ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ವಿಚಾರವಾಗಿ ಕಂಡ ಕನಸು ನನಸಾದ ಬಗೆ ಹೇಳಿದ ಸಂಜು ಸ್ಯಾಮ್ಸನ್

Sanju Samson Reveals Emotional Story About Ms Dhoni

ಟೀಮ್ ಇಂಡಿಯಾದ ಆಟಗಾರ ಸಂಜು ಸ್ಯಾಮ್ಸನ್‌ಗೆ ಇದ್ದ ಕನಸೊಂದು ನಿಜವಾದ ಬಗೆಯನ್ನು ಅವರು ಹೇಳಿಕೊಂಡಿದ್ದಾರೆ. ಈ ಕನಸು ನಿಜಕ್ಕೂ ಅವರಿಗೆ ನಿದ್ದೆಯಲ್ಲಿ ಬಂದಿತ್ತಂತೆ. ಆದರೆ ಅದು ನಿಜವಾಗುವುದು ಅಸಾಧ್ಯ ಎಂಬಂತಾ ಪರಿಸ್ಥಿತಿಯೂ ಉಂಟಾಗಿತ್ತಂತೆ. ಆದರೆ ಕಡೆಗೆ ಅದು ನಿಜವಾದಾಗ ಸಂಜು ತಮ್ಮೊಳಗೇ ಸಂಭ್ರಮಿಸಿದ್ದೆ ಎಂದು ಸಂಜು ಹೇಳಿಕೊಂಡಿದ್ದಾರೆ.

ಕ್ರೀಡಾ ನಿರೂಪಕಿ ರೂಪಾ ರಮಣಿ ಜೊತೆಗೆ ಸಂಜು ಸ್ಯಾಮ್ಸನ್ ಹಂಚಿಕೊಂಡಿರುವ ವಿಚಾರಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇದರಲ್ಲಿ ಸಂಜು ಧೋನಿ ಓರ್ವ ವಿಶೇಷ ಕ್ರಿಕೆಟಿಗ. ಆತನನ್ನು ನಕಲು ಮಾಡುವ ಪ್ರಯತ್ನ ಮಾಡಿದರೆ ಕಾಲಿ ಕೈಯಲ್ಲಿ ವಾಪಾಸಾಗಬೇಕಾಗುತ್ತದೆ. ಆತನ ಸ್ಥಾನವನ್ನು ತುಂಬುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಜಾರ್ಖಾಂಡ್‌ನಿಂದ ಬಂದಿರುವ ಯುವಕ ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ನಾಯಕ ಎನಿಸಿಕೊಳ್ಳುತ್ತಾನೆ. ನಾನು ಧೋನಿಯ ಬಗ್ಗೆ ಮಾತಾಡುವಾಗ ಯಾವಾಗಲೂ ಭಾವುಕನಾಗುತ್ತೇನೆ ಎಂದು ಸಂಜು ಸ್ಯಾಮ್ಸನ್ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಧೋನಿ ಬಗ್ಗೆ ಬಂದಿದ್ದ ಕನಸನ್ನು ಸಂಜು ಹೇಳಿಕೊಂಡಿದ್ದಾರೆ.

ಧೋನಿ ನನ್ನ ಕನಸಿನಲ್ಲಿ ಬಂದಿದ್ದರು, ಅವರು ತಂಡದ ನಾಯಕನಾಗಿದ್ದರು. ತಂಡದಲ್ಲಿ ಫೀಲ್ಡಿಂಗ್ ಬದಲಾವಣೆ ಮಾಡುತ್ತಲಿದ್ದರು. ನಾನು ಸ್ಲಿಪ್‌ನಲ್ಲಿ ನಿಂತಿದ್ದೆ. ಆಗ ಧೋನಿ ನನ್ನನ್ನು ಕುರಿತು 'ಸಂಜು ಅಲ್ಲಿಗೆ ಹೋಗು" ಎಂದು ನನಗೆ ಸೂಚಿಸುತ್ತಾರೆ. ಆದರೆ ಈ ಕನಸು ಬಿದ್ದ ಕೆಲವೇ ದಿನಗಳ ಬಳಿಕ ಧೋನಿ ತನ್ನ ನಾಯಕತ್ವವನ್ನು ತ್ಯಜಿಸಿದ್ದರು. ಆಗ ನನ್ನ ಕನಸು ಇನ್ನು ನಿಜವಾಗಲು ಹೇಗೆ ಸಾಧ್ಯ ಎಂದುಕೊಂಡುಬಿಟ್ಟೆ ಎಂದು ಸಂಜು ಹೇಳಿದರು.

ಆದರೆ ಅದಾದ ಬಳಿಕ ಇಂಡಿಯಾ 'ಎ' ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಪಂದ್ಯವೊಂದು ನಡೆದಿತ್ತು. ಆಗ ಧೋನಿಯೇ ನಾಯಕನಾಗಿದ್ದರು. ಸ್ಲಿಪ್‌ನಲ್ಲಿ ನಾನು ನಿಂತಿದ್ದೆ. ಆಗ ಧೋನಿ ಸಂಜು ಅಲ್ಲಿಗೆ ಹೋಗು ಎಂದು ಸೂಚಿಸಿದ್ದರು ಎಂದು ಕನಸು ನಿಜವಾದ ಬಗೆಯನ್ನು ಹೇಳಿಕೊಂಡರು. ಈ ವಿಚಾರವನ್ನು ನಾನು ಧೋನಿಗೆ ಈವರೆಗೆ ಹೇಳಿಲ್ಲ ಅವರ ಮುಂದೆ ಹೇಳಬೇಕು ಎಂದುಕೊಂಡಿದ್ದೇನೆಂದು ಸಂಜು ಹೇಳಿದರು.

Story first published: Tuesday, May 5, 2020, 13:42 [IST]
Other articles published on May 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X