ILT20 : 29 ಎಸೆತಗಳಲ್ಲಿ 62 ರನ್ ಗಳಿಸಿ ಮಿಂಚಿದ ಆರ್ಸಿಬಿ ಆಲ್‌ರೌಂಡರ್ ಕ್ರಿಸ್ ವೋಕ್ಸ್

ಯುಎಇಯಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಆರ್ಸಿಬಿ ಆಲ್‌ರೌಂಡರ್ ಕ್ರಿಸ್ ವೋಕ್ಸ್ ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಎಂಐ ಎಮಿರೇಟ್ಸ್ ಮತ್ತು ಶಾರ್ಜಾ ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಅಮೋಘ ಆಟವಾಡಿದರು.
ಶಾರ್ಜಾ ವಾರಿಯರ್ಸ್ ತಂಡಕ್ಕಾಗಿ ಆಡುವ ಕ್ರಿಸ್ ವೋಕ್ಸ್ ಮೊದಲು 4 ಓವರ್ ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಕ್ರಿಸ್ ವೋಕ್ಸ್ ಉತ್ತಮವಾಗಿ ಬೌಲರ್ ಮಾಡಿದರೂ, ಉಳಿದ ಬೌಲರ್ ಗಳು ವಿಫಲವಾದ ಕಾರಣ, ಮೊದಲು ಬ್ಯಾಟ್ ಮಾಡಿದ ಎಂಐ ಎಮಿರೇಟ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 204 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಮುಹಮ್ಮದ್ ವಾಸೀಮ್ 39 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 71 ರನ್ ಸಿಡಿಸಿ ಮಿಂಚಿದರು. ನಿಕೋಲಸ್ ಪೂರನ್ 30 ಎಸೆತಗಳಲ್ಲಿ 49 ರನ್ ಗಳಿಸಿದರು. ನಾಯಕ ಕೀರನ್ ಪೊಲಾರ್ಡ್ 13 ಎಸೆತಗಳಲ್ಲಿ 22 ರನ್ ಗಳಿಸಿದರು. ಡಿಜೆ ಬ್ರಾವೋ ಕೂಡ ಕೇವಲ 10 ಎಸೆತಗಳಲ್ಲಿ 21 ರನ್ ಗಳಿಸಿ ಎಂಐ ಎಮಿರೇಟ್ಸ್ ಬೃಹತ್ ಮೊತ್ತ ಕಲೆಹಾಕಲು ಸಹಾಯಕವಾದರು.

ಬ್ಯಾಟಿಂಗ್‌ನಲ್ಲಿ ಮಿಂಚಿದ ಕ್ರಿಸ್ ವೋಕ್ಸ್
ಬೃಹತ್ ಮೊತ್ತವನ್ನು ಬೆನ್ನತ್ತಿದ ಶಾರ್ಜಾ ವಾರಿಯರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಎವಿನ್ ಲೆವಿಸ್ ಮತ್ತು ಡೇವಿಡ್ ಮಲನ್ ಇಬ್ಬರೂ ಶೂನ್ಯಕ್ಕೆ ಔಟಾದರು. ನಾಯಕ ಮೊಯಿನ್ ಅಲಿ ಕೂಡ 16 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಔಟಾದರು.
ರಹ್ಮನುಲ್ಲಾ ಗುರ್ಬಾಜ್ ಮಾತ್ರ 31 ಎಸೆತಗಳಲ್ಲಿ 43 ರನ್ ಗಳಿಸಿ ಎಂಐ ಎಮಿರೇಟ್ಸ್ ಬೌಲಿಂಗ್ ಅನ್ನು ಎದುರಿಸಿದರು. ಟಾಮ್ ಕೊಹ್ಲೆರ್ ಕ್ಯಾಡ್‌ಮೋರ್ 10 ರನ್, ಜೋ ಡೆನ್ಲೀ 9 ರನ್, ಮೊಹಮ್ಮದ್ ನಬಿ 3 ರನ್ ಗಳಿಸಿ ನಿರಾಸೆ ಮೂಡಿಸಿದರು.
ನಂತರ ಕ್ರೀಸ್‌ಗೆ ಬಂದ ಕ್ರಿಸ್ ವೋಕ್ಸ್ ಏಕಾಂಗಿಯಾಗಿ ಹೋರಾಡಿದರು. 29 ಎಸೆತಗಳನ್ನು ಎದುರಿಸಿದ ಅವರು 213.79 ಸ್ಟ್ರೈಕ್‌ರೇಟ್‌ನಲ್ಲಿ 62 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ 2 ಸಿಕ್ಸರ್ ಸೇರಿದ್ದವು. ಕ್ರಿಸ್ ವೋಕ್ಸ್ ಹೋರಾಟ ನಡೆಸಿದರೂ, ತಂಡವನ್ನು ಗೆಲುವಿನ ದಡ ತಲುಪಿಸಲು ಆಗಿಲಿಲ್ಲ. ಶಾರ್ಜಾ ವಾರಿಯರ್ಸ್ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸುವ ಮೂಲಕ 49 ರನ್‌ಗಳ ಸೋಲನುಭವಿಸಿತು.
ಎಸ್‌ಎ20 ಟೂರ್ನಿಯಲ್ಲಿ ಆರ್ಸಿಬಿ ಆಲ್‌ರೌಂಡರ್ ವಿಲ್ ಜ್ಯಾಕ್ಸ್ 46 ಎಸೆತಗಳಲ್ಲಿ 92 ರನ್ ಗಳಿಸಿ ಮಿಂಚಿದರೆ, ಮತ್ತೊಬ್ಬ ಆಟಗಾರ ಕ್ರಿಸ್‌ವೋಕ್ಸ್ ಆಡಿದ ರೀತಿ ಆರ್ಸಿಬಿ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications