ಭಾರತ vs ಇಂಗ್ಲೆಂಡ್: ಕೆಎಲ್ ರಾಹುಲ್ ಆಟವನ್ನು ಮನಸಾರೆ ಪ್ರಶಂಸಿಸಿದ ರೋಹಿತ್ ಶರ್ಮಾ

KL ರಾಹುಲ್ ಪರಾಕ್ರಮಕ್ಕೆ ದಿಗ್ಗಜ ಕ್ರಿಕೆಟಿಗರ ದಾಖಲೆಗಳೇ ಪುಡಿಪುಡಿ | Oneindia Kannada

ಲಂಡನ್, ಆಗಸ್ಟ್ 13: ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಭಾರತೀಯ ತಂಡದ ಪರವಾಗಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದು ಅಜೇಯ ಶತಕ ಬಾರಿಸಿದ್ದಾರೆ. ರಾಹುಲ್ ಆಟಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾದ ಇನ್ನೋರ್ವ ಆಟಗೃಬಿಕ ಆಟಗಾರ ರೋಹಿತ್ ಶರ್ಮಾ ರಾಹುಲ್ ಆಡಿದ ರೀತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೆಎಲ್ ರಾಡಿರುವ ಇನ್ನಿಂಗ್ಸ್‌ಗಳ ಪೈಕಿ ನಾನು ಕಂಡಂತೆ ಇದು ಅತ್ಯುತ್ತಮವಾದ ಆಟ ಎಂದು ರೋಹಿತ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಕೆಎಲ್ ರಾಹುಲ್ ಶತಕವನ್ನು ಬಾರಿಸುವ ಮೂಲಕ ಎರಡನೇ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಶತಕ ಗಡಿ ದಾಟಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು. ಮೊದಲ ದಿನ 127 ರನ್‌ಗಳಿಸಲು ರಾಹುಲ್ 248 ಎಸೆತಗಳನ್ನು ಬಳಸಿಕೊಂಡಿದ್ದರು. ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದ್ದ ಕೆಎಲ್ ರಾಹುಲ್ ಮೊದಲ 20 ರನ್‌ಗಳಿಸಲು 105 ಎಸೆತಗಳನ್ನು ಬಳಸಿಕೊಂಡಿದ್ದರು. ಆದರೆ ಮತ್ತೊಂದು ತುದಿಯಲ್ಲಿದ್ದ ರೋಹಿತ್ ಶರ್ಮಾ ತಮ್ಮ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಇಂಗ್ಲೆಂಡ್ ಬೌಲರ್‌ಗಳ ಮೇಲೆ ತಾವು ಸವಾರಿ ಮಾಡಲು ಆರಂಭಿಸಿದ್ದರು.

ಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್‌: ಕೆಎಲ್ ರಾಹುಲ್ ಶತಕದಾಟಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್‌: ಕೆಎಲ್ ರಾಹುಲ್ ಶತಕದಾಟ

"ಹೌದು, ಇದು ನಾನು ಕೆಎಲ್ ಬ್ಯಾಟಿಂಗ್ ನಡೆಸುತ್ತಿರುವಾಗ ಕಂಡ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ನನಗನಿಸಿದ ಪ್ರಕಾರ ಆತ ಮೊದಲ ಎಸೆತದಿಂದ ಅಂತಿಮ ಎಸೆತದವರೆಗೂ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗುದ್ದರು. ಯಾವ ಹಂತದಲ್ಲಿಯೂ ಆತ ಗೊಂದಲಕ್ಕೆ ಒಳಗಾದಂತೆ ಅಥವಾ ಯೋಚನೆಯಲ್ಲಿ ತೊಡಗಿಸಿಕೊಂಡಂತೆ ಅನಿಸಲಿಲ್ಲ. ಆತ ತನ್ನ ಯೋಜನೆಯ ಬಗ್ಗೆ ಅತ್ಯಂತ ಸ್ಪಷ್ಟವಾಗಿದ್ದ. ಯಾವಾಗ ನೀವು ನಿಮ್ಮ ಯೋಜನೆಗಳನ್ನು ನಂಬುತ್ತೀರೋ ಅವುಗಳು ನಿಜಕ್ಕೂ ಕಾರ್ಯಗತಗೊಳ್ಳುತ್ತವೆ. ಇವತ್ತು ಆತನ ದಿನ. ಈ ದಿನವನ್ನು ಆತ ನಿಜಕ್ಕೂ ಸ್ಮರಣೀಯಗೊಳಿಸಿದ್ದಾರೆ" ಎಂದು ರೋಹಿತ್ ಶರ್ಮಾ ಪಂದ್ಯ ಮುಕ್ತಾಯದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಈ ಶತಕದ ಮೂಲಕ ಕೆಎಲ್ ರಾಹುಲ್ ಆರಂಭಿಕರಾಗಿ ಏಷ್ಯಾದ ಹೊರಭಾಗದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಏಷ್ಯಾಖಂಡದ ಹೊರಭಾಗದಲ್ಲಿ ತಲಾ ನಾಲ್ಕು ಶತಕವನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಈಗ ರಾಹುಲ್ ಈ ವಿಶೇಷ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ ಅವರಿಂತ ಮಾತ್ರವೇ ಹಿಂದಿದ್ದಾರೆ. ಸುನಿಲ್ ಗವಾಸ್ಕರ್ ಏಷ್ಯಾ ಹೊರಭಾಗದಲ್ಲಿ ಗವಾಸ್ಕರ್ 15 ಶತಕ ಗಳಿಸಿದ್ದಾರೆ.

