ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಮಂಕಡಿಂಗ್ ಮಾಡದಂತೆ ಆರ್‌ ಅಶ್ವಿನ್‌ಗೆ ರಿಕಿ ಪಾಂಟಿಂಗ್ ಎಚ್ಚರಿಕೆ

Ricky Ponting warns R Ashwin for mankading during upcoming IPL

ಮಲ್ಬರ್ನ್, ಆಗಸ್ಟ್ 19: ಭಾರತದ ಅನುಭವಿ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಮಂಕಡಿಂಗ್ ಮಾಡಲು ಅವಕಾಶ ನೀಡಲಾರೆ. ಯಾಕೆಂದರೆ ಅದು ಸ್ಫೂರ್ತಿಯ ಆಟದಲ್ಲಿ ಬರಲಾರದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ, ಡೆಲ್ಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಬಿಸಿಸಿಐನಿಂದ ವಿದಾಯ ಪಂದ್ಯ!'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಬಿಸಿಸಿಐನಿಂದ ವಿದಾಯ ಪಂದ್ಯ!

ಕಳೆದ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ರಾಜಸ್ಥಾನ್ ರಾಯಲ್ಸ್ ಪರ ಆಡುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿದ್ದ ಆರ್ ಅಶ್ವಿನ್ ಮಂಕಡ್ ಮೂಲಕ ಔಟ್ ಮಾಡಿದ್ದರು. ಈ ಬಾರಿ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ.

ಸಿಪಿಎಲ್‌ನಲ್ಲಿ ಆಡುವ ಐಪಿಎಲ್ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿಸಿಪಿಎಲ್‌ನಲ್ಲಿ ಆಡುವ ಐಪಿಎಲ್ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ

ಬೌಲಿಂಗ್ ಆ್ಯಕ್ಷನ್ ಮಾಡುವ ಬೌಲರ್ ರನ್‌ಗೆ ಮುಂದಾಗುವ ನಾನ್ ಸ್ಟ್ರೈಕರ್ ಬ್ಯಾಟ್ಸ್‌ಮನ್ ಅನ್ನು ರನ್ ಔಟ್ ಮಾಡುವ ವಿಧಾನಕ್ಕೆ ಮಂಕಡ್ ಎಂದು ಕರೆಯಲಾಗುತ್ತದೆ. 1947ರಲ್ಲಿ ಭಾರತದ ಮಾಜಿ ಸ್ಪಿನ್ನರ್ ವಿನೋದ್ ಮಂಕಡ್ ಅವರು ಆಸ್ಟ್ರೇಲಿಯಾದ ಬಿಲ್ ಬ್ರೌನ್ ಅವರನ್ನು ಈ ವಿಧಾನದ ಮೂಲಕ ಮೊದಲ ಬಾರಿ ಔಟ್ ಮಾಡಿದ್ದರು. ಆ ಬಳಿಕ ಇದಕ್ಕೆ ಮಂಕಡ್ ಎಂಬ ಹೆಸರು ಬಂತು.

ICC Test rankings: ಆಸ್ಟ್ರೇಲಿಯಾ ಪಾರಮ್ಯ, ಭಾರತೀಯರಲ್ಲಿ ಏರಿಳಿತICC Test rankings: ಆಸ್ಟ್ರೇಲಿಯಾ ಪಾರಮ್ಯ, ಭಾರತೀಯರಲ್ಲಿ ಏರಿಳಿತ

ದ ಗ್ರೇಡ್ ಕ್ರಿಕೆಟರ್ ಜೊತೆ ಮಾತನಾಡಿದ ಪಾಂಟಿಂಗ್, 'ಮಂಕಡಿಂಗ್ ಬಗ್ಗೆ ನಾನು ಅಶ್ವಿನ್ ಜೊತೆ ಮಾತನಾಡುತ್ತೇನೆ. ನಾನು ಮೊದಲು ಮಾಡುವ ಕೆಲಸವೇ ಅದು. ಆವತ್ತಿನ ಪಂದ್ಯವನ್ನು ನೆನಪಿಸಿ ಅಶ್ವಿನ್ ನನ್ನ ಜೊತೆ ವಾದಿಸಬಹುದು. ಅದು ನಿಯಮದೊಳಗಿದೆ ಎನ್ನಬಹುದು. ಆತನಿಗೆ ಆರೀತಿ ಔಟ್ ಮಾಡುವ ಹಕ್ಕೂ ಇರಬಹುದು. ಆದರೆ ಅದು ಸ್ಫೂರ್ತಿಯ ಆಟದ ಪರಿಧಿಯೊಳಗೆ ಬರಲ್ಲ,' ಎಂದರು.

ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ ಗೆದ್ದ ಡ್ರೀಮ್ 11: ಎಷ್ಟು ಮೊತ್ತಕ್ಕೆ ಗೊತ್ತಾ?ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ ಗೆದ್ದ ಡ್ರೀಮ್ 11: ಎಷ್ಟು ಮೊತ್ತಕ್ಕೆ ಗೊತ್ತಾ?

ಮಾತು ಮುಂದುವರೆಸಿದ ರಿಕಿ, 'ಕಳೆದ ಬಾರಿಯ ಸೀಸನ್ ನೋಡಿದ ಬಳಿಕ, ನಾನು ನನ್ನ ಹುಡುಗರನ್ನು ಒಂದೆಡೆ ಕೂರಿಸಿ ಹೇಳಿದೆ; ಆತ ಅದನ್ನು ಮಾಡಿದ್ದಾನೆ ಎಂಬುದು ನನಗೆ ಗೊತ್ತು. ಇದನ್ನು ಗಮನಿಸಿರುವ ಬೇರೆಯವರು ಮುಂದಿನ ಸುತ್ತಿನಲ್ಲಿ ಇದನ್ನು ಬಳಸಬಹುದು. ಆದರೆ ನಾವದನ್ನು ಬಳಸೋದು ಬೇಡ. ಯಾಕೆಂದರೆ ಇದು ಕ್ರಿಕೆಟ್ ಆಡುವ ವಿಧವಲ್ಲ ಎಂದಿದ್ದೆ,' ಎಂದು ವಿವರಿಸಿದರು.

Story first published: Thursday, August 20, 2020, 10:04 [IST]
Other articles published on Aug 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X