ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೋಲ್ಟ್ 'ಸಿಕ್ಸರ್' ಕಿಂಗ್, ಯುವಿ 'ಸ್ಪೀಡ್' ಕಿಂಗ್

By Mahesh

ಬೆಂಗಳೂರು, ಸೆ.3 : ಜಗದೇಕ ಓಟಗಾರ ಉಸೇನ್ ಬೋಲ್ಟ್ ಹಾಗೂ ಭಾರತಕ್ಕೆ 2011ರ ಏಕದಿನ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಕ್ರಿಕೆಟಿಗ ಯುವರಾಜ್ ಸಿಂಗ್ ಮುಖಾಮುಖಿಗೆ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಮಂಗಳವಾರ ಸಾಕ್ಷಿಯಾಗಿತ್ತು. ಪ್ರದರ್ಶನ ಕ್ರಿಕೆಟ್ ಪಂದ್ಯದ ಜೊತೆಗೆ 100 ಮೀ. ಓಟದ ಸ್ಪರ್ಧೆ ಕೂಡಾ ಆಯೋಜಿಸಲಾಯಿತು.

ಭಾರತಕ್ಕೆ ಪ್ರಥಮ ಬಾರಿಗೆ ಬಂದ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಉಸೇನ್ ಬೋಲ್ಟ್ ಅವರನ್ನು ಸ್ಪರ್ಧೆಗಳ ಆಯೋಜಕರಾದ ಪ್ಯೂಮಾ ಸಂಸ್ಥೆ ಆತ್ಮೀಯವಾಗಿ ಸ್ವಾಗತಿಸಿತು. ಬೋಲ್ಟ್ ತಮ್ಮ ಕ್ರಿಕೆಟ್ ಕೌಶಲ್ಯ ಪ್ರದರ್ಶಿಸಿದರೆ, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಇಬ್ಬರು ಬೋಲ್ಟ್ ಸಮಕ್ಕೆ ಓಡಿದರು.[ಉಸೇನ್ ಬೋಲ್ಟ್ ಶರವೇಗದ ರಹಸ್ಯ]

ರೋಚಕ ಪಂದ್ಯ: ತಲಾ ಏಳು ಜನ ಆಟಗಾರರಿರುವ ತಂಡವನ್ನು ಬೋಲ್ಟ್ ಹಾಗೂ ಯುವರಾಜ್ ಮುನ್ನಡೆಸಿದರು. ತಲಾ ನಾಲ್ಕು ಓವರ್ ಗಳ ಪಂದ್ಯ ರೋಚಕವಾಗಿತ್ತು. 5 ಸಿಕ್ಸರ್ ಸಿಡಿಸಿದ ಉಸೇನ್ ಬೋಲ್ಟ್ ತಮ್ಮ ತಂಡಕ್ಕೆ ಜಯ ತಂದಿತ್ತರು. ಕ್ರಿಕೆಟ್ ಪಂದ್ಯ ಸೋತರೂ ಯುವಿ ಓಟದಲ್ಲಿ ಗೆದ್ದರು.

ಅದರೆ, ಜಗದೇಕ ಓಟಗಾರನನ್ನು 100 ಮೀ ಓಟದ ಸ್ಪರ್ಧೆಯಲ್ಲಿ ಹಿಂದಿಕ್ಕಿದ ಯುವರಾಜ್ ಸಿಂಗ್ ಖುಷಿಯಿಂದ ಕುಪ್ಪಳಿಸಿದರು. ಸ್ಪೀಡ್ ಕಿಂಗ್ vs ಸಿಕ್ಸರ್ ಕಿಂಗ್ ಆಟೋಟ ನೋಡಿದ ಪ್ರೇಕ್ಷಕರು ಹರ್ಷೋದ್ಗಾರ ಮಾಡಿ ಕುಣಿದಾಡಿದರು. ಉಸೇನ್ ಬೋಲ್ಟ್ ಹಾಗೂ ಯುವರಾಜ್ ಸಿಂಗ್ ನಡುವಿನ ಹಣಾಹಣಿ ಹಾಗೂ ಇನ್ನಿತರ ಚಿತ್ರಗಳು ಇಲ್ಲಿ ಮಾತ್ರ ನಿಮಗೆ ಕಾಣಲು ಸಾಧ್ಯ. ಚಿತ್ರಕೃಪೆ: ಅಪ್ರಮೇಯ ಸಿ. ಹಾಗೂ ಪಿಟಿಐ

