ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಟ್ಲರ್ 'ಮಂಕಡ್ ರನೌಟ್' ಬಗ್ಗೆ ಗ್ರೇಟ್ ವಾಲ್ ರಾಹುಲ್ ಮಾತು ಕೇಳಿ!

Rahul Dravid weighs in on R Ashwin – Jos Buttler Mankad incident

ಬೆಂಗಳೂರು, ಮಾರ್ಚ್ 27: ಐಪಿಎಲ್‌ನ ಕಿಂಗ್ಸ್‌ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್ ಅವರು ರಾಜಸ್ಥಾನ್ ಆಟಗಾರ ಜಾಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿದ್ದರು. ಈ ವಿವಾದದ ಬಗ್ಗೆ ಭಾರತದ ಕ್ರಿಕೆಟ್ ದಂತಕತೆ, ಕನ್ನಡಿಗ ರಾಹುಲ್ ದ್ರಾವಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಮಾಂಕೆಡೆಡ್‌' ಎಂದರೇನು? ಅಶ್ವಿನ್ ಮಾಡಿದ್ದು ಸರಿಯೋ, ತಪ್ಪೋ? (ಮಂಕಡ್ ರನೌಟ್ ಪೂರ್ಣ ಮಾಹಿತಿಗಾಗಿ ಈ ಸ್ಟೋರಿ ಓದಿ)

'ಮಂಕಡ್ ಕ್ರಿಕೆಟ್ ನಿಯಮದ ಒಳಗೇ ಬರುವುದರಿಂದ ಯಾರಾದರೂ ಒಬ್ಬರನ್ನು ಆ ರೀತಿ ಔಟ್ ಮಾಡಬಯಸಿದರೆ ಅದು ತಪ್ಪಲ್ಲ. ಅಶ್ವಿನ್ ಅವರ ಹಕ್ಕಿನಾನುಸಾರ ಬಟ್ಲರ್ ಅವರನ್ನು ಔಟ್ ಮಾಡಿದ್ದಾರೆ. ಆದರೆ ವೈಯಕ್ತಿಕವಾಗಿ ನಾನು ಅದಕ್ಕೆ ಆದ್ಯತೆ ಕೊಡುವುದಿಲ್ಲ' ಎಂದು ದ್ರಾವಿಡ್ ಹೇಳಿದ್ದಾರೆ.

ಐಪಿಎಲ್ 2019: ಗೇಲ್ ಅಬ್ಬರ, ರಾಜಸ್ಥಾನ್‌ಗೆ ಸೋಲುಣಿಸಿದ ಪಂಜಾಬ್!ಐಪಿಎಲ್ 2019: ಗೇಲ್ ಅಬ್ಬರ, ರಾಜಸ್ಥಾನ್‌ಗೆ ಸೋಲುಣಿಸಿದ ಪಂಜಾಬ್!

ಕ್ರಿಕೆಟ್ ಪ್ರತಿಭೆಗಾಗಿ ವಿಶ್ವದ ಗಮನ ಸೆಳೆದ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಮಾತಿನಲ್ಲಿ ಅರ್ಥವಿದೆ. ಕ್ರೀಡೆಯಲ್ಲಿ ನಿಯಮಕ್ಕೂ ಮೀರಿದ ವಿಚಾರಗಳಿರುತ್ತವೆ. ಗೆಲ್ಲುವ ಹಪಹಪಿಯಲ್ಲಿ ನಿರ್ಭಾವುಕರಾಗುವುದು ಸರಿಯಲ್ಲ ಎಂಬರ್ಥದಲ್ಲಿ ದ್ರಾವಿಡ್ ಮಾತನಾಡಿದ್ದಾರೆ.

ರಿಯಲ್ ಜಂಟಲ್‌ ಮ್ಯಾನ್‌ನ ಮಾತು

ರಿಯಲ್ ಜಂಟಲ್‌ ಮ್ಯಾನ್‌ನ ಮಾತು

'ಮಂಕಡ್ ರನೌಟ್ ಕ್ರಿಕೆಟ್ ಆಟದ ನಿಯಮದದೊಳಗೇ ಬರುತ್ತದೆ. ಯಾರಾದರೂ ಯಾರನ್ನಾದರೂ ಹಾಗೆ ಔಟ್ ಮಾಡಬಯಸಿದರೆ ಅದು ಔಟೇ. ಆದರೆ ಒಬ್ಬ ಆಟಗಾರನನ್ನು ಎದುರಾಳಿ ಆಟಗಾರ ಮಂಕಡ್ ರೀತಿಯಲ್ಲಿ ಔಟ್ ಮಾಡುವ ಮೊದಲು ಆತನಿಗೆ ಎಚ್ಚರಿಕೆ ನೀಡುವುದಕ್ಕೆ ನಾನು ಆದ್ಯತೆ ನೀಡುತ್ತೇನೆ' ಎಂದು ಜಂಟಲ್ ಮ್ಯಾನ್‌ ಗೇಮ್‌ನ ರಿಯಲ್ ಜಂಟಲ್ ಮ್ಯಾನ್ ದ್ರಾವಿಡ್ ಹೇಳಿದ್ದಾರೆ.

