ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

63 Not Out: ಕ್ರಿಕೆಟ್‌ ಆಡುತ್ತಲೇ ಪ್ರಾಣಬಿಟ್ಟ, ಫಿಲಿಪ್ ಹ್ಯೂಸ್ 7ನೇ ವರ್ಷದ ಪುಣ್ಯಸ್ಮರಣೆ

Philip Hughes

ನವೆಂಬರ್ 27, 2014 ರಂದು ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಶೆಫಿಲ್ಡ್ ಶೀಲ್ಡ್ ದೇಶೀಯ ಟೂರ್ನಿಯಲ್ಲಿ ಸಂಭವಿಸಿದ ಆಕಸ್ಮಿಕ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದನ್ನು ಇನ್ನೂ ಕ್ರಿಕೆಟ್ ಲೋಕ ಮರೆತಿಲ್ಲ. ಅದಾಗಲೇ ಈ ದುರಂತ ನಡೆದು ಏಳು ವರ್ಷಗಳೇ ನಡೆದಿವೆ. ಆಸ್ಟ್ರೇಲಿಯಾದ ಪ್ರತಿಭಾವಂತ ಕ್ರಿಕೆಟಿಗ ದೂರವಾಗಿ ಫಿಲಿಪ್ ಹ್ಯೂಸ್ ಏಳನೇ ವರ್ಷದ ಪುಣ್ಯಸ್ಮರಣೆ ಇಂದಾಗಿದೆ.

ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿದ್ದ ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂಸೌತ್ ವೇಲ್ಸ್‌ ನಡುವಿನ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ಪರ ಆಡುತ್ತಿದ್ದ ಫಿಲಿಪ್ ಹ್ಯೂಸ್ 63ರನ್‌ಗಳಿಸಿ ಉತ್ತಮವಾಗೇ ಆಡುತ್ತಿದ್ರು. ನ್ಯೂ ಸೌತ್‌ ವೇಲ್ಸ್‌ ವೇಗಿ ಸೀನ್ ಅಬೋಟ್ ಅವರ ಬೌನ್ಸರ್‌ ಅನ್ನು ಹುಕ್ ಮಾಡುವಲ್ಲಿ ಎಡವಿದ ಫಿಲಿಪ್ ಹ್ಯೂಸ್ ತಲೆಗೆ ಚೆಂಡು ಬಡಿದಿತ್ತು. ಇದಾದ ಕೆಲ ಸೆಕೆಂಡ್‌ಗಳಲ್ಲೇ ಫಿಲಿಫ್ ಹ್ಯೂಸ್ ಕುಸಿದು ಬಿದ್ದರು.

ಕ್ರಿಸ್‌ಗೇಲ್ ಬೀಳ್ಕೊಡುಗೆಗೆ ವೆಸ್ಟ್‌ ಇಂಡೀಸ್ ಕ್ರಿಕೆಟ್ ಬೋರ್ಡ್ ಯೋಜನೆ: ಜನವರಿಯಲ್ಲಿ ಕೊನೆಯ ಪಂದ್ಯ!ಕ್ರಿಸ್‌ಗೇಲ್ ಬೀಳ್ಕೊಡುಗೆಗೆ ವೆಸ್ಟ್‌ ಇಂಡೀಸ್ ಕ್ರಿಕೆಟ್ ಬೋರ್ಡ್ ಯೋಜನೆ: ಜನವರಿಯಲ್ಲಿ ಕೊನೆಯ ಪಂದ್ಯ!

ಆತನನ್ನ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದಾದ್ರೂ , ಎರಡು ದಿನಗಳ ಕಾಲ ಜೀವನ್ಮರಣಗಳ ಹೋರಾಟದ ಬಳಿಕ ಸಿಡ್ನಿಯ ಸೈಂಟ್ ವಿನ್ಸೆಂಟ್‌ ಹಾಸ್ಪೆಟ್‌ನಲ್ಲಿ ನವೆಂಬರ್ 27, 2014ರಂದು ಕೊನೆಯುಸಿರೆಳೆದರು.