ಸುದ್ದಿಗೋಷ್ಠಿಯೊಂದಿಗೆ ದಿನದ ಆರಂಭ

ಸುದ್ದಿಗೋಷ್ಠಿಯೊಂದಿಗೆ ದಿನದ ಆರಂಭ

ಪ್ಯೂಮಾ ಆಯೋಜನೆಯ ಈ ಆಟೋಟಕ್ಕಾಗಿ ಜಮೈಕಾದಿಂದ ಬೆಂಗಳೂರಿಗೆ ಮೊದಲ ಬಾರಿಗೆ ಬಂದ 6 ಬಾರಿ ಒಲಿಂಪಿಕ್ ಚಿನ್ನ ಗೆದ್ದಿರುವ ಉಸೇನ್ ಬೋಲ್ಟ್ ಸುದ್ದಿಗೋಷ್ಠಿಯಲ್ಲಿ ತಮ್ಮ ಟ್ರೇಡ್ ಮಾರ್ಕ್ ಬಿಲ್ಲು ಬಾಣದ ಭಂಗಿಯಲ್ಲಿ ಕಾಣಿಸಿಕೊಂಡರು.

ಬೋಲ್ಟ್ ಕೈಗೆ ಹೊಚ್ಚ ಹೊಸ ಶೂ

ಬೋಲ್ಟ್ ಕೈಗೆ ಹೊಚ್ಚ ಹೊಸ ಶೂ

ಬೋಲ್ಟ್ ಅವರು ಹೊಚ್ಚ ಹೊಸ ಪ್ಯೂಮಾ ಶೂ ಪಡೆದು ಅದರ ಮೇಲೆ ತಮ್ಮ ಹಸ್ತಾಕ್ಷರ ಹಾಕಿದರು.

ಬೋಲ್ಟ್ ಹಾಗೂ ಪ್ಯೂಮಾ ಎಂಡಿ ಜೊತೆ

ಬೋಲ್ಟ್ ಹಾಗೂ ಪ್ಯೂಮಾ ಎಂಡಿ ಜೊತೆ

ಉಸೇನ್ ಬೋಲ್ಟ್ ಅವರು ಪ್ಯೂಮಾ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಮೆಹ್ತಾ ಅವರ ಜೊತೆ ಹೊಸ ಶೂ ನೊಂದಿಗೆ

ಕ್ರಿಕೆಟ್ ಆಯೋಜನೆ ಉಸ್ತುವಾರಿ ಜಡೇಜಾಗೆ

ಕ್ರಿಕೆಟ್ ಆಯೋಜನೆ ಉಸ್ತುವಾರಿ ಜಡೇಜಾಗೆ

ಯುವರಾಜ್ ಸಿಂಗ್ ಹಾಗೂ ಉಸೇನ್ ಬೋಲ್ಟ್ ತಂಡದ ನಡುವಿನ ಕ್ರಿಕೆಟ್ ಆಯೋಜನೆ ಉಸ್ತುವಾರಿ ವಹಿಸಿಕೊಂಡಿದ್ದ ಮಾಜಿ ಕ್ರಿಕೆಟರ್ ಅಜಯ್ ಜಡೇಜ.

