ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ 2022: ಸೆಮಿಫೈನಲ್‌ನಲ್ಲಿ ಯುಪಿ ವಿರುದ್ಧ ಡ್ರಾ; 47ನೇ ಬಾರಿ ಫೈನಲ್‌ ತಲುಪಿದ ಮುಂಬೈ

Ranji Trophy 2022: Draw Against UP in Semifinals; Mumbai Reached The Final For The 47th Time

ಬೆಂಗಳೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಉತ್ತರ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡ ನಂತರ ಮುಂಬೈ ಶನಿವಾರ ತನ್ನ 47ನೇ ಫೈನಲ್ ತಲುಪಿದೆ.

ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಮುಂಬೈ ಫೈನಲ್‌ಗೆ ಅರ್ಹತೆ ಪಡೆದಿದ್ದು, ರಣಜಿ ಪಂದ್ಯಾವಳಿಯ ಇತಿಹಾಸದಲ್ಲಿ 41 ಪ್ರಶಸ್ತಿಗಳೊಂದಿಗೆ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ, ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜೂನ್ 22-26 ರವರೆಗೆ ನಡೆಯುವ ಫೈನಲ್‌ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದೆ.

ಯಶಸ್ವಿ ಜೈಸ್ವಾಲ್ ಪಂದ್ಯ ಶ್ರೇಷ್ಠ ಆಟಗಾರ

ಯಶಸ್ವಿ ಜೈಸ್ವಾಲ್ ಪಂದ್ಯ ಶ್ರೇಷ್ಠ ಆಟಗಾರ

ಇನ್ನು ಮಧ್ಯಪ್ರದೇಶ ಕೊನೆಯದಾಗಿ ಫೈನಲ್ ಆಡಿದ ನಂತರ ಮುಂಬೈ ಎಂಟು ಬಾರಿ ರಣಜಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 100 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 181 ರನ್ ಗಳಿಸಿ ಮುಂಬೈ ತಂಡವನ್ನು ಸೆಮಿಫೈನಲ್‌ನಲ್ಲಿ ಉತ್ತರಪ್ರದೇಶ ವಿರುದ್ಧ ಪ್ರಾಬಲ್ಯಗೊಳಿಸಿದ 20 ವರ್ಷ ವಯಸ್ಸಿನ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ಬೆಂಗಳೂರಿನಲ್ಲಿ ಉತ್ತರ ಪ್ರದೇಶ (ಯುಪಿ) ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ನಾಲ್ಕು ವಿಕೆಟ್ ನಷ್ಟಕ್ಕೆ 533 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 746 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಉತ್ತರಪ್ರದೇಶವನ್ನು 180ಕ್ಕೆ ನಿಯಂತ್ರಿಸುವ ಮೊದಲು ಮುಂಬೈ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 393 ರನ್ ಗಳಿಸಿದ್ದರು.

5ನೇ ದಿನ ಪ್ರಾರಂಭವಾಗುವ ಮೊದಲೇ ಫಲಿತಾಂಶ

5ನೇ ದಿನ ಪ್ರಾರಂಭವಾಗುವ ಮೊದಲೇ ಫಲಿತಾಂಶ

5ನೇ ದಿನ ಪ್ರಾರಂಭವಾಗುವ ಮೊದಲೇ ಫಲಿತಾಂಶವು ಮುಂಚಿತವಾಗಿ ತೀರ್ಮಾನವಾಗಿತ್ತು. ಮುಂಬೈ 4 ವಿಕೆಟ್ ನಷ್ಟಕ್ಕೆ 449ಕ್ಕೆ ಕೊನೆಯ ದಿನವನ್ನು ಪುನರಾರಂಭಿಸಿತು. ಸರ್ಫರಾಜ್ ಖಾನ್ 23 ಮತ್ತು ಶಮ್ಸ್ ಮುಲಾನಿ 10 ರನ್ ಗಳಿಸಿ ಆಡುತ್ತಿದ್ದರು.

