ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ವಿಶಿಷ್ಠ ಸಾಧನೆಗೆ ಗಮನ ಸೆಳೆದ ರಿಷಭ್ ಪಂತ್

Rishabh Pant leading in Last 10 years in Australia Highest Average by a visiting batsmans list

ಸಿಡ್ನಿ: ಸಾಕಷ್ಟು ಅವಕಾಶಗಳನ್ನು ಕೊಟ್ಟರೂ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ವಿಕೆಟ್ ಕೀಪಿಂಗ್‌ ಚೆನ್ನಾಗಿಲ್ಲ ಎಂದು ರಿಷಭ್ ಪಂತ್ ಅವರನ್ನು ಹೆಚ್ಚಿನವರು ದೂರುವವರೆ. ಆದರೆ ಭಾರತದ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಪಂತ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಶೇಷ ಸಾಧನೆಗಾಗಿ ಗುರುತಿಸಿಕೊಂಡಿದ್ದಾರೆ.

ಭಾರತೀಯ ಆಟಗಾರರಿಗೆ ಗಾಯ, ತರ್ಲೆ ಮಾಡಿದ ವೀರೇಂದ್ರ ಸೆಹ್ವಾಗ್!ಭಾರತೀಯ ಆಟಗಾರರಿಗೆ ಗಾಯ, ತರ್ಲೆ ಮಾಡಿದ ವೀರೇಂದ್ರ ಸೆಹ್ವಾಗ್!

ಸೋಮವಾರ (ಜನವರಿ 11) ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಂತ್ 97 ರನ್ ಬಾರಿಸಿದ್ದರು. ಹೀಗಾಗಿ ಸೋಲುವ ಈ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸಲು ಅನುಕೂಲವಾಗಿತ್ತು. ಈ ಪಂದ್ಯದ ಬೆನ್ನಲ್ಲೇ ಪಂತ್‌ ಹೆಸರಿನಲ್ಲಿ ದಾಖಲೆ ಸೇರ್ಪಡೆಯಾಗಿದೆ.

ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್‌ ಒಬ್ಬ ಗಳಿಸಿದ ಅತ್ಯಧಿಕ ರನ್‌ ಸರಾಸರಿ ಪಟ್ಟಿಯಲ್ಲಿ ಪಂತ್ ಮೊದಲ ಸ್ಥಾನದಲ್ಲಿದ್ದಾರೆ. ಈ ಸಾಧನೆಯಲ್ಲಿ ಪಂತ್‌ ಅವರು ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೇನ್ ವಿಲಿಯಮ್ಸನ್, ಅಲಾಸ್ಟೇರ್ ಕುಕ್ ಇಂಥವರೆನ್ನೆಲ್ಲಾ ಹಿಂದಿಕ್ಕಿದ್ದಾರೆ.

ಐಸಿಸಿ ಅತ್ಯುತ್ತಮ ಮುಂದಾಳತ್ವ ಮತದಾನ: ಕೊಹ್ಲಿ ಸೋಲಿಸಿದ ಇಮ್ರಾನ್!ಐಸಿಸಿ ಅತ್ಯುತ್ತಮ ಮುಂದಾಳತ್ವ ಮತದಾನ: ಕೊಹ್ಲಿ ಸೋಲಿಸಿದ ಇಮ್ರಾನ್!

ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ರನ್ ಸರಾಸರಿ ಪಟ್ಟಿ
* ರಿಷಭ್ ಪಂತ್, ಭಾರತ, 6 ಪಂದ್ಯ, 512 ರನ್, 56.88 ಸರಾಸರಿ
* ವಿರಾಟ್ ಕೊಹ್ಲಿ, ಭಾರತ, 13 ಪಂದ್ಯ, 1352 ರನ್, 54.08
* ಚೇತೇಶ್ವರ ಪೂಜಾರ, ಭಾರತ, 10 ಪಂದ್ಯ, 912 ರನ್, 48.00 ಸರಾಸರಿ
* ಮುರಳಿ ವಿಜಯ್, ಭಾರತ, 6 ಪಂದ್ಯ, 531 ರನ್, 44.25 ಸರಾಸರಿ
* ಅಜಿಂಕ್ಯ ರಹಾನೆ, 11 ಪಂದ್ಯ, 823 ರನ್, 43.41 ಸರಾಸರಿ
* ಕೇನ್ ವಿಲಿಯಮ್ಸನ್, ನ್ಯೂಜಿಲೆಂಡ್, 7 ಪಂದ್ಯ, 557 ರನ್, 42.84 ಸರಾಸರಿ
* ಅಲಾಸ್ಟೇರ್ ಕುಕ್, ಇಂಗ್ಲೆಂಡ್, 11 ಪಂದ್ಯ, 811 ರನ್, 42.68 ಸರಾಸರಿ
* ರಾಸ್ ಟೇಲರ್, 8 ಪಂದ್ಯ, ನ್ಯೂಜಿಲೆಂಡ್, 633 ರನ್, 42.20 ಸರಾಸರಿ
* ಜೋ ರೂಟ್, ಇಂಗ್ಲೆಂಡ್, 9 ಪಂದ್ಯ, 570 ರನ್, 38.00 ಸರಾಸರಿ

Story first published: Wednesday, January 13, 2021, 17:20 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X