ಈ ದುರಂತ ನಡೆಯುವ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಆಸ್ಟ್ರೇಲಿಯಾದಲ್ಲೆ ಇತ್ತು. ಈ ದುರಂತದಿಂದ ಆಸ್ಟ್ರೇಲಿಯಾ ಕ್ರಿಕೆಟಿಗರು ಆಘಾತಗೊಂಡಿದ್ದ ಹಿನ್ನೆಲೆಯಲ್ಲಿ ಸರಣಿಯಲ್ಲಿ ದಿನಾಂಕ ಬದಲಾವಣೆಗೆ ಸ್ಪಂದಿಸಿತ್ತು. ಬಿಸಿಸಿಐನ ಮಾನವೀಯ ಸಂದನೆಗೆ ಕ್ರಿಕೆಟ್ ಆಸ್ಟ್ರೆಲಿಯಾ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರು ಕೃತಜ್ಞತೆಯನ್ನು ಸಲ್ಲಿಸಿದ್ದರು.

ಇಂದು ಫಿಲಿಪ್ ಹ್ಯೂಸ್ ಕ್ರಿಕೆಟ್ ಲೋಕವನ್ನ ಅಗಲಿ ಏಳು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು #63 Not Out ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಫಿಲಿಪ್ ಹ್ಯೂಸ್‌ರನ್ನ ಮಿಸ್ ಮಾಡಿಕೊಂಡಿದ್ದಾರೆ. ವಿ ವಿಲ್ ಮಿಸ್‌ಯೂ ಫಿಲಿಫ್ #63 Not Out ಎಂದು ಬರೆದುಕೊಂಡಿದ್ದಾರೆ.

ಇನ್ನು ಆಸ್ಟ್ರೇಲಿಯಾ ಓಪನರ್ ಡೇವಿಡ್‌ ವಾರ್ನರ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಫಿಲಿಫ್ ಹ್ಯೂಸ್‌ನೊಂದಿಗಿನ ಫೋಟೋವನ್ನ ಪೋಸ್ಟ್ ಮಾಡಿದ್ದು, ಹ್ಯೂಸ್‌ರನ್ನ ಮಿಸ್‌ ಮಾಡಿಕೊಂಡಿದ್ದಾರೆ.

ಘಟನೆ ಬಳಿಕ ಐಸಿಸಿ ಕ್ರಿಕೆಟ್ ಕಿಟ್‌ನಲ್ಲಿ ಸಾಕಷ್ಟು ಸುಧಾರಣೆಗಳನ್ನ ತಂದಿತು. ಹೆಲ್ಮೆಟ್ ಸಂಪೂರ್ಣವಾಗಿ ತಲೆಗೆ ಕವರ್ ಆಗುವಂತೆ ಸುಧಾರಿಸಲಾಯಿತು. ಪಂದ್ಯದ ನಡುವೆ ಬ್ಯಾಟ್ಸ್‌ಮನ್ ಹೆಲ್ಮೆಟ್‌ಗೆ ಚೆಂಡು ಬಡಿದರೆ ತಕ್ಷಣವೇ, ಬ್ಯಾಟ್ಸ್‌ಮನ್‌ ಅನ್ನು ಅಂಪೈರ್ಸ್ ವಿಚಾರಿಸಬೇಕಾಗುತ್ತದೆ. ಆಟವನ್ನ ಮುಂದುವರಿಸಲು ಸಮರ್ಥರಾಗಿದ್ದೀರಾ? ಎಂದು ಕೇಳಿದ ಬಳಿಕವಷ್ಟೇ ಪಂದ್ಯ ಮುಂದುವರಿಸಲಾಗುವುದು.

Story first published: Saturday, November 27, 2021, 14:44 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X