ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ನಿಮಗೆ ಆಡಮ್ ಗಿಲ್‌ಕ್ರಿಸ್ಟ್ ಆಟವನ್ನು ನೆನಪಿಸುತ್ತಾನೆ ಎಂದ ಆಕಾಶ್ ಚೋಪ್ರ

Rishabh Pant reminds you of Adam Gilchrist Aakash Chopra

ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಭಾರತ ಎ ತಂಡ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಎರಡೇ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ರಿಷಭ್ ಪಂತ್ ಶತಕವನ್ನು ಬಾರಿಸಿ ಮಿಂಚಿದ್ದಾರೆ. ಈ ಪ್ರದರ್ಶನವನ್ನು ನೋಡಿದ ಆಕಾಶ ಚೋಪ್ರ ಪಂತ್ ಪ್ರದರ್ಶನವನ್ನು ಹೊಗಳಿದಿದ್ದಾರೆ.

ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಪಂತ್ ಬ್ಯಾಟಿಂಗ್‌ಗ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವ ಚೋಪ್ರ ಆಟದ ಗತಿಯನ್ನು ಬದಲಿಸುವ ಸಾಮರ್ಥ್ಯ ಪಂತ್ ಅವರಲ್ಲಿದೆ. ಹಾಗಾಗಿ ಅವರು ಆಡಂ್ ಗಿಲ್‌ಕ್ರಿಸ್ಟ್ ಆಟವನ್ನು ನೆನಪಿಸುತ್ತಾರೆ ಎಂದಿದ್ದಾರೆ.

ಆಸೀಸ್‌ಗೆ ಮತ್ತೊಂದು ಗಾಯದ ಭೀತಿ, ಮೈದಾನ ತೊರೆದ ಆಲ್ ರೌಂಡರ್ಆಸೀಸ್‌ಗೆ ಮತ್ತೊಂದು ಗಾಯದ ಭೀತಿ, ಮೈದಾನ ತೊರೆದ ಆಲ್ ರೌಂಡರ್

"ಅಂತಿಮ ಹಂತದಲ್ಲಿ ಎದುರಾಳಿಯ ಬೌಲಿಂಗ್ ಪಡೆಯನ್ನು ಪುಡಿಗಟ್ಟಿ ತಂಡಕ್ಕೆ ಮೇಲುಗೈ ನೀಡುವುದು ರಿಷಭ್ ಪಂತ್ ಅವರಲ್ಲಿನ ಬ್ಯಾಟಿಂಗ್‌ನ ಉತ್ಕೃಷ್ಟತೆಯನ್ನು ವ್ಯಕ್ತಪಡಿಸುತ್ತದೆ. ಆರ ಗಿಲ್‌ಕ್ರಿಸ್ಟ್ ರೀತಿಯ ಆಟಗಾರ. ಖಂಡಿತವಾಗಿಯೂ ಗಿಲ್‌ಕ್ರಿಸ್ಟ್ ಸಾಧನೆ ಅಪಾರವಾಗಿದೆ. ಆದರೆ ರಿಷಭ್ ಪಂತ್ ಅವರ ವೃತ್ತಿಜೀವನ ಈಗಷ್ಟೇ ಆರಂಭವಾಗಿದೆ. ಪಂತ್ ಯಾವಾಗ ಬ್ಯಾಟಿಂಗ್ ಮಾಡುತ್ತಾರೋ ಆಗ ಗಿಲ್‌ಕ್ರಿಸ್ಟ್ ಅವರನ್ನು ನೆನಪಿಸುತ್ತಾರೆ. ಗಿಲ್‌ಕ್ರಿಸ್ಟ್ ಅವರ ಸಾಧನೆಯ ಸನಿಹಕ್ಕೆ ಈತ ತಲುಪಬಲ್ಲ ಎನಿಸುತ್ತದೆ" ಎಂದು ಚೋಪ್ರ ಹೇಳಿದ್ದಾರೆ.

ರಿಷಭ್ ಪಂತ್ ಕೆಳ ಕ್ರಮಾಂಕದಲ್ಲಿ ಕಣ್ಕಕಿಳಿದು ಒಂದೇ ಸೆಶನ್‌ನಲ್ಲಿ ಆಟದ ದಿಕ್ಕನ್ನು ಬದಲಿಸಬಲ್ಲವರಾಗಿದ್ದಾರೆ. ಆ ಸಾಮರ್ಥ್ಯ ಯುವ ಆಟಗಾರ ರಿಷಭ್ ಪಂತ್ ಅವರಲ್ಲಿ ಇದೆ ಎಂದು ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್‌ಗೆ ರೋಹಿತ್ ಲಭ್ಯತೆ ಇನ್ನೂ ಅನುಮಾನಭಾರತ vs ಆಸ್ಟ್ರೇಲಿಯಾ: ಟೆಸ್ಟ್‌ಗೆ ರೋಹಿತ್ ಲಭ್ಯತೆ ಇನ್ನೂ ಅನುಮಾನ

"ರಿಷಭ್ ಪಂತ್ ಬ್ಯಾಟಿಂಗ್‌ಗೆ ಇಳಿದಾಗ ಸಾಕಷ್ಟು ಒತ್ತಡದಲ್ಲಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಇದು ಅವರ ಅಂತಿಮ ಅವಕಾಶವಾಗಿತ್ತು. ಅವರು ಮೊದಲ ಅಭ್ಯಾಸ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದಿರಲಿಲ್ಲ" ಎಂದು ಆಕಾಶ್ ಚೋಪ್ರ ಹೇಳಿಕೆಯನ್ನು ನೀಡಿದ್ದಾರೆ.

Story first published: Monday, December 14, 2020, 11:10 [IST]
Other articles published on Dec 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X