ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಾಯಗೊಂಡ ಪೃಥ್ವಿ ಶಾ; ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಅಲಭ್ಯ

Prithvi Shaw likely to miss New Zealand Tests

ಟೀಮ್ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ರಣಜಿ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಪೃಥ್ವಿ ಶಾ ಕೈಗೊಳ್ಳಬೇಕಿದ್ದ ನ್ಯೂಜಿಲ್ಯಾಂಡ್ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಭಾರತ ಎ ತಂಡ ನ್ಯೂಜಿಲ್ಯಾಂಡ್ ಪ್ರವಾಸ ತೆರಳಿ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯವನ್ನು ನ್ಯೂಜಿಲ್ಯಾಂಡ್ 'ಎ' ತಂಡದ ವಿರುದ್ಧ ಆಡಬೇಕಿದೆ.

ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಪೃಥ್ವಿ ಶಾ ಮೊದಲ ಇನ್ನಿಂಗ್ಸ್‌ನಲ್ಲಿ ಗಾಯಗೊಂಡಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಪೃಥ್ವಿ ಶಾ ತಂಡದ ಪರವಾಗಿ ಬ್ಯಾಟಿಂಗ್‌ಗಿಳಿಯಲು ಸಾಧ್ಯವಾಗಿರಲಿಲ್ಲ. ಬಳಿಕ ಬೆಂಗಳೂರಿನ ಎನ್‌ಸಿಎಗೆ ಪೃಥ್ವಿ ಶಾ ಆಗಮಿಸಿದ್ದಾರೆ. ಪೃಥ್ವಿ ಶಾ ಭುಜದ ಎಂಆರ್ಐ ಸ್ಕ್ಯಾನಿಂಗ್ ಮಾಡಲಾಗಿದ್ದು, ಲ್ಯಾಬರಲ್ ಟಿಯರ್ ಇರುವುದು ಧೃಡಪಟ್ಟಿದೆ.

ಇಂದೋರ್ ಕ್ರೀಡಾಂಗಣದಲ್ಲಿ ಸೋಲಿಲ್ಲದ ಸಾಧನೆಯೇ ಟೀಮ್ ಇಂಡಿಯಾಗೆ ಸ್ಪೂರ್ತಿಇಂದೋರ್ ಕ್ರೀಡಾಂಗಣದಲ್ಲಿ ಸೋಲಿಲ್ಲದ ಸಾಧನೆಯೇ ಟೀಮ್ ಇಂಡಿಯಾಗೆ ಸ್ಪೂರ್ತಿ

ಪೃಥ್ವಿ ಶಾ 16 ತಿಂಗಳ ಹಿಂದೆಯಷ್ಟೇ ಟೀಮ್ ಇಂಡಿಯಾ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಪೃಥ್ವಿ ಶಾ ಮೂರು ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದಾರೆ. ಬಳಿಕ ಟೀಮ್ ಇಂಡಿಯಾಗೆ ಮರಳಲು ಶಾ ಗೆ ಸಾಧ್ಯವಾಗಿಲ್ಲ.

ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಪೃಥ್ವಿ ಶಾ 6 ತಿಂಗಳ ನಿಶೇಧಕ್ಕೆ ಗುರಿಯಾಗಿದ್ದರು. ಕಳೆದ ನವೆಂಬರ್‌ನಲ್ಲಿ ಸೈಯ್ಯದ್ ಮುಶ್ತಾಕ್ ಅಲಿ ಟೂರ್ನಿಯಲ್ಲಿ ಭಾಗವಹಿಸುವ ಮೂಲಕ ದೇಸಿ ಟೂರ್ನಿಯಲ್ಲಿ ಮತ್ತೆ ಮಿಂಚು ಹರಿಸಲು ಆರಂಭಿಸಿದರು. ಬಳಿಕ ರಣಜಿ ಪಂದ್ಯದಲ್ಲಿ ಒಂದು ದ್ವಿ ಶತಕ ಹಾಗೂ ಒಂದು ಅರ್ಧ ಶತಕವನ್ನು ಈ ಋತುವಿನಲ್ಲಿ ಗಳಿಸಿದ್ದಾರೆ.

ಸಾರ್ವಕಾಲಿಕ ದಾಖಲೆ ಬರೆದ ರಾಸ್‌ ಟೇಯ್ಲರ್: ಮಾಧ್ಯಮದ ಮುಂದೆ ಕಣ್ಣೀರು!ಸಾರ್ವಕಾಲಿಕ ದಾಖಲೆ ಬರೆದ ರಾಸ್‌ ಟೇಯ್ಲರ್: ಮಾಧ್ಯಮದ ಮುಂದೆ ಕಣ್ಣೀರು!

ಶಾಲಾ ಟೂರ್ನಿಯಲ್ಲಿ 546 ಎಸೆತಗಳಲ್ಲಿ 330 ರನ್ ಬಾರಿಸಿ ಗಮನ ಸೆಳೆದಿದ್ದ ಪೃಥ್ವಿ ಶಾ ದುಲೀಪ್ ಟ್ರೋಫಿಯಲ್ಲಿ ಅವಕಾಶಗಿಟ್ಟಿಸಿ ಮಿಂಚಿದರು. ಬಳಿಕ ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಹೆಗ್ಗಳಿಕೆಯೂ ಪೃಥ್ವಿ ಶಾ ಅವರದ್ದು. ಅದಾದ ಬಳಿಕ ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆದ ಪೃಥ್ವಿ ಟೀಮ್ ಇಂಡಿಯಾಗೆ 2018ರಲ್ಲಿ ಪದಾರ್ಪಣೆ ಮಾಡಿದ್ದಾರೆ.

Story first published: Tuesday, January 7, 2020, 19:48 [IST]
Other articles published on Jan 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X