ಐಪಿಎಲ್ 2021ರ ಉಳಿದ ಪಂದ್ಯಗಳ ಆರಂಭ, ಅಂತ್ಯದ ದಿನಾಂಕ ಅಧಿಕೃತ ಘೋಷಣೆ

IPL 2.0 ಅಧಿಕೃತ ದಿನಾಂಕ ಪ್ರಕಟ | IPL IN UAE | Oneindia Kannada

ನವದೆಹಲಿ: ಇಂಡಿಯನ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿವೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೇಳಿತ್ತು. ಆದರೆ ಯಾವಾಗ ನಡೆಯಲಿವೆ ಅನ್ನೋದು ಅಧಿಕೃತವಾಗಿ ಘೋಷಿಸಲ್ಪಟ್ಟಿರಲಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತಕ್ಕೆ ಪ್ರಮುಖ ಸಲಹೆ ಕೊಟ್ಟ ಕಿವೀಸ್ ಮಾಜಿ ಕೋಚ್!

14ನೇ ಆವೃತ್ತಿಯ ಐಪಿಎಲ್‌ನ ಇನ್ನುಳಿದ ಪಂದ್ಯಗಳು ಸೆಪ್ಟೆಂಬರ್ 19-ಅಕ್ಟೋಬರ್ 15ರ ವರೆಗೆ ನಡೆಯಲಿವೆ ಎಂದು ಈ ಮೊದಲು ವರದಿಗಳು ಪ್ರಕಟವಾಗಿದ್ದವು. ಆದರೆ ಈ ದಿನಾಂಕ ಈಗ ಅಧಿಕೃತವಾಗಿ ಘೋಷಿಸಲ್ಪಟ್ಟಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಸಂಗತಿಯನ್ನು ಐಎಎನ್‌ಎಸ್‌ ಜೊತೆ ತಿಳಿಸಿದ್ದಾರೆ.

ಬುಧವಾರ (ಜೂನ್ 9) ಐಎಎನ್‌ಎಸ್‌ ಜೊತೆ ಮಾತನಾಡಿದ ರಾಜೀವ್ ಶುಕ್ಲಾ, 'ಸೆಪ್ಟೆಂಬರ್ 19ರಿಂದ ಅಕ್ಟೋಬರ್‌ 15ರ ವರೆಗೆ ಐಪಿಎಲ್ ನಡೆಯಲಿದೆ,' ಎಂದಿದ್ದಾರೆ. ಐಪಿಎಲ್ ಮುಗಿಯುತ್ತಲೇ ಟಿ20 ವಿಶ್ವಕಪ್‌ ಪಂದ್ಯಗಳು ಯುಎಇ ಅಥವಾ ಓಮನ್‌ನಲ್ಲಿ ಅಕ್ಟೋಬರ್‌ 18ರಿಂದ ಆರಂಭಗೊಳ್ಳುವ ನಿರೀಕ್ಷೆಯಿದೆ.

WTC final ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ, ನಾಯಕ ಕೇನ್ ವಿಲಿಯಮ್ಸನ್ ತಂಡದಿಂದ ಹೊರಕ್ಕೆ!

ಕಳೆದ ಮೇ 4ರಂದು ಐಪಿಎಲ್ 14ನೇ ಆವೃತ್ತಿ ನಿಲ್ಲಿಸಲ್ಪಟ್ಟಿತ್ತು. ಐಪಿಎಲ್ ಬಯೋಬಬಲ್ ಒಳಗಿದ್ದ ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್‌, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡವು. ಹೀಗಾಗಿ ಐಪಿಎಲ್ ಅಮಾನತುಗೊಳಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿತ್ತು.

For Quick Alerts
ALLOW NOTIFICATIONS
For Daily Alerts
Story first published: Wednesday, June 9, 2021, 22:10 [IST]
Other articles published on Jun 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X