ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RSWS 2022: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಲೆಜೆಂಡ್ಸ್

RSWS 2022: India Legends Won The Toss Opt To Bat Against Sri Lanka Legends In Final

ರಾಯ್‌ಪುರದಲ್ಲಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಲೆಜೆಂಡ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ಹಾಗೂ ಶ್ರೀಲಂಕಾ ಲೆಜೆಂಡ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿವೆ.

ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧ ಗೆದ್ದು ಭಾರತ ಲೆಜೆಂಡ್ಸ್ ತಂಡ ಫೈನಲ್‌ ಪ್ರವೇಶಿಸಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಗೆಲುವು ಸಾಧಿಸಿದ ಶ್ರೀಲಂಕಾ ಲೆಜೆಂಡ್ಸ್ ಪಡೆ ಅಂತಿಮ ಸೆಣೆಸಾಟಕ್ಕೆ ಅರ್ಹತೆ ಪಡೆದುಕೊಂಡಿತ್ತು. ಈ ಪಂದ್ಯದ ಮೂಲಕ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ಗೆ ತೆರೆ ಬೀಳಲಿದೆ.

IND vs SA 2nd T20: ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಇತಿಹಾಸ ಮತ್ತು ಟಿ20 ದಾಖಲೆಗಳುIND vs SA 2nd T20: ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಇತಿಹಾಸ ಮತ್ತು ಟಿ20 ದಾಖಲೆಗಳು

ಪ್ರತಿಷ್ಠಿತಿ ಆರಂಭವಾದಾಗಿನಿಂದಲೂ ಮಳೆ ಹಲವು ಪಂದ್ಯಗಳಿಗೆ ತೊಂದರೆ ನೀಡಿದೆ. ಹಲವು ಪಂದ್ಯಗಳು ಮಳೆಯಿಂದ ರದ್ದಾಗಿವೆ. ಒಟ್ಟು ಎಂಟು ತಂಡಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಿದ್ದವು.

ವಿಶ್ವ ಕ್ರಿಕೆಟ್‌ನ ಹಲವು ದಿಗ್ಗಜರನ್ನು ಮತ್ತೆ ಮೈದಾನದಲ್ಲಿ ಆಡುವುದನ್ನು ನೋಡಿರುವ ಅಭಿಮಾನಿಗಳು ಖಷಿ ಪಟ್ಟಿದ್ದಾರೆ. ಅದರಲ್ಲೂ ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ ಅಭಿಮಾನಿಗಳನ್ನು ರಂಜಿಸಿದ್ದಾರೆ.

RSWS 2022: India Legends Won The Toss Opt To Bat Against Sri Lanka Legends In Final

ಎರಡೂ ತಂಡಗಳು ಪಂದ್ಯ ಸೋತಿಲ್ಲ

ಭಾರತ ಮತ್ತು ಶ್ರೀಲಂಕಾ ಎರಡೂ ಟೂರ್ನಿಯಲ್ಲಿ ಇಲ್ಲಿಯವರೆಗೆ ಅಜೇಯವಾಗಿವೆ. ಯಾವ ತಂಡ ಮೊದಲ ಸೋಲಿನ ರುಚಿ ಕಾಣಲಿದೆ ಎನ್ನುವುದು ಫೈನಲ್‌ನಲ್ಲಿ ತಿಳಿಯಲಿದೆ. ಏಷ್ಯಾದ ಎರಡೂ ತಂಡಗಳು ಇಲ್ಲಿಯವರೆಗೆ ಬ್ಯಾಟ್ ಮತ್ತು ಬಾಲ್‌ನಲ್ಲಿ ಪ್ರಾಬಲ್ಯ ಸಾಧಿಸಿವೆ. ಶ್ರೀಲಂಕಾ ಪರ ತಿಲಕರತ್ನೆ ದಿಲ್ಶನ್, ಮುನವೀರ ಮತ್ತು ಜಯಸೂರ್ಯ ಗೆಲುವಿಗೆ ಕಾರಣರಾಗಿದ್ದಾರೆ. ಭಾರತದ ಪರ ಸಚಿನ್ ತೆಂಡೂಲ್ಕರ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್ ಮತ್ತು ಪ್ರಗ್ಯಾನ್ ಓಜಾ ಉತ್ತಮ ಪ್ರದರ್ಶನ ನೀಡಿದ್ದಾರೆ.

ರಾಯ್‌ಪುರದ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು ಇದು ಬ್ಯಾಟರ್ ಗಳ ಪಿಚ್ ಆಗಿದೆ. ಈ ಮೈದಾನದಲ್ಲಿ 170 ರನ್‌ಗಳನ್ನು ಆರಾಮವಾಗಿ ಬೆನ್ನಟ್ಟಿದ ಉದಾಹರಣೆಗಳು ಇದೆ. ಇಂಡಿಯಾ ಲೆಜೆಂಡ್ಸ್ ಹಾಗೂ ಶ್ರೀಲಂಕಾ ಲೆಜೆಂಡ್ಸ್ ತಂಡಗಳಲ್ಲಿ ಸಾಕಷ್ಟು ಸ್ಪೋಟಕ ಆಟಗಾರರಿದ್ದು, ಈ ಪಂದ್ಯದಲ್ಲಿ ರನ್‌ ಮಳೆಯೇ ಹರಿಯುವ ಸಾಧ್ಯತೆಯಿದೆ.

RSWS 2022: India Legends Won The Toss Opt To Bat Against Sri Lanka Legends In Final

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಇಂಡಿಯಾ ಲೆಜೆಂಡ್ಸ್ : ನಮನ್ ಓಜಾ (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರಾಜೇಶ್ ಪವಾರ್, ಮತ್ತು ರಾಹುಲ್ ಶರ್ಮಾ

ಶ್ರೀಲಂಕಾ ಲೆಜೆಂಡ್ಸ್: ಮಹೇಲ ಉದವಟ್ಟೆ, ತಿಲಕರತ್ನೆ ದಿಲ್ಶನ್ (ನಾಯಕ), ಉಪುಲ್ ತರಂಗ (ವಿಕೆಟ್ ಕೀಪರ್), ಜೀವನ್ ಮೆಂಡಿಸ್, ಸನತ್ ಜಯಸೂರ್ಯ, ದಿಲ್ಶನ್ ಮುನವೀರ, ಅಸೆಲಾ ಗುಣರತ್ನೆ, ಇಸುರು ಉದಾನ, ನುವಾನ್ ಕುಲಶೇಖರ, ಇಶಾನ್ ಜಯರತ್ನ, ಧಮ್ಮಿಕಾ ಪ್ರಸಾದ್

Story first published: Saturday, October 1, 2022, 19:49 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X