ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಪ್ರೀತಿ ಜಿಂಟಾ ತಂಡವನ್ನು ಸೆಹ್ವಾಗ್ ತೊರೆದಿದ್ದೇಕೆ?

 Sehwag, Kings XI Punjab part ways

ನವದೆಹಲಿ, ನವೆಂಬರ್ 04: ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಜತೆಗಿನ ತಮ್ಮ ಸಂಬಂಧ ಮುರಿದುಕೊಂಡಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಪಂಜಾಬ್ ಡಗ್ ಔಟ್ ನಲ್ಲಿ ಸೆಹ್ವಾಗ್ ಕಾಣಿಸಿಕೊಳ್ಳುವುದಿಲ್ಲ.

ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ಮೆಂಟರ್ ಸ್ಥಾನವನ್ನು ತೊರೆದಿದ್ದೇನೆ ಎಂದು ಸೆಹ್ವಾಗ್ ಶನಿವಾರ(ನವೆಂಬರ್ 03)ದಂದು ಟ್ವೀಟ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯ ಬಳಿಕವೂ ಮೂರು ಋತುವಿನಲ್ಲಿ ತಂಡದ ಮೆಂಟರ್ ಹಾಗೂ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು.

ದೆಹಲಿ ಕ್ರಿಕೆಟ್ ಸಮಿತಿಗೆ ರಾಜೀನಾಮೆ ನೀಡಿದ ಸೆಹ್ವಾಗ್ ದೆಹಲಿ ಕ್ರಿಕೆಟ್ ಸಮಿತಿಗೆ ರಾಜೀನಾಮೆ ನೀಡಿದ ಸೆಹ್ವಾಗ್

ಟ್ವೀಟ್ ನಲ್ಲಿ ಏನಿದೆ?: 'ಎಲ್ಲ ಒಳ್ಳೆಯ ಸಂಗತಿಗಳಿಗೂ ಕೊನೆ ಇರುತ್ತದೆ. ಕಿಂಗ್ಸ್ ಇಲೆವೆನ್ ಪರವಾಗಿ ಎರಡು ವರ್ಷ ಆಟಗಾರನಾಗಿ ಹಾಗೂ ಮೂರು ವರ್ಷ ಮೆಂಟರ್ ಆಗಿ ಇದ್ದ ನನ್ನ ಅವಧಿ ಕೊನೆಗೊಂಡಿದೆ. ತಂಡದೊಂದಿಗೆ ಸಮಯ ಕಳೆಯಲು ಅವಕಾಶಕೊಟ್ಟ ಎಲ್ಲರಿಗೂ ಥ್ಯಾಂಕ್ಸ್. ತಂಡಕ್ಕೆ ಮುಂದಿನ ದಿನಗಳು ಶುಭವಾಗಿರಲಿ' ಎಂದಿದ್ದಾರೆ.

2014 ಹಾಗೂ 2015ರಲ್ಲಿ ತಂಡದ ಆಟಗಾರನಾಗಿದ್ದ ಸೆಹ್ವಾಗ್, 25 ಪಂದ್ಯಗಳಿಂದ 554 ರನ್ ಬಾರಿಸಿದ್ದರು.

ಐಪಿಎಲ್ ನಲ್ಲಿ ಪ್ರೀತಿ- ವಾಡಿಯಾ ಕಿತ್ತಾಟ, ಕೋರ್ಟಿನಲ್ಲಿ ಅರ್ಜಿ ವಜಾ ಐಪಿಎಲ್ ನಲ್ಲಿ ಪ್ರೀತಿ- ವಾಡಿಯಾ ಕಿತ್ತಾಟ, ಕೋರ್ಟಿನಲ್ಲಿ ಅರ್ಜಿ ವಜಾ

ಸೆಹ್ವಾಗ್ ತಂಡ ಬಿಟ್ಟ ಕಾರಣವನ್ನು ಬಹಿರಂಗಪಡಿಸಿಲ್ಲ. ಆದರೆ, . ಸೆಹ್ವಾಗ್ ಹಾಗೂ ಕಿಂಗ್ಸ್ ಇಲವೆನ್ ಒಡತಿ ಪ್ರೀತಿ ಝಿಂಟಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿರುವುದು ಸುಳ್ಳಲ್ಲ. ತಂಡಕ್ಕೆ ನ್ಯೂಜಿಲೆಂಡ್ ನ ಕೋಚ್ ಮೈಕ್ ಹೆಸ್ಸನ್