ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕನಾದ ಬೆನ್ನಲ್ಲೇ ವಿರಾಟ್ ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ ಆಡಿದ ಮಾತಿದು!

Rohit Sharma praises Virat Kohli said average 50-plus in the T20 format crazy and unreal

ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡಕ್ಕೆ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ. ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಮುಕ್ತಾಯದ ನಂತರ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವ ತ್ಯಜಿಸಿದ್ದರು. ಆ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಏಕದಿನ ಮಾದರಿಗೂ ರೋಹಿತ್ ಶರ್ಮಾ ಅವರನ್ನೇ ನಾಯಕನನ್ನಾಗಿ ನೇಮಿಸಲಾಗಿದೆ. ಹೀಗಾಗಿ ವೈಟ್‌ಬಾಲ್ ಕ್ರಿಕೆಟ್‌ನ ಎರಡು ಮಾದರಿಗೂ ರೋಹಿತ್ ಶರ್ಮಾ ಅವರೇ ತಂಡವನ್ನು ಮುನ್ನಡೆಸಲಿದ್ದು ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

ಹೊಸ ಜವಾಬ್ಧಾರಿಯನ್ನು ವಹಿಸಿಕೊಂಡಿರುವ ರೋಹಿತ್ ಶರ್ಮಾ 'ಬ್ಯಾಕ್‌ಸ್ಟೇಜ್ ವಿದ್ ಬೋರಿಯಾ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಮಾಡಿರುವ ಸಾಧನೆಯನ್ನು ರೋಹಿತ್ ಶರ್ಮಾ ವಿಶೇಷವಾಗಿ ಕೊಂಡಾಡಿದ್ದಾರೆ.

ಜನರಲ್ ಬಿಪಿನ್ ರಾವತ್ ಸಾವಿಗೆ ಕಂಬನಿ ಮಿಡಿದ ಭಾರತದ ಕ್ರಿಕೆಟಿಗರು: ಟ್ವೀಟ್ ಮೂಲಕ ಸಂತಾಪ ಸೂಚನೆಜನರಲ್ ಬಿಪಿನ್ ರಾವತ್ ಸಾವಿಗೆ ಕಂಬನಿ ಮಿಡಿದ ಭಾರತದ ಕ್ರಿಕೆಟಿಗರು: ಟ್ವೀಟ್ ಮೂಲಕ ಸಂತಾಪ ಸೂಚನೆ

"ವಿರಾಟ್ ಕೊಹ್ಲಿಯ ಆ ಉತ್ಕೃಷ್ಟ ಗುಣಮಟ್ಟದ ಆಟ ತಂಡಕ್ಕೆ ಯಾವಾಗಲೂ ಅಗತ್ಯವಾಗಿದೆ. ಇನ್ನು ಟಿ20 ಮಾದರಿಯಲ್ಲಿ 50ಕ್ಕಿಂತ ಅಧಿಕ ಸರಾಸರಿಯನ್ನು ಹೊಂದುವುದು ಅಸಾಮಾನ್ಯ ಸಂಗತಿ ಮತ್ತು ಅದನ್ನು ನಂಬುವುದು ಕಷ್ಟ. ಖಂಡಿಯವಾಗಿಯೂ ತನ್ನ ಅನುಭವದಿಂದ ವಿರಾಟ್ ಕೊಹ್ಲಿ ಸಾಕಷ್ಟು ಪಂದ್ಯಗಳಲ್ಲಿ ಕಠಿಣ ಪರಿಸ್ಥಿತಿಯಿಂದ ತಂಡವನ್ನು ಪಾರು ಮಾಡಿದ್ದಾರೆ. ಆ ಗುಣಮಟ್ಟ ಹಾಗೂ ಅಂತಾ ಉತ್ತಮವಾದ ಬ್ಯಾಟಿಂಗ್ ಬಹಳ ಅಗತ್ಯವಾಗಿದೆ. ಆತ ಇನ್ನು ಕೂಡ ತಂಡದ ನಾಯಕನಾಗಿದ್ದಾರೆ" ಎಂದು ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಅಲ್ಲದೆ ಮುಂದುವರಿದು ಮಾತನಾಡಿದ ಅವರು "ಈ ಎಲ್ಲಾ ಅಂಶಗಳನ್ನು ನೀವು ಒಗ್ಗೂಡಿಸಿದಾಗ ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರ ಉಪಸ್ಥಿತೊ ತಂಡಕ್ಕೆ ಬಹಳ ಅಗತ್ಯವಾಗಿದೆ ಎಂದಿದ್ದಾರೆ ರೋಹಿತ್ ಶರ್ಮಾ" ಈ ಮೂಲಕ ವಿರಾಟ್ ಕೊಹ್ಲಿ ತಮಡದ ಅವಿಭಾಜ್ಯ ಅಂಗ ಎಂಬ ಅಂಶವನ್ನು ರೋಹಿತ್ ಶರ್ಮಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ODI ನಾಯಕತ್ವ ಕಳೆದುಕೊಳ್ಳಲು ಪ್ರಮುಖ ಕಾರಣಗಳೇನು?ವಿರಾಟ್ ಕೊಹ್ಲಿ ODI ನಾಯಕತ್ವ ಕಳೆದುಕೊಳ್ಳಲು ಪ್ರಮುಖ ಕಾರಣಗಳೇನು?

ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದ ನಂತರ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುವ ಇಚ್ಛೆ ಹೊಂದಿದ್ದರು. ಆದರೆ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಘೋಷಣೆ ಮಾಡಿದಾಗ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದರು.

ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ಟಿ20 ಸರಣಿಯನ್ನು ಅದ್ಭುತವಾಗಿ ಮುಕ್ತಾಯಗೊಳಿಸಿದ್ದಾರೆ. ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ 3-0 ಅಂತರದಿಂದ ವೈಟ್‌ವಾಶ್ ಮಾಡುವ ಮೂಲಕ ಶುಭಾರಂಭವನ್ನು ಮಾಡಿದ್ದಾರೆ. ಇದೀಗ ಏಕದಿನ ನಾಯಕತ್ವವೂ ರೋಹಿತ್ ಶರ್ಮಾ ಹೆಗಲೇರಿರುವ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿಯಲ್ಲಿಯೂ ರೋಹಿತ್ ಪೂರ್ಣ ಪ್ರಮಾಣದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್‌ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್‌ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಹನುಮ ವಿಹಾರಿ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.

ಕೊಹ್ಲಿ - ಶಾಸ್ತ್ರಿ ಕಾಲ ಮುಗಿದು ಈಗ ದ್ರಾವಿಡ್ - ರೋಹಿತ್ ಕಾಲ | Oneindia Kannada

Story first published: Thursday, December 9, 2021, 15:58 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X