕೊಂಡಿದ್ದು. ಈ ಗುರಿಯನ್ನು ಬೆನ್ನಟ್ಟುವ ವೇಲೆ ಆರಂಭದಲ್ಲಿ ಶೀಘ್ರವಾಗಿ 2 ವಿಕೆಟ್‌ಗಳನ್ನು ಪಾಕಿಸ್ತಾನ ತಂಡ ಕಳೆದುಕೊಂಡಿತ್ತಾದರೂ ಬಳಿಕ ಅಜರ್ ಅಲಿ(31* ರನ್) ಹಾಗೂ ನಾಯಕ ಬಾಬರ್ ಅಜಂ(30 ರನ್‌)ಗಳ ಕೊಡುಗೆಯನ್ನು ನೀಡಿ ಗೆಲುವನ್ನು ಖಾತ್ರಿಪಡಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ಏಷ್ಯಾದಲ್ಲಿ ಆಡಿದ ಕಳೆದ 10 ಪಂದ್ಯಗಳಲ್ಲಿ 9ನೇ ಸೋಲು ಕಂಡಂತಾಗಿದೆ.

ಐಪಿಎಲ್ 2021 ಹರಾಜು: ಆರ್‌ಸಿಬಿ ಕಣ್ಣಿಟ್ಟಿರುವ ಪ್ರಮುಖ ಆಟಗಾರರಿವರು!ಐಪಿಎಲ್ 2021 ಹರಾಜು: ಆರ್‌ಸಿಬಿ ಕಣ್ಣಿಟ್ಟಿರುವ ಪ್ರಮುಖ ಆಟಗಾರರಿವರು!

ದಕ್ಷಿಣ ಆಫ್ರಿಕಾ ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ ಪಾಖಿಸ್ತಾನದ ಸಂಘಟಿತ ಬೌಲಿಂಗ್ ದಾಳಿಗೆ ಕುಸಿದು ಮೊದಲ ಇನ್ನಿಂಗ್ಸ್‌ನಲ್ಲಿ 220 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಫಾವದ್ ಅಲಂ ಭರ್ಜರಿ ಶತಕದ ನೆರವಿನಿಂದ 378 ರನ್‌ಗಳನ್ನು ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ 159 ರನ್‌ಗಳ ಮುನ್ನಡೆಯನ್ನು ಪಡೆದು ಉತ್ತಮ ಸ್ಥಿತಿಯಲ್ಲಿತ್ತು.

ಮೂರನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡಿ 187 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಸ್ಪಿನ್ನರ್‌ಗಳಾದ ಯಾಸಿರ್ ಶಾ(4 ವಿಕೆಟ್) ಹಾಗೂ ನೌಮಾನ್ ಅಲಿ(5 ವಿಕೆಟ್) ನೀಡಿದ ಅದ್ಭುತ ದಾಳಿಗೆ ಕಂಗೆಟ್ಟ ದಕ್ಷಿಣ ಆಫ್ರಿಕಾ 245 ರನ್‌ಗಳಿಗೆ ಆಲೌಟ್ ಆಗಿತ್ತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಬೆವರಿಳಿಸಿದ ಕೊಹ್ಲಿ: ವಿಡಿಯೋಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಬೆವರಿಳಿಸಿದ ಕೊಹ್ಲಿ: ವಿಡಿಯೋ

ಹೀಗಾಗಿ ಪಾಕಿಸ್ತಾನ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 88 ರನ್ ಗಳಿಸುವ ಗುರಿ ಮುಂದಿತ್ತು. ಈ ವೇಳೆ ಆರಂಭಿಕರಾದ ಇಮ್ರಾನ್ ಬಟ್(12) ಹಾಗೂ ಅಬಿದ್ ಅಲಿ(10) ವಿಕೆಟ್‌ಅನ್ನು ಶೀಘ್ರವಾಗಿ ಪಡೆಯಲು ಆಫ್ರಿಕನ್ನರು ಯಶಸ್ವಿಯಾದರಾದರೂ ಅಲ್ಪ ಗುರಿ ಮುಂದಿದ್ದ ಕಾರಣ ಪಾಕಿಸ್ತಾನ ಸುಲಭವಾಗಿ ಗೆದ್ದು ಬೀಗಿದೆ. ತಂಡದ ಗೆಲುವಿಗೆ 2 ರನ್‌ಗಳ ಅಗತ್ಯವಿದ್ದಾಗ ಪಾಕ್ ನಾಯಕ ಬಾಬರ್ ಅಜಂ ವಿಕೆಟ್ ಕಳೆದುಕೊಂಡಿರು. ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ ಫಾವದ್ ಅಲಂ ಬೌಂಡರಿ ಬಾರಿಸಿ ಪಾಕ್ ತಂಡಕ್ಕೆ 7 ವಿಕೆಟ್‌ಗಳ ಗೆಲುವನ್ನು ಸಾರಿದರು.

Story first published: Friday, January 29, 2021, 16:18 [IST]
Other articles published on Jan 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X