ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೆಟ್ ಅಭ್ಯಾಸ ಆರಂಭಿಸಿದ ರೋಹಿತ್; ಆದರೂ ಇಂಗ್ಲೆಂಡ್ ವಿರುದ್ಧ ಟಿ20 ಆಡುವುದು ಅನುಮಾನ ಎಂದ ಬಿಸಿಸಿಐ!

Rohit Sharma started practice but not sure about participating in 1st T20 against England says BCCI official

ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಸಧ್ಯ ಜಸ್ಪ್ರೀತ್ ಬುಮ್ರಾ ನಾಯಕತ್ವದಡಿಯಲ್ಲಿ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಟೆಸ್ಟ್ ಪಂದ್ಯ ಆಡುವುದರಲ್ಲಿ ನಿರತವಾಗಿದ್ದು, ಈ ಮಹತ್ವದ ಪಂದ್ಯ ಮುಕ್ತಾಯವಾದ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಸೀಮಿತ ಓವರ್ ಸರಣಿಗಳು ಆರಂಭವಾಗಲಿವೆ.

IND vs ENG 5ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ; ಇಷ್ಟು ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಯಾರೂ ಸೋತಿಲ್ಲ!IND vs ENG 5ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ; ಇಷ್ಟು ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಯಾರೂ ಸೋತಿಲ್ಲ!

ಇನ್ನು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ಪ್ರವಾಸ ಕೈಗೊಂಡ ಬೆನ್ನಲ್ಲೇ ನಡೆದ ಅಭ್ಯಾಸ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯವಾದ ನಂತರ ಕೊರೊನಾ ಸೋಂಕಿಗೆ ಒಳಗಾಗಿ ಪಂದ್ಯದಿಂದ ಮಧ್ಯಂತರದಲ್ಲಿಯೇ ಹೊರಗುಳಿದರು. ಪರಿಣಾಮವಾಗಿ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು, ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಇದೀಗ ಚೇತರಿಸಿಕೊಂಡು ನೆಟ್ ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ.

IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನIND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ

ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಮುಂಬರುವ ಸೀಮಿತ ಓವರ್ ಸರಣಿಗಳಿಗೋಸ್ಕರ ನೆಟ್ ಅಭ್ಯಾಸವನ್ನು ನಡೆಸುತ್ತಿರುವ ವಿಡಿಯೋವನ್ನು ಇತ್ತೀಚೆಗಷ್ಟೇ ಬಿಸಿಸಿಐ ಬಿಡುಗಡೆಗೊಳಿಸಿತ್ತು. ಈ ವಿಡಿಯೋವನ್ನು ಕಂಡ ರೋಹಿತ್ ಶರ್ಮಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು ಹಾಗೂ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮಾ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ ಎಂದರೆ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಈ ಕುರಿತಾಗಿ ಬಿಸಿಸಿಐನ ಅಧಿಕಾರಿಯೋರ್ವರು ಇನ್‌ಸೈಡ್ ಸ್ಪೋರ್ಟ್ ವೆಬ್ ತಾಣದ ಜತೆ ಮಾತನಾಡಿದ್ದು ಈ ಕೆಳಕಂಡಂತೆ ಗೊಂದಲದ ಉತ್ತರವನ್ನು ನೀಡಿದ್ದಾರೆ.

ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ

ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ

'ನೋಡಿ ಅವರು ಕೊರೊನಾ ವೈರಸ್ ಸೋಂಕಿನಿಂದ ಬಳಲಿದ್ದರು. ಹೀಗಾಗಿ ಅವರು ಚೇತರಿಸಿಕೊಳ್ಳುವುದಕ್ಕೆ ಸಮಯ ಬೇಕಿದೆ. ರೋಹಿತ್ ಅಭ್ಯಾಸ ಆರಂಭಿಸಿದ್ದಾರೆ ನಿಜ ಆದರೆ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯುವುದು ಅವರ ಫಿಟ್‌ನೆಸ್ ಮೇಲೆ ನಿರ್ಧಾರವಾಗಲಿದೆ. ಕೋಚ್ ಮತ್ತು ರೋಹಿತ್ ಶರ್ಮಾ ಈ ಕುರಿತಾಗಿ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ರೋಹಿತ್ ಸಿದ್ಧವಾಗಲಿದ್ದಾರೆ ಎಂಬ ವಿಶ್ವಾಸವಿದೆ' ಎಂದು ಬಿಸಿಸಿಐನ ಅಧಿಕಾರಿಯೋರ್ವರು ಹೇಳಿಕೆ ನೀಡಿದ್ದಾರೆ.