ಟಾಸ್ ಗಾಗಿ ಬೋಲ್ಟ್ ಯುವಿ ನಿರ್ಗಮನ

ಟಾಸ್ ಗಾಗಿ ಬೋಲ್ಟ್ ಯುವಿ ನಿರ್ಗಮನ

ಟಾಸ್ ಹಾಕಲು ಬೋಲ್ಟ್ ಹಾಗೂ ಯುವಿ ಪಿಚ್ ಕಡೆಗೆ ನಿರ್ಗಮನ

ಪಂದ್ಯಕ್ಕೆ ಆರಂಭ ವಿಘ್ನ, ಮಳೆ ಕಾಟ

ಪಂದ್ಯಕ್ಕೆ ಆರಂಭ ವಿಘ್ನ, ಮಳೆ ಕಾಟ

ಪಂದ್ಯಕ್ಕೆ ಆರಂಭ ವಿಘ್ನ ಎದುರಾಯಿತು, ಮಳೆ ಕಾಟದಿಂದ ನಾಲ್ಕು ಓವರ್ ಗಳ ಪಂದ್ಯ ಕೊಂಚ ವಿಳಂಬವಾಯಿತು.

ಕೆಎಸ್ ಸಿಎ ಸ್ಟೇಡಿಯಂನಲ್ಲಿ ಅಭೂತಪೂರ್ವ ದೃಶ್ಯ

ಕೆಎಸ್ ಸಿಎ ಸ್ಟೇಡಿಯಂನಲ್ಲಿ ಅಭೂತಪೂರ್ವ ದೃಶ್ಯ

ಕೆಎಸ್ ಸಿಎ ಸ್ಟೇಡಿಯಂನಲ್ಲಿ ಅಭೂತಪೂರ್ವ ದೃಶ್ಯ ಇದಾಗಿದ್ದು, ಮೊಟ್ಟ ಮೊದಲ ಬಾರಿಗೆ ಬೋಲ್ಟ್ vs ಯುವರಾಜ್ ಒಟ್ಟಿಗೆ ಕ್ರಿಕೆಟ್ ಅಂಗಳದಲ್ಲಿ ಆಟವಾಡಿದರು.

ಬೌಲ್ ಔಟ್ ಮೂಲಕ ಪಂದ್ಯ ಶುರು

ಬೌಲ್ ಔಟ್ ಮೂಲಕ ಪಂದ್ಯ ಶುರು

ಬೌಲ್ ಔಟ್ ಮೂಲಕ ಪಂದ್ಯ ಶುರುವಾಯಿತು. ಬೌಲೌಟ್ ನಲ್ಲಿ ಯುವಿ ಹಾಗೂ ಬೋಲ್ಟ್ ತಂಡ ಸಮಬಲ ಸಾಧಿಸಿತು.

ಪಂದ್ಯಕ್ಕೂ ಮುನ್ನ ಇಬ್ಬರಿಗೂ ಪಾಠ

ಪಂದ್ಯಕ್ಕೂ ಮುನ್ನ ಇಬ್ಬರಿಗೂ ಪಾಠ

ಪಂದ್ಯಕ್ಕೂ ಮುನ್ನ ಇಬ್ಬರಿಗೂ ಪಂದ್ಯದ ಬಗ್ಗೆ ಇಬ್ಬರು ನಾಯಕರಿಗೆ ಪಾಠ ಮಾಡಿದ ಜಡೇಜ

ಕ್ರಿಕೆಟ್ ಪಂದ್ಯಕ್ಕೆ ಇಬ್ಬರು ಅಂಪೈರ್ ಗಳು

ಕ್ರಿಕೆಟ್ ಪಂದ್ಯಕ್ಕೆ ಇಬ್ಬರು ಅಂಪೈರ್ ಗಳು

ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಗಳಾಗಿ ಕಾರ್ಯ ನಿರ್ವಹಿಸಿದ ಮುರಳೀಧರ್ ಹಾಗೂ ರವಿ.