ಗುರುವಾರ ನಡೆದ ಮೊದಲನೇ ದಿನದಾಟದ ಅಂತ್ಯದಲ್ಲಿ ಭಾರತ 90 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದು 276 ರನ್ ಗಳಿಸಿದೆ. ಇಂಗ್ಲೆಂಡ್‌ನಿಂದ ಜೇಮ್ಸ್ ಆ್ಯಂಡರ್ಸನ್ 52 ರನ್‌ ನೀಡಿ 2 ವಿಕೆಟ್ ಪಡೆದರೆ, ಆಲಿ ರಾಬಿನ್ಸನ್ 47 ರನ್‌ಗಳಿಗೆ 1 ವಿಕೆಟ್ ಪಡೆದಿದ್ದಾರೆ. ದಿನದಾಟದ ಅಂತ್ಯಕ್ಕೆ ಕೆಎಲ್ ರಾಹುಲ್ 248 ಎಸೆತಗಳನ್ನು ಎದುರಿಸಿ 127 ರನ್ ಬಾರಿಸಿ ಅಜೇಯವಾಗುಳಿದಿದ್ದಾರೆ. ಇದರಲ್ಲಿ 12 ಬೌಂಡರಿಗಳು ಹಾಗೂ 1 ಸಿಕ್ಸರ್ ಸೇರಿತ್ತು. ರಾಹುಲ್ ಜೊತೆ ಉಪನಾಯಕ ಅಜಿಂಕ್ಯ ರಹಾನೆ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ 103 ಎಸೆತಗಳಲ್ಲಿ 42 ರನ್ ಕೊಡುಗೆ ನೀಡಿ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾ

ಇದೇ ಪಂದ್ಯದಲ್ಲಿ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ವಿಶೇಷ ದಾಖಲೆ ಕಾರಣರಾಗಿದ್ದಾರೆ. ಇಂಗ್ಲೆಂಡ್‌ಗೆ ಪ್ರವಾಸ ಬಂದು ಟೆಸ್ಟ್ ಪಂದ್ಯ ಆಡುವಾಗ ಮೊದಲ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚಿಗೆ ಆರಂಭಿಕ ಜೊತೆಯಾಟ ನೀಡಿದ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಗುರುತಿಸಿಕೊಂಡಿದ್ದಾರೆ. 126 ರನ್ ಜೊತೆಯಾಟದ ಸಾಧನೆಯೊಂದಿಗೆ ರೋಹಿತ್, ರಾಹುಲ್ ಈ ದಾಖಲೆ ನಿರ್ಮಿಸಿದ್ದಾರೆ. ಈ ರೆಕಾರ್ಡ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಮತ್ತು ಮಾರ್ಕ್ ಟೇಲರ್ ಇದ್ದಾರೆ. 1993ರಲ್ಲಿ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 128 ರನ್‌ಗಳ ಜೊತೆಯಾಟವನ್ನು ನೀಡಿದ್ದರು. ಇನ್ನು ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭಾರತದ ಆರಂಭಿಕರಾಗಿ ಭಾರತದ ಪರವಾಗಿ ಲಾರ್ಡ್ಸ್ ಅಂಗಳದಲ್ಲಿ ಗಳಿಸಿದ ಅತಿ ಹೆಚ್ಚಿನ ಜೊತೆಯಾಟದ ದಾಖಲೆಯನ್ನು 69 ವರ್ಷಗಳ ನಂತರ ಮುರಿದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, August 13, 2021, 10:10 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X