45 ನಿಮಿಷಗಳ ಕಾಲ ಅಭ್ಯಾಸ ನಡೆಸಿದ ರೋಹಿತ್

45 ನಿಮಿಷಗಳ ಕಾಲ ಅಭ್ಯಾಸ ನಡೆಸಿದ ರೋಹಿತ್

ಇನ್ನು ರೋಹಿತ್ ಶರ್ಮಾ ಪ್ರಥಮ ಟಿ ಟ್ವೆಂಟಿ ಪಂದ್ಯಕ್ಕೆ ಕಣಕ್ಕಿಳಿಯುವುದು ‌ಅನುಮಾನ ಎಂದೇ ಹೇಳಬಹುದು. ಏಕೆಂದರೆ ಭಾನುವಾರ ಹಾಗೂ ಸೋಮವಾರ ಎರಡೂ ದಿನಗಳಲ್ಲಿಯೂ ರೋಹಿತ್ ಶರ್ಮಾ ಅಭ್ಯಾಸವನ್ನು ನಡೆಸಿದ್ದು, ಸೋಮವಾರದಂದು 45 ನಿಮಿಷಗಳ ಕಾಲ ಮಾತ್ರ ಅಭ್ಯಾಸ ನಡೆಸಿ ಹಿಂತಿರುಗಿದರು. ಹೀಗಾಗಿ ಸತತ 4 ಗಂಟೆಗಳವರೆಗೆ ರೋಹಿತ್ ಶರ್ಮಾ ಕಣಕ್ಕಿಳಿದು ನಾಯಕತ್ವ ನಿಭಾಯಿಸುತ್ತಾ ಪಂದ್ಯ ಆಡುವಷ್ಟು ಚೇತರಿಸಿಕೊಂಡಿಲ್ಲ ಎಂಬ ಅನುಮಾನ ಮೂಡಿದೆ.

India ಎರಡನೇ ಇನ್ನಿಂಗ್ಸ್ ನಲ್ಲಿ ಠುಸ್, ವನಿತೆಯರೇ ಸೂಪರ್ Reverse swing 02 | *CricketWrap | OneIndia Kannada
ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿಗಳ ವೇಳಾಪಟ್ಟಿ

ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿಗಳ ವೇಳಾಪಟ್ಟಿ

ಪ್ರಸ್ತುತ ನಡೆಯುತ್ತಿರುವ ಎಡ್ಜ್ ಬಾಸ್ಟನ್ ಟೆಸ್ಟ್ ಪಂದ್ಯ ಮುಕ್ತಾಯವಾದ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 3 ಪಂದ್ಯಗಳ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯ ವೇಳಾ ಪಟ್ಟಿ ಕೆಳಕಂಡಂತಿದೆ.

• ಪ್ರಥಮ ಟಿ ಟ್ವೆಂಟಿ ಪಂದ್ಯ - ಜುಲೈ 7 - ಸೌತಾಂಪ್ಟನ್

• ದ್ವಿತೀಯ ಟಿ ಟ್ವೆಂಟಿ ಪಂದ್ಯ - ಜುಲೈ 9 - ಬರ್ಮಿಂಗ್ ಹ್ಯಾಮ್

• ತೃತೀಯ ಟಿ ಟ್ವೆಂಟಿ ಪಂದ್ಯ - ಜುಲೈ 10 - ನಾಟಿಂಗ್ ಹ್ಯಾಮ್

• ಪ್ರಥಮ ಏಕದಿನ ಪಂದ್ಯ - ಜುಲೈ 12 - ಓವಲ್

• ದ್ವಿತೀಯ ಏಕದಿನ ಪಂದ್ಯ - ಜುಲೈ 14 - ಲಾರ್ಡ್ಸ್

• ತೃತೀಯ ಏಕದಿನ ಪಂದ್ಯ - ಜುಲೈ 17 - ಮ್ಯಾಂಚೆಸ್ಟರ್

Story first published: Tuesday, July 5, 2022, 11:59 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X