ಲಿಲ್ಲಿ ದಾಖಲೆ ಮುರಿದ ಅಶ್ವಿನ್ ಕಾಲೆಳೆದ ಪತ್ನಿ ಪ್ರೀತಿ

Posted By:

ನಾಗ್ಪುರ್, ನವೆಂಬರ್ 28: ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭರ್ಜರಿ ಪ್ರದರ್ಶನ ನೀಡಿದ್ದಲ್ಲದೆ, ಡೆನ್ನಿಸ್ ಲಿಲ್ಲಿ ಅವರ 300 ವಿಕೆಟ್ ಗಳ ದಾಖಲೆಯನ್ನು ಮುರಿದರು. ಸಂಭ್ರಮದಲ್ಲಿದ್ದ ಅಶ್ವಿನ್ ಅವರ ಕಾಲೆಳೆದ ಅವರ ಪತ್ನಿ ಟ್ವೀಟ್ ಮಾಡಿದ್ದು ಈಗ ಸಕತ್ ಚರ್ಚೆಯಲ್ಲಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 300 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡ ಆರ್ ಅಶ್ವಿನ್ ಅವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ, ವೆಬ್ ಸೈಟ್ ಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಸಾಕಷ್ಟು ಕವರೇಜ್ ಸಿಕ್ಕಿದೆ. ಆದರೆ, ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್ ಅವರಿಗೆ ಮಾತ್ರ ಅಶ್ವಿನ್ 300 ವಿಕೆಟ್ ಗಳಿಸಿದ್ದು ಸುದ್ದಿ ಎನಿಸಲೆ ಇಲ್ಲವಂತೆ.

ಲಿಲ್ಲಿ ದಾಖಲೆ ಧ್ವಂಸ, ತ್ವರಿತಗತಿಯಲ್ಲಿ ಅಶ್ವಿನ್ ಗೆ 300 ವಿಕೆಟ್

ಡೆನಿಸ್ ಲಿಲ್ಲಿ 56 ಪಂದ್ಯಗಳನ್ನಾಡಿ 300 ವಿಕೆಟ್ ಕಬಳಿಸಿ ಮಾಡಿದ್ದ ಸಾಧನೆಯನ್ನು ಆರ್ ಅಶ್ವಿನ್ 54 ಪಂದ್ಯಗಳಲ್ಲೇ ಸಾಧಿಸಿದರು.

ಪಂದ್ಯದ ಗೆಲುವಿನ ಸಂಭ್ರಮದಲ್ಲಿ ಆರ್ ಅಶ್ವಿನ್ ಅವರು ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಟ್ವಿಟ್ಟರ್ ಗೆ ಹಾಕಿದ್ದರು. ಇದನ್ನು ನೋಡಿದ ಅಶ್ವಿನ್ ಅವರ ಪತ್ನಿ ಪ್ರೀತಿ ಮಾತ್ರ ಅಶ್ವಿನ್ ರನ್ನು ಟ್ರೋಲ್ ಮಾಡಿದ್ದಾರೆ.

ಅಶ್ವಿನ್ ವಿಕೆಟ್ ಗಳಿಸಿದ್ದು ಬಿಗ್ ನ್ಯೂಸ್ ಅಲ್ಲ

ಅಶ್ವಿನ್ ವಿಕೆಟ್ ಗಳಿಸಿದ್ದು ಬಿಗ್ ನ್ಯೂಸ್ ಅಲ್ಲ

300 ವಿಕೆಟ್ ಪಡೆದಿರೋದು ಈ ದಿನದ ಬಿಗ್ ನ್ಯೂಸ್ ಅಲ್ಲ, ಬೇರೊಂದು ಸುದ್ದಿ ಅದನ್ನೂ ಮೀರಿಸಿದೆ ಎಂಬರ್ಥದಲ್ಲಿ ಟ್ರೋಲ್ ಮಾಡಿದ್ದಾರೆ.

ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಮಾರ್ಕ್ಲೆ ಮದುವೆ ಸುದ್ದಿ ಕೂಡ ಅಧಿಕೃತವಾಗಿ ಪ್ರಕಟಗೊಂಡಿತ್ತು. ಹಾಗಾಗಿ ಈ ಸುದ್ದಿಯ ಮುಂದೆ ಹೆಚ್ಚು ಸದ್ದು ಮಾಡಿಲ್ಲ ಅಂತಾ ಪ್ರೀತಿ ಟ್ರೋಲ್ ಮಾಡಿದ್ದರು.

ಹಾಲಿವುಡ್ ನಟಿ ಜತೆ ಬ್ರಿಟನ್ ಯುವರಾಜ ಹ್ಯಾರಿ ಮದುವೆ

ಕೊಹ್ಲಿ ಜತೆ ಸಂಭ್ರಮಿಸಿದ ಅಶ್ವಿನ್

ನಾಗ್ಪುರ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಗಳಿಸಿದ ಆರ್ ಅಶ್ವಿನ್ ಅವರು ಪಂದ್ಯ ಶ್ರೇಷ್ಠ ಎನಿಸಿಕೊಂಡ ವಿರಾಟ್ ಕೊಹ್ಲಿ ಅವರ ಜತೆ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ಸೆಲ್ಫಿ ತೆಗೆದುಕೊಂಡು ಟ್ವಿಟ್ಟರ್ ಗೆ ಹಾಕಿದ್ದರು.

ಪ್ರೀತಿ ಟ್ವೀಟ್ ಮಾಡಿದ್ದು ಹೀಗೆ

300 ವಿಕೆಟ್ ಗಳಿಸಿದ ನಿಮ್ಮ ಸಂಭ್ರಮ ಹಾಗೂ ಸಾಧನೆ ಬಗ್ಗೆ ನಾನೇನು ಹೆಚ್ಚು ಹೇಳಲಾರೆ, ಅಭಿನಂದನೆ, ಆದರೆ, ಇಲ್ಲಿ ನೋಡಿ ಇದು ಇಂದಿನ ಬಿಗ್ ಬ್ಯೂಸ್ ಎಂದು ಪ್ರಿನ್ಸ್ ಹ್ಯಾರಿ ಮದುವೆ ನಿಶ್ಚಯ ಸುದ್ದಿಯ ಲಿಂಕ್ ಹಾಕಿದ್ದ ಪ್ರೀತಿ.

ಇಶಾಂತ್ ಶರ್ಮ ಹಾಗೂ ಅಶ್ವಿನ್ ಸೆಲ್ಫಿ

ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿದಾಗ ವೇಗಿ ಇಶಾಂತ್ ಶರ್ಮ ಹಾಗೂ ಅಶ್ವಿನ್ ಸೆಲ್ಫಿ ತೆಗೆದುಕೊಂಡು ಹಾಕಿದ್ದಕ್ಕೆ ಪ್ರೀತಿ ಅವರು ಸಕತ್ ಆಗಿ ಟ್ವೀಟ್ ಮಾಡಿದ್ದರು. ಇಶಾಂತ್ ಶರ್ಮ್ ಅವರು ವಿಕೆಟ್ ಗಳಿಸಿದಾಗ ವಿಚಿತ್ರವಾಗಿ ಮುಖ ಮಾಡಿದ್ದು ಸಕತ್ ವೈರಲಾಗಿತ್ತು.

Story first published: Tuesday, November 28, 2017, 10:45 [IST]
Other articles published on Nov 28, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