ಬೋಲ್ಟ್ ನಿಂದ ಯುವಿಗೆ ಬೌಲ್

ಬೋಲ್ಟ್ ನಿಂದ ಯುವಿಗೆ ಬೌಲ್

ಯುವರಾಜ್ ಸಿಂಗ್ ಗೆ ಬೋಲ್ಟ್ ಬೌಲ್ ಮಾಡಿದ್ದು ಹೀಗೆ

ಜಮೈಕಾದ ಸ್ಪೀಡ್ ಕಿಂಗ್ ಬೌಲಿಂಗ್

ಜಮೈಕಾದ ಸ್ಪೀಡ್ ಕಿಂಗ್ ಬೌಲಿಂಗ್

ಜಮೈಕಾದ ಸ್ಪೀಡ್ ಕಿಂಗ್ ಬೌಲಿಂಗ್ ಶೈಲಿ ಹೀಗಿತ್ತು

ಬೆಂಗಳೂರಿನ ಮಳೆಗೆ ಒದ್ದೆಯಾದ ಚೆಂಡು

ಬೆಂಗಳೂರಿನ ಮಳೆಗೆ ಒದ್ದೆಯಾದ ಚೆಂಡು

ಬೆಂಗಳೂರಿನ ಮಳೆಗೆ ಒದ್ದೆಯಾದ ಚೆಂಡು ಜಮೈಕಾದ ವೇಗಿ ಕೈಗೆ ಸಿಲುಕಿದ್ದು ಹೀಗೆ

ಯುವರಾಜ್ ಸಿಂಗ್ ಬ್ಯಾಟಿಂಗ್ ಭಂಗಿ

ಯುವರಾಜ್ ಸಿಂಗ್ ಬ್ಯಾಟಿಂಗ್ ಭಂಗಿ

ಬೋಲ್ಟ್ ಎಸೆತ ಎದುರಿಸಿ ಬ್ಯಾಟ್ ಬೀಸಿದ ಎಡಗೈ ಆಟಗಾರ ಯುವರಾಜ್ ಸಿಂಗ್

ವೇಗದ ಬೌಲರ್ ರೂಪದಲ್ಲಿ ಜಗದೇಕ ವೇಗಿ

ವೇಗದ ಬೌಲರ್ ರೂಪದಲ್ಲಿ ಜಗದೇಕ ವೇಗಿ

ವೇಗದ ಬೌಲರ್ ರೂಪದಲ್ಲಿ ಜಗದೇಕ ವೇಗಿ ಬಾಲ್ ಗೆ ಶೈನಿಂಗ್ ನೀಡುತ್ತಿದ್ದಾರೆ.

ಸಿಕ್ಸರ್ ಕಿಂಗ್ ಆದ ವೇಗಿ ಉಸೇನ್ ಬೋಲ್ಟ್

ಸಿಕ್ಸರ್ ಕಿಂಗ್ ಆದ ವೇಗಿ ಉಸೇನ್ ಬೋಲ್ಟ್

ಸಿಕ್ಸರ್ ಕಿಂಗ್ ಆದ ವೇಗಿ ಉಸೇನ್ ಬೋಲ್ಟ್ ಬ್ಯಾಟ್ ಬೀಸಿದ ಭಂಗಿ

ಪಂದ್ಯದ ಫಲಿತಾಂಶ ಏನಾಯ್ತು?

ಪಂದ್ಯದ ಫಲಿತಾಂಶ ಏನಾಯ್ತು?

ತಲಾ 4 ಓವರ್ ಗಳ ಕ್ರಿಕೆಟ್ ಪಂದ್ಯದಲ್ಲಿ ಮೊದಲಿಗೆ ಯುವಿ ಮತ್ತು ಆದಿತ್ಯಾ ತಾರೆ ಬೋಲ್ಟ್ ​ ತಂಡದ ಬೌಲಿಂಗ್ ಎದುರಿಸಿ 58 ರನ್​ ಕಲೆ ಹಾಕಿದರು. ಉಸೇನ್​ ಬೋಲ್ಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ ಒಟ್ಟು 5 ಸಿಕ್ಸರ್​ ಸಿಡಿಸಿದರು. ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಿದ ಬೋಲ್ಟ್​​​ ತಂಡಕ್ಕೆ ಗೆಲುವು ತಂದಿತ್ತರು.

ಕೊನೆ ಓವರ್ ನ ರೋಚಕ ಕ್ಷಣ

ಕೊನೆ ಓವರ್ ನ ರೋಚಕ ಕ್ಷಣ

ಕೊನೆ ಓವರ್ ನಲ್ಲಿ ರೋಚಕ ಕ್ಷಣ ಎದುರಾಯಿತು. ಯುವರಾಜ್ ಸಿಂಗ್ ವಿಕೆಟ್ ಕೀಪರ್ ಆಗಿ ಬದಲಾದರು.