ಪಂಜಾಬ್‌ಗೆ ರೋಚಕ ಗೆಲುವು

ಪಂಜಾಬ್‌ಗೆ ರೋಚಕ ಗೆಲುವು

ಸೋಮವಾರ (ಮಾರ್ಚ್ 25) ಜೈಪುರ್ ಸ್ಟೇಡಿಯಂನಲ್ಲಿ ನಡೆದಿದ್ದ ರಾಜಸ್ಥಾನ್ vs ಪಂಜಾಬ್ ಪಂದ್ಯದಲ್ಲಿ ಬಟ್ಲರ್ ಅವರನ್ನು ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡ್ ರನೌಟ್ ಮಾಡಿದ್ದರು. ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತರುವುದರಲ್ಲಿದ್ದ ಬಟ್ಲರ್ ಔಟ್ ಆಗಿದ್ದರಿಂದ ಪಂದ್ಯದ ಫಲಿತಾಂಶ ಪಂಜಾಬ್ ಕಡೆಗೆ ವಾಲಿತ್ತು. ಕೆXIಪಿ 14 ರನ್‌ಗಳಿಂದ ಗೆದ್ದಿತ್ತು. ಆದರೆ ಬಟ್ಲರ್ ಔಟ್ ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲರಿಗೂ ಸರಿ ಕಂಡಿರಲಿಲ್ಲ. ಈ ರನೌಟ್ ವಿವಾದಕ್ಕೆ ಗುರಿಯಾಗಿತ್ತು.

ಮಂಕಡ್ ರನೌಟ್ ಅವಶ್ಯಕತೆಯಿರಲಿಲ್ಲ

ಮಂಕಡ್ ರನೌಟ್ ಅವಶ್ಯಕತೆಯಿರಲಿಲ್ಲ

ಮಾತು ಮುಂದುವರೆಸಿದ ದ್ರಾವಿಡ್, 'ಇದು ನನ್ನ ವೈಯಕ್ತಿಕ ಆಯ್ಕೆ. ಆದರೆ ಒಬ್ಬ ವ್ಯಕ್ತಿಯ ದೃಷ್ಟಿಕೋನವನ್ನು ನಾವು ವಿಭಿನ್ನ ರೀತಿಯಲ್ಲಿ ಯೋಚಿಸುವುದನ್ನು ನಾನು ಗೌರವಿಸುತ್ತೇನೆ. ಒಟ್ಟಿನಲ್ಲಿ ಬಟ್ಲರ್ ಅವರನ್ನು ಹಾಗೆ ಔಟ್ ಮಾಡುವ ಅವಶ್ಯಕತೆಯಿತ್ತು ಎಂಬುದನ್ನು ನಾನು ಒಪ್ಪಲಾರೆ' ಎ೦ದರು.

ವಿನು ಮಂಕಡ್ ಹೆಸರು

ವಿನು ಮಂಕಡ್ ಹೆಸರು

ಈ ರೀತೀಯ ರನೌಟ್‌ಗೆ ಹೆಸರು ಬರಲು ಕಾರಣ ಭಾರತದ ವಿನು ಮಂಕಡ್ ಅವರು. 1947 ರಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿ ವಿನು ಮಾಂಕಡ್ ಅವರು ಆಸ್ಟ್ರೇಲಿಯಾದ ಆಟಗಾರ ಬಿಲ್ ಬ್ರೋವ್ನ್‌ ಅವರನ್ನು ಎರಡು ಬಾರಿ ಚೆಂಡು ಎಸೆಯುವ ಮುನ್ನವೇ ರನ್ ಔಟ್ ಮಾಡಿದ್ದರು. ಆದರೆ ಹಾಗೆ ರನ್‌ಔಟ್ ಮಾಡುವುದಕ್ಕೂ ಮುನ್ನ ವಿನು ಅವರು ಬೋವ್ನ್‌ಗೆ ಚೆಂಡು ಎಸೆಯುವುದಕ್ಕೂ ಮುನ್ನ ಕ್ರೀಸ್ ಬಿಡದಂತೆ ಎಚ್ಚರಿಕೆ ನೀಡಿದ್ದರು!

Story first published: Wednesday, March 27, 2019, 16:53 [IST]
Other articles published on Mar 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X