Pat Cummins: ಪಿಎಂ ಕೇರ್ಸ್‌ಗೆ 50,000 ಡಾಲರ್ ದೇಣಿಗೆ ನೀಡಿದ ಪ್ಯಾಟ್ ಕಮಿನ್ಸ್

ನವದೆಹಲಿ: ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್ 'ಪಿಎಂ ಕೇರ್ಸ್‌' ಬರೋಬ್ಬರಿ 50,000 ಡಾಲರ್ (37,35,640 ರೂ.) ದೇಣಿಗೆ ನೀಡಿದ್ದಾರೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ. ಹೀಗಾಗಿ ಕಮಿನ್ಸ್ ನೆರವಿಗೆ ಮುಂದಾಗಿದ್ದಾರೆ.

ಐಪಿಎಲ್‌ನಿಂದ ಹೊರ ಬೀಳುತ್ತಿದ್ದಾರೆ ಆಟಗಾರರು, ಟೂರ್ನಿ ನಿಲ್ಲುತ್ತಾ?!

ಟ್ವೀಟ್‌ ಮೂಲಕ ಸ್ವತಃ ಪ್ಯಾಟ್ ಕಮಿನ್ಸ್ ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆಮ್ಲಜನಕದ ಸಿಲಿಂಡರ್‌ಗಳ ಕೊರತೆ ಎದುರಿಸುತ್ತಿರುವ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಖರೀದಿಸಲು ಕಮಿನ್ಸ್ ಸಹಾಯಹಸ್ತ ಚಾಚಿದ್ದಾರೆ. ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಐಪಿಎಲ್ 2021: ಚೆನ್ನೈ ವಿರುದ್ಧ ಸೋಲಿನ ಬೆನ್ನಲೇ ವಿರಾಟ್ ಕೊಹ್ಲಿಗೆ ದಂಡದ ಬರೆ

ಟ್ವೀಟ್ ಮಾಡಿರುವ ಕಮಿನ್ಸ್, 'ನಾವು ಬಂದು ಪ್ರೀತಿಸುವ ದೇಶಗಳಲ್ಲಿ ಭಾರತವೂ ಒಂದು. ನಾನು ಎಲ್ಲೂ ನೋಡಿರದ-ಭೇಟಿಯಾಗಿರದ ವಿಶಾಲ ಹೃದಯದ, ಆದರದ ಮನಸ್ಸಿನ ಜನ ಇಲ್ಲಿದ್ದಾರೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಇಲ್ಲಿನ ಜನ ತೊಂದರೆ ಅನುಭವಿಸುತ್ತಿರುವುದನ್ನು ನೋಡುವಾಗ ನನಗೆ ತುಂಬಾ ಬೇಸರವಾಗುತ್ತಿದೆ,' ಎಂದು ಬರೆದುಕೊಂಡಿದ್ದಾರೆ.

ಟ್ವೀಟ್‌ನ ಮುಂದಿನ ಸಾಲುಗಳಲ್ಲಿ, 'ಒಬ್ಬರ ಆಟಗಾರನಾಗಿ ಐಪಿಎಲ್‌ನಲ್ಲಿ ಕೋಟ್ಯಾಂತರ ಮಂದಿಯನ್ನು ತಲುಪಲು ಇರುವ ಅವಕಾಶವನ್ನು ನಾನು ಬಳಸಿಕೊಳ್ಳಲಿದ್ದೇನೆ. ನಾನು ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿದ್ದೇನೆ. ನನ್ನ ಇತರ ಐಪಿಎಲ್ ಆಟಗಾರರಿಗೂ ನಾನು ದೇಣಿಗೆ ನೀಡಲು ಬೆಂಬಲ ನೀಡುತ್ತಿದ್ದೇನೆ,' ಎಂದು ಬರೆದುಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, April 26, 2021, 16:25 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X