ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆವಿನ್ ಪೀಟರ್ಸನ್ ಸ್ಫೋಟಕ ಆಟಕ್ಕೆ ಶರಣಾದ ಬಾಂಗ್ಲಾದೇಶ್ ಲೆಜೆಂಡ್ಸ್

Road Safety World Series T20: England Legends beat Bangladesh Legends by 7 wickets

ರಾಯ್‌ಪುರ್: ಛತ್ತೀಸ್‌ಗಢದ ರಾಯ್‌ಪುರ್‌ನಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 7ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ಲೆಜೆಂಡ್ಸ್ ವಿರುದ್ಧ ಇಂಗ್ಲೆಂಡ್ ಲೆಜೆಂಡ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ. ನಾಯಕ ಕೆವಿನ್ ಪೀಟರ್ಸನ್ ಸ್ಫೋಟಕ ಆಟದ ನೆರವಿನಿಂದ ಇಂಗ್ಲೆಂಡ್‌ ಲೆಜೆಂಡ್ಸ್ ಟೂರ್ನಿಯ ಮೊದಲ ಗೆಲುವು ದಾಖಲಿಸಿದೆ.

ಐಪಿಎಲ್ 2021: ಪಂಜಾಬ್ ಕಿಂಗ್ಸ್ ತಂಡ, ಸಂಪೂರ್ಣ ವೇಳಾಪಟ್ಟಿಐಪಿಎಲ್ 2021: ಪಂಜಾಬ್ ಕಿಂಗ್ಸ್ ತಂಡ, ಸಂಪೂರ್ಣ ವೇಳಾಪಟ್ಟಿ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ್ ಲೆಜೆಂಡ್ಸ್‌ನಿಂದ ನಝೀಮುದ್ದೀನ್ 12, ಹನನ್ ಸರ್ಕಾರ್ 13, ಖಲೇದ್ ಮಶೂದ್ 31, ಮುಷ್ಫಿಕರ್ ರಹ್ಮಾನ್ 30 ರನ್ ಕೊಡುಗೆಯೊಂದಿಗೆ ತಂಡ 20 ಓವರ್‌ಗೆ 5 ವಿಕೆಟ್ ಕಳೆದು 113 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಲೆಜೆಂಡ್ಸ್‌, ಫಿಲ್ ಮಸ್ಟಾರ್ಡ್ 27, ಕೆವಿನ್ ಪೀಟರ್ಸನ್ 42 (17 ಎಸೆತ), ಕ್ರಿಸ್ ಸ್ಕೋಫೀಲ್ಡ್ 5, ಗೇವಿನ್ ಹ್ಯಾಮಿಲ್ಟನ್ 5 ರನ್‌ ಸೇರ್ಪಡೆಯೊಂದಿಗೆ 14 ಓವರ್‌ಗೆ 3 ವಿಕೆಟ್ ಕಳೆದು 117 ರನ್ ಗಳಿಸಿತು ಗೆಲುವನ್ನಾಚರಿಸಿತು. ಪಂದ್ಯದಲ್ಲಿ ಪೀಟರ್ಸನ್ 7 ಫೋರ್ಸ್, 1 ಸಿಕ್ಸರ್ ಚಚ್ಚಿದ್ದರು. ಕೆವಿನ್ ಅವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್, ರೈಸಿಂಗ್ ಪೂಣೆ ಸೂಪರ್‌ಜೇಂಟ್ಸ್‌ ತಂಡಗಳ ಪರ ಆಡಿದ್ದರು.

ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ದಿನಾಂಕ, ಸಮಯ ಹಾಗೂ ಸ್ಥಳಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ದಿನಾಂಕ, ಸಮಯ ಹಾಗೂ ಸ್ಥಳ

ಬಾಂಗ್ಲಾದೇಶ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಮಾಂಟಿ ಪನೇಸರ್ 1, ರಿಯಾನ್ ಜೇ ಸೈಡ್‌ಬಾಟಮ್ 1, ಕ್ರಿಸ್ ಟ್ರೆಮ್ಲೆಟ್ 2, ಕ್ರಿಸ್ ಸ್ಕೋಫೀಲ್ಡ್ 1 ವಿಕೆಟ್‌ನಿಂದ ಗಮನ ಸೆಳೆದರೆ, ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಅಲಾಂಗಿರ್ ಕಬೀರ್ 1, ಮೊಹಮ್ಮದ್ ರಫೀಕ್ 2 ವಿಕೆಟ್‌ ಪಡೆದರು. ಪೀಟರ್ಸನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Monday, March 8, 2021, 16:13 [IST]
Other articles published on Mar 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X