ಕೊನೆಯ ದಿನ ಯಾವುದೇ ವಿಕೆಟ್ ಕಳೆದುಕೊಳ್ಳದಿದ್ದರಿಂದ ಸರ್ಫರಾಜ್ ಖಾನ್ (59*) ಅವರು ಮತ್ತೊಂದು ಪ್ರಭಾವಶಾಲಿ ಅರ್ಧ ಶತಕ ಸಹಾಯ ಮಾಡಿದ್ದರಿಂದ ಈ ಜೊತೆಯಾಟವು ಸುಲಭವಾಗಿ ಮುಂದುವರೆಯಿತು. ಉತ್ತರಪ್ರದೇಶಕ್ಕೆ ಎರಡನೇ ಇನ್ನಿಂಗ್ಸ್ ಆಡುವ ಅವಕಾಶ ದೊರೆಯಲಿಲ್ಲ. ಹೀಗಾಗಿ ಮೊದಲ ಇನ್ನಿಂಗ್ಸ್ ಮುನ್ನಡೆ ಅಧಾರದ ಮೇಲೆ ಮುಂಬೈ ಫೈನಲ್ ಪ್ರವೇಶಿಸಿತು.

ರಣಜಿ ಟ್ರೋಫಿ ಫೈನಲ್ ತಲುಪಿದ ಮಧ್ಯಪ್ರದೇಶ

ರಣಜಿ ಟ್ರೋಫಿ ಫೈನಲ್ ತಲುಪಿದ ಮಧ್ಯಪ್ರದೇಶ

ಬೆಂಗಳೂರಿನ ಆಲೂರು ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ತಂಡವನ್ನು 174‌ ರನ್‌ಗಳಿಂದ ಸೋಲಿಸುವ ಮೂಲಕ ಮಧ್ಯಪ್ರದೇಶ ಫೈನಲ್‌ ತಲುಪಿದ ಎರಡನೇ ತಂಡವಾಗಿದೆ. ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜೂನ್ 22-26 ರವರೆಗೆ ನಡೆಯುವ ಫೈನಲ್‌ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.

ಈ ಮೂಲಕ ಸುದೀರ್ಘ 23 ವರ್ಷಗಳ ಬಳಿಕ ಮಧ್ಯಪ್ರದೇಶ ಫೈನಲ್‌ ಪ್ರವೇಶಿಸಿದ್ದು, 1998-99ನೇ ವರ್ಷದಲ್ಲಿ ಈ ತಂಡ ಕೊನೆಯ ಬಾರಿ ಫೈನಲ್‌ ಆಡಿತ್ತು.

ಮೊದಲು ಬ್ಯಾಟ್‌ ಮಾಡಿದ್ದ ಮಧ್ಯಪ್ರದೇಶ 341 ರನ್‌ ಕಲೆಹಾಕಿತ್ತು. ತಂಡದ ಪರ ಮಿಂಚಿದ್ದ ಆಕಾಶ್ ರಘುವಂಶಿ 63 ರನ್‌ ಗಳಿಸಿದ್ದರು. ಈ ಮೊತ್ತವನ್ನು ಬೆನ್ನಟ್ಟಿದ್ದ ಬಂಗಾಳ 273 ರನ್‌ಗಳಿಗೆ ಆಲೌಟ್ ಆಗಿತ್ತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಣಜಿ ಫೈನಲ್

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಣಜಿ ಫೈನಲ್

ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ್ದ ಮಧ್ಯಪ್ರದೇಶಕ್ಕೆ ರಜತ್ ಪಟೀದಾರ್ 79, ಆದಿತ್ಯಾ ಶ್ರೀವಾತ್ಸವ 82 ರನ್‌ ಗಳಿಸಿ ಆಧಾರವಾಗುವುದರೊಂದಿಗೆ ರತಂಡವು 281 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಮಧ್ಯಪ್ರದೇಶ ನೀಡಿದ್ದ ಒಟ್ಟು 350 ರನ್‌ಗಳ ಗುರಿ ಬೆನ್ನಟ್ಟಿದ್ದ ಬಂಗಾಳ, ಕೇವಲ 175 ರನ್‌ಗಳಿಗೆ ಕುಸಿಯುದರೊಂದಿಗೆ ಫೈನಲ್‌ ಕನಸು ಭಗ್ನವಾಯಿತು. ಮಧ್ಯಪ್ರದೇಶ ಪರ ಮಿಂಚಿನ ದಾಳಿ ನಡೆಸಿದ ಸ್ಪಿನ್ನರ್‌ ಕುಮಾರ್‌ ಕಾರ್ತಿಕೇಯ ದ್ವಿತೀಯ ಇನ್ನಿಂಗ್ಸ್‌ನಲ್ಲಿ 67 ರನ್‌ಗಳಿಗೆ 6 ವಿಕೆಟ್‌ ಕಬಳಿಸಿ ಬಂಗಾಳದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು.

Story first published: Saturday, June 18, 2022, 17:01 [IST]
Other articles published on Jun 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X