ನವದೆಹಲಿ: ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸದ ವೇಳೆ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದರು. ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಆಡಿದ್ದ ಅಶ್ವಿನ್ 28.83ರ ಸರಾಸರಿಯಲ್ಲಿ 12 ವಿಕೆಟ್ ಉರುಳಿಸಿದ್ದರು. ಸಿಡ್ನಿ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಅಶ್ವಿನ್ ಸೋಲುವ ಪಂದ್ಯದಲ್ಲಿ ಭಾರತವನ್ನು ಬಚಾವ್ ಮಾಡಿಸಿದ್ದರು.
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ!
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಶ್ವಿನ್ ಅವರ ಪ್ರದರ್ಶನ ಇಂಗ್ಲೆಂಡ್‌ನ ಭಾರತ ಪ್ರವಾಸ ಸರಣಿಯಲ್ಲೂ ಮುಂದುವರೆದಿದೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದ ಅಶ್ವಿನ್, 119 (106+13) ರನ್ ಕೊಡುಗೆಯೂ ನೀಡಿದ್ದರು. ಈ ಪಂದ್ಯದಲ್ಲಿ ಭಾರತ 317 ರನ್‌ಗಳ ಭರ್ಜರಿ ಜಯ ಗಳಿಸಿತ್ತು.
ಆದರೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇತ್ತೀಚೆಗೆ ಐದು ಪಂದ್ಯಗಳ ಟಿ20ಐ ಸರಣಿಗಾಗಿ ಪ್ರಕಟಿಸಿದ್ದ ತಂಡದಲ್ಲಿ ಆರ್ ಅಶ್ವಿನ್ ಹೆಸರಿರಲಿಲ್ಲ. ಹೀಗಾಗಿ, ಅಶ್ವಿನ್ ಅವರನ್ನು ವೈಟ್‌ಬಾಲ್‌ನಲ್ಲಿ ಪರಿಗಣಿಸದಿರುವುದು ದುರದೃಷ್ಟಕರ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹೇಳಿದ್ದಾರೆ.
ಟಿಆರ್‌ಎಸ್ ಎಂಎಲ್‌ಎಯಿಂದ ಐಪಿಎಲ್ ಪಂದ್ಯಗಳ ನಿಲ್ಲಿಸುವ ಬೆದರಿಕೆ!
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗಂಭೀರ್, '400 ವಿಕೆಟ್‌ಗಳ ಸಮೀಪದಲ್ಲಿರುವ ಆಟಗಾರ ಮತ್ತು ಟೆಸ್ಟ್‌ನಲ್ಲಿ 5 ಬಾರಿ ಶತಕ ಬಾರಿಸಿದ ಆಟಗಾರ ವೈಟ್‌ಬಾಲ್ ಕ್ರಿಕೆಟ್‌ನ ಭಾಗವಾಗದಿರುವುದು ತುಂಬಾ ದುರದೃಷ್ಟ ಸಂಗತಿ. ಅಶ್ವಿನ್ ಈಗ ಅದ್ಭುತ ಫಾರ್ಮ್‌ನಲ್ಲಿದ್ದಾರೆ,' ಎಂದು ಅಭಿಪ್ರಾಯಿಸಿದ್ದಾರೆ.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