ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸರಣಿಗೂ ಮುನ್ನವೇ ಪೊಲಾರ್ಡ್ ವಿರುದ್ಧ ಸೇಡು ತೀರಿಸಿಕೊಂಡ ರೋಹಿತ್ ಶರ್ಮಾ!:ವೀಡಿಯೋ

 Rohit Sharma takes sweet revenge on Kieron Pollard in latest

ಭಾರತ ಮತ್ತು ವೆಸ್ಟ್‌ಇಂಡೀಸ್‌ ಸರಣಿಗೆ ಇನ್ನೆರಡು ದಿನ ಮಾತ್ರವೇ ಬಾಕಿ ಇದೆ. ಈ ಸರಣಿಗೂ ಮುನ್ನವೇ ರೋಹಿತ್ ಶರ್ಮಾ ವೆಸ್ಟ್‌ಇಂಡೀಸ್ ನಾಯಕ ಕಿರಾನ್ ಪೊಲಾರ್ಡ್ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕು ರೋಹಿತ್ ಶರ್ಮಾ ಸೇಡು ಯಾವ ಕಾರಣಕ್ಕಾಗಿ, ಯಾವ ರೀತಿಯಾಗಿ ಸೇಡು ತೀರಿಸಿಕೊಂಡಿದ್ದಾರೆ ಅನ್ನೋದೆ ಕುತೂಹಲಕಾರಿ ವಿಷಯ!

ರೋಹಿತ್ ಶರ್ಮಾ ಜೊತೆ ಕಿರಾನ್ ಪೊಲಾರ್ಡ್ ಡ್ರೈವ್ ಹೋಗುತ್ತಿದ್ದಾಗ ಪೊಲಾರ್ಡ್‌ರನ್ನು ಶರ್ಮಾ ಕಾರ್‌ನಿಂದ ಅರ್ಧಕ್ಕೆ ಇಳಿಸಿ ಬಿಟ್ಟು ಹೋಗಿದ್ರು. ಅದಾದ ಬಳಿಕ ತಡರಾತ್ರಿ ರೋಹಿತ್ ಶರ್ಮಾಗೆ ಕಾಲ್ ಮಾಡಿ 'ಇದು ನಿನಗೆ ಎಚ್ಚರಿಕೆ ಗಂಟೆ' ಎಂದು ಎಚ್ಚರಿಸಿದ್ದರು. ಇದೀಗ ಇದಕ್ಕೆ ರೋಹಿತ್ ಶರ್ಮಾ ಮತ್ತೆ ಸೇಡನ್ನು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಂಡಕ್ಕಾಗಿ ಗೆಳೆಯರ ಕಿತ್ತಾಟ: ಅನ್‌ಫಾಲೋನಲ್ಲಿ ಗೆಳೆತನ ಅಂತ್ಯ!ತಂಡಕ್ಕಾಗಿ ಗೆಳೆಯರ ಕಿತ್ತಾಟ: ಅನ್‌ಫಾಲೋನಲ್ಲಿ ಗೆಳೆತನ ಅಂತ್ಯ!

ಒಂದೇ ಹೋಟೆಲ್‌ನಲ್ಲಿ ರೋಹಿತ್ ಶರ್ಮಾ ಉಳಿದುಕೊಂಡಿರುತ್ತಾರೆ. ಮೆತ್ತಗೆ ತನ್ನ ರೂಮ್‌ನಿಂದ ಬರುವ ರೋಹಿತ್ ಶರ್ಮಾ ರೂಮ್ ಬಾಯ್‌ಗೆ ಗೆ ಹಣಕೊಟ್ಟು ಕಿರಾನ್ ಪೊಲಾರ್ಡ್‌ಗೆ ಕಾಡಿಸುವಂತೆ ಸೂಚಿಸುತ್ತಾರೆ. ಇದಾದ ಬಳಿಕ ಮಲಗಲೆಂದು ರೂಮ್ ಬಂದ ಕಿರಾನ್ ಪೊಲಾರ್ಡ್ ಬೆಡ್‌ಮೇಲೆ ಹೋದರೆ ಅಲ್ಲಿ ನೂರಾರು ಗೊಂಬೆಗಳನ್ನಿಟ್ಟು ಕಾಡಿಸುವ ಮೂಲಕ 'ವೇಕ್‌ಅಪ್ ಕಾಲ್‌'ಗೆ ರೋಹಿತ್ ಸೇಡು ತೋರಿಸಿಕೊಳ್ಳುತ್ತಾರೆ.

ಅಂದ ಹಾಗೆ ಇದು ರೋಹಿತ್ ಶರ್ಮಾ ಹಾಗೂ ಕಿರಾನ್ ಪೊಲಾರ್ಡ್ ಈ ರೀತಿ ಕೋಳಿ ಜಗಳ ಮಾಡಿಕೊಳ್ಳುತ್ತಿರುವುದು ರೀಯಲಲ್ಲಿ ಅಲ್ಲ, ಬದಲಾಗಿ ರೀಲ್‌ನಲ್ಲಿ. ಹೌದು, ವೆಸ್ಟ್‌ಇಂಡೀಸ್‌ ವಿರುದ್ಧದ ಟಿ-20 ಸರಣಿಯ ಪ್ರಸಾರದ ಹಕ್ಕನ್ನು ಪಡೆದಿರುವ ಸ್ಟಾರ್‌ ಸ್ಪೋರ್ಟ್ಸ ಸರಣಿಯ ಪ್ರಚಾರಕ್ಕಾಗಿ ಮಾಡಿರುವ ಜಾಹೀರಾತು ಇದು. ಮುಂಬೈ ಇಂಡಿಯನ್ಸ್‌ ತಂಡದ ಸಹಪಾಠಿಗಳಾಗಿರುವ ರೋಹಿತ್ ಶರ್ಮಾ ಮತ್ತು ಕಿರಾನ್ ಪೊಲಾರ್ಡ್ ನಿಜ ಜೀವನದಲ್ಲಿ ಆಪ್ತ ಗೆಳೆಯರು. ಆದರೆ ಈ ಗೆಳೆತನವನ್ನು ಎರಡು ದೇಶಗಳ ನಡುವಿನ ಸರಣಿಗೆ ಪೂರಕವಾಗಿ ಬಳಸಿಕೊಂಡು ಜಾಹೀರಾತು ನಿರ್ಮಾಣವಾಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್

ಭಾರತ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಮೂರು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಇದೇ ಆರನೇ ತಾರೀಕಿನಂದು ಮೊದಲ ಟಿ-20 ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ.

Story first published: Wednesday, December 4, 2019, 11:01 [IST]
Other articles published on Dec 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X