ಅಭಿಮಾನಿಗಳ ಜೊತೆ ಬೋಲ್ಟ್

ಅಭಿಮಾನಿಗಳ ಜೊತೆ ಬೋಲ್ಟ್

ಬೆಂಗಳೂರಿನ ಅಭಿಮಾನಿಗಳು ವಿಶ್ವದ ಅಗ್ರಗಣ್ಯ ಓಟಗಾರನ್ನು ಕಣ್ತುಂಬಿಸಿಕೊಂಡರು. ಭಾರತದಲ್ಲಿ ಇದು ನನ್ನ ಮೊದಲ ಓಟ. ಇಲ್ಲಿಗೆ ಬಂದು ನನ್ನ ಹೃದಯ ತುಂಬಿ ಬಂದಿದೆ. ನಿಮ್ಮ ಅಭಿಮಾನ ಪ್ರೀತಿಗೆ ನಾನು ಚಿರಋಣಿ ಎಂದು ಉಸೇನ್ ಬೋಲ್ಟ್ ಹೇಳಿದರು.

ಪಂದ್ಯಕ್ಕೂ ಮುನ್ನ ಸುದ್ದ್ಗಿಗೋಷ್ಠಿಯಲ್ಲಿ

ಪಂದ್ಯಕ್ಕೂ ಮುನ್ನ ಸುದ್ದ್ಗಿಗೋಷ್ಠಿಯಲ್ಲಿ

ಪಂದ್ಯಕ್ಕೂ ಮುನ್ನ ಸುದ್ದ್ಗಿಗೋಷ್ಠಿಯಲ್ಲಿ ಕಂಡು ಬಂದ ಬೋಲ್ಟ್, ಕ್ರಿಕೆಟ್ ಪಂದ್ಯವನ್ನು ಗೆಲ್ಲಿಸಪ್ಪ ದೇವರೇ ಎಂದು ಮೊರೆ ಇಡುವಂತಿತ್ತು.

ಪಂದ್ಯ ದೊಡ್ಡ ಸ್ಕ್ರೀನ್ ನಲ್ಲಿ ಪ್ರಸಾರ

ಪಂದ್ಯ ದೊಡ್ಡ ಸ್ಕ್ರೀನ್ ನಲ್ಲಿ ಪ್ರಸಾರ

ಪಂದ್ಯವನ್ನು ಚಿನ್ನಸ್ವಾಮಿ ಮೈದಾನದ ಬೃಹತ್ ಸ್ಕ್ರೀನ್ ನಲ್ಲಿ ಪ್ರಸಾರ ಮಾಡಲಾಯಿತು.

ಕ್ರಿಕೆಟ್ ನಂತರ ಯುವಿ, ಬೋಲ್ಟ್, ಭಜ್ಜಿ

ಕ್ರಿಕೆಟ್ ನಂತರ ಯುವಿ, ಬೋಲ್ಟ್, ಭಜ್ಜಿ

ಕ್ರಿಕೆಟ್ ನಂತರ ಯುವಿ, ಬೋಲ್ಟ್, ಭಜ್ಜಿ ಬಿಲ್ಲುಬಾಣ ಭಂಗಿಯಲ್ಲಿ ನಿಂತು ಪೋಸ್ ಕೊಟ್ಟರು.

ಫೋಟೊ ಗ್ರಾಫರ್ ಆದ ಯುವರಾಜ್

ಫೋಟೊ ಗ್ರಾಫರ್ ಆದ ಯುವರಾಜ್

ಫೋಟೊ ಗ್ರಾಫರ್ ಆದ ಯುವರಾಜ್, ಬೋಲ್ಟ್ ಹಾಗೂ ಹರ್ಭಜನ್ ಚಿತ್ರ ತೆಗೆದುಕೊಂಡರು.

ಕೆಎಸ್ ಸಿಎ ನಿಂದ ಬೋಲ್ಟ್ ಗೆ ಸನ್ಮಾನ

ಕೆಎಸ್ ಸಿಎ ನಿಂದ ಬೋಲ್ಟ್ ಗೆ ಸನ್ಮಾನ

ಮೊದಲ ಬಾರಿಗೆ ಬೆಂಗಳೂರಿಗೆ ಬಂದಿರುವ ಅತಿಥಿ ಉಸೇನ್​​ ಬೋಲ್ಟ್ ಗೆ ಗೆ ಮೈಸೂರು ಪೇಟ ತೊಡಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಗೌರವಿಸಿತು. ಅಷ್ಟೇ ಅಲ್ಲ ಕೆಎಸ್​ಸಿಎ ಅಜೀವ ಸದಸ್ಯತ್ವವನ್ನು ಕೂಡ ನೀಡಿತು.

ಕೆಎಸ್ ಸಿಎನಲ್ಲಿ ಅತ್ಯಂತ ಸಂತಸದ ಕ್ಷಣ

ಕೆಎಸ್ ಸಿಎನಲ್ಲಿ ಅತ್ಯಂತ ಸಂತಸದ ಕ್ಷಣ

ಯುವಿ ಹಾಗೂ ಬೋಲ್ಟ್ ನಡುವಿನ ಕದನ ಮುಕ್ತಾಯವಾದ ನಂತರ ಕೆಎಸ್ ಸಿಎನಲ್ಲಿ ಅತ್ಯಂತ ಸಂತಸದ ಕ್ಷಣ

ಅಂಪೈರ್ ಗಳ ಜೊತೆಯಲ್ಲಿ ಚಿತ್ರ

ಅಂಪೈರ್ ಗಳ ಜೊತೆಯಲ್ಲಿ ಚಿತ್ರ

ಯುವರಾಜ್ ಸಿಂಗ್ ಹಾಗೂ ಉಸೇನ್ ಬೋಲ್ಟ್ ಇಬ್ಬರು ಅಂಪೈರ್ ಗಳ ಜೊತೆ ಫೋಟೋ

ಬೋಲ್ಟ್ ಹಸ್ತಾಕ್ಷರ ಪಡೆದ ಅಂಪೈರ್

ಬೋಲ್ಟ್ ಹಸ್ತಾಕ್ಷರ ಪಡೆದ ಅಂಪೈರ್

ಬೋಲ್ಟ್ ಹಸ್ತಾಕ್ಷರ ಪಡೆದ ಅಂಪೈರ್ ಮುರಳೀಧರ್

ಬೋಲ್ಟ್ ಫೀಲ್ಡರ್ ಆಗಿ ಕಂಡಿದ್ದು ಹೀಗೆ

ಬೋಲ್ಟ್ ಫೀಲ್ಡರ್ ಆಗಿ ಕಂಡಿದ್ದು ಹೀಗೆ

ಬೋಲ್ಟ್ ಫೀಲ್ಡರ್ ಆಗಿ ಕಂಡಿದ್ದು ಹೀಗೆ

ಯಾರಿಗೆ ಗೆಲುವು?

ಯಾರಿಗೆ ಗೆಲುವು?

100 ಮೀ. ಓಟದಲ್ಲಿ 9.58 ಸೆಕೆಂಡುಗಳ ಜರ್ಸಿ ತೊಟ್ಟ ವಿಶ್ವದಾಖಲೆ ವೀರ ಬೋಲ್ಟ್ ರನ್ನು ಸೋಲಿಸಿದ ಯುವರಾಜ್ ಸಿಂಗ್

ಬೆಂಗಳೂರಿಗೆ ಬೈ ಬೈ ಹೇಳಿದ ಬೋಲ್ಟ್

ಬೆಂಗಳೂರಿಗೆ ಬೈ ಬೈ ಹೇಳಿದ ಬೋಲ್ಟ್

ಬೆಂಗಳೂರಿಗೆ ಬೈ ಬೈ ಹೇಳಿದ ಉಸೇನ್ ಬೋಲ್ಟ್

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X