ಐಪಿಎಲ್ ಅಂಗಳಕ್ಕೆ ಇಳಿದಿದ್ದಾಳೆ ಕಣ್ ಮಿಟುಕು ಚೆಲುವೆ ಪ್ರಿಯಾ ವಾರಿಯರ್

Posted By:
Priya Prakash Varrier acted in Munch chocolate advertisement

ಒಂದೇ ಒಂದು ಬಾರಿ ಕಣ್ಣು ಹೊಡೆದು ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಕೇರಳದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಐಪಿಎಲ್ ಅಂಗಳಕ್ಕೆ ಇಳಿದಿದ್ದಾರೆ.

ಐಪಿಎಲ್‌ನಲ್ಲಿ ಯಾರನ್ನೋ ನೋಡಿ ಕಣ್ಣು ಹೊಡೆಯಲು ಬಂದಿರಬೇಕು ಎಂದು ಊಹಿಸಿದರೆ ನೀಮ್ಮ ಊಹೆ ತಪ್ಪು. ಆಕೆ ಬಂದಿರುವುದು ಜಾಹೀರಾತಿನಲ್ಲಿ. ಐಪಿಎಲ್‌ ಋತುವಿಗಾಗಿ ಮಾಡಿದ ಜಾಹೀರಾತೊಂದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿದ್ದಾರೆ.

ಒರು ಆಡರ್ ಲವ್ ಸ್ಟೋರಿ ಸಿನಿಮಾದ ಹಾಡಿನ ಒಂದು ಸಣ್ಣ ತುಣುಕುನಿಂದ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಇದು ಮೊದಲ ಜಾಹೀರಾತಾಗಿದ್ದು. 25 ಸೆಕೆಂಡ್‌ನ ಈ ಜಾಹಿರಾತಿನಲ್ಲಿ ಪ್ರಿಯಾ ಪ್ರಕಾಶ್‌ ಗಮನ ಸೆಳೆಯುತ್ತಾರೆ.

Priya Prakash Varrier acted in Munch chocolate advertisement

ತನ್ನ ಕಣ್‌ನಿಂದ ದೇಶದ ಗಮನ ಸೆಳೆದಿದ್ದ ಪ್ರಿಯಾ ಪ್ರಕಾಶ್‌ ಅವರ ಖ್ಯಾತಿಯನ್ನು ಜಾಹಿರಾತುದಾರರು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಪ್ರಿಯಾ ಪ್ರಕಾಶ್ ಎಷ್ಟರ ಮಟ್ಟಿಗೆ ಯಶಸ್ಸು ಗಳಿಸುತ್ತಾರೊ ಕಾದು ನೋಡಬೇಕು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 16, 2018, 18:04 [IST]
Other articles published on Apr 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