ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ರಾಹುಲ್ ದ್ರಾವಿಡ್ ಎದುರು ನಾನೊಬ್ಬ 11ರ ಹರೆಯದ ಮಗು ಅನ್ನಿಸುತ್ತಿತ್ತು'

Rahul Dravid made me feel like 11-year-old kid: Graeme Swann

ಬೆಂಗಳೂರು, ಏಪ್ರಿಲ್ 17: ಟೀಮ್ ಇಂಡಿಯಾದ ಶಕ್ತಿಯಾಗಿದ್ದವರು ಕರ್ನಾಟಕದ ಆಟಗಾರ, ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರು. ದ್ರಾವಿಡ್ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಕೆಂಟ್ ಪರ ಆಡಿದ್ದಾರೆ. ದ್ರಾವಿಡ್, ಕೆಂಟ್‌ನಲ್ಲಿ ಆಡುವಾಗ ಇಂಗ್ಲೆಂಡ್ ಮಾಜಿ ಆಫ್‌ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರಿಗೆ ತಾನೊಬ್ಬ ಪುಟ್ಟ ಮಗು ಅನ್ನಿಸುತ್ತಿತ್ತಂತೆ.

ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!

ನನ್ನನ್ನು ನಾನು ಮಗುವಿನಂತೆ ಭಾವಿಸುವಂತೆ ರಾಹುಲ್ ದ್ರಾವಿಡ್ ಮಾಡುತ್ತಿದ್ದರು ಎಂದು ಸ್ವತಃ ಗ್ರೇಮ್ ಸ್ವಾನ್ ಅವರೇ ಹೇಳಿಕೊಂಡಿದ್ದಾರೆ. ಇಂಗ್ಲೆಂಡ್ ಕೌಂಟಿ ತಂಡದಲ್ಲಿ ಆಡುವಾಗ ಜಾನ್ ರೈಟ್ ತರಬೇತಿಯಡಿಯಲ್ಲಿ ದ್ರಾವಿಡ್ ಇದ್ದರು.

ನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗನಾಯಕನಾಗಿ ಕೊಹ್ಲಿ, ರೋಹಿತ್ ನಡುವಿನ ವ್ಯತ್ಯಾಸ ತಿಳಿಸಿದ ಕಿವೀಸ್ ಕ್ರಿಕೆಟಿಗ

ಕೌಂಟಿ ಕ್ರಿಕೆಟ್‌ ಆಡುವಾಗಿನ ಕ್ಷಣವನ್ನು ಸ್ಮರಿಸಿಕೊಂಡ ಸ್ವಾನ್, 'ಆ ದಿನ ರಾಹುಲ್ ದ್ರಾವಿಡ್ ನನ್ನ ಪಾಲಿಗೆ ಬಲುದೊಡ್ಡ ಆಟಗಾರನಾಗಿದ್ದರು. ಅವರು ಕೆಂಟ್ ಪರ ಆಡುವಾಗ ನಾನು ಬೌಲಿಂಗ್ ಮಾಡಿದೆ. ಆಗೆಲ್ಲ ನನಗೆ ದ್ರಾವಿಡ್ ಒಬ್ಬರು ಅದ್ಭುತ ಆಟಗಾರ ಅನ್ನಿಸುತ್ತಿತ್ತು,' ಎಂದು ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಹೇಳಿಕೊಂಡರು.

'ನಾನೇನು ಹುಚ್ಚನಾ, 300 ಪಂದ್ಯಗಳನ್ನು ಆಡಿದ್ದೇನೆ'.. ಧೋನಿ ಆಕ್ರೋಶಕ್ಕೆ ಕುಲ್‌ದೀಪ್ ಕೊಟ್ರು ಕಾರಣ'ನಾನೇನು ಹುಚ್ಚನಾ, 300 ಪಂದ್ಯಗಳನ್ನು ಆಡಿದ್ದೇನೆ'.. ಧೋನಿ ಆಕ್ರೋಶಕ್ಕೆ ಕುಲ್‌ದೀಪ್ ಕೊಟ್ರು ಕಾರಣ

'ಕೌಂಟಿ ಪಂದ್ಯದಲ್ಲಿ ರಾಹುಲ್ ಸುಲಭವಾಗಿ ಔಟೇ ಆಗುತ್ತಿರಲಿಲ್ಲ. ನಾನು ದ್ರಾವಿಡ್ ಅವರಂತ ಆಟಗಾರರನ್ನು ನೋಡಿಯೇ ಇರಲಿಲ್ಲ. ಅವರೊಬ್ಬರು ವಿಶ್ವಶ್ರೇಷ್ಠ ಆಟಗಾರ. ಅವರೆದುರು ನಾನೊಬ್ಬ 11ರ ಹರೆಯದ ಸ್ಪಿನ್ನರ್ ಎನಿಸುತ್ತಿತ್ತು,' ಎಂದು ಸ್ವಾನ್ ವಿವರಿಸಿದರು.

ದಾಲ್ಮಿಯಾ ಅಲ್ಲದಿದ್ದರೆ ಅಖ್ತರ್ ಕ್ರಿಕೆಟ್ ಜೀವನ 2000ದಲ್ಲೇ ಅಂತ್ಯ: ಮಾಜಿ ಪಿಸಿಬಿ ಅಧ್ಯಕ್ಷದಾಲ್ಮಿಯಾ ಅಲ್ಲದಿದ್ದರೆ ಅಖ್ತರ್ ಕ್ರಿಕೆಟ್ ಜೀವನ 2000ದಲ್ಲೇ ಅಂತ್ಯ: ಮಾಜಿ ಪಿಸಿಬಿ ಅಧ್ಯಕ್ಷ

'ಒಂದು ಬಾರಿ ನಾನು ದ್ರಾವಿಡ್ ಅವರನ್ನು ಔಟ್ ಮಾಡಿದ್ದೆ. ಅದು ನಿಜಕ್ಕೂ ಗ್ರೇಟ್ ಬಾಲ್. ಯಾವತ್ತೂ ಔಟ್ ಆಗದ ದ್ರಾವಿಡ್ ಆವತ್ತು ಅಚಾನಕ್ ಔಟಾಗಿದ್ದರು,' ಎಂದು ಗ್ರೇಮ್ ಸ್ವಾನ್ ಪಂದ್ಯದ ಕ್ಷಣ ಸ್ಮರಿಸಿಕೊಂಡರು. ಅಂದ್ಹಾಗೆ ಇಂಗ್ಲೆಂಡ್ ಕೌಂಟಿಯಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡಿದ್ದರು.

Story first published: Saturday, April 18, 2020, 0:01 [IST]
Other articles published on Apr 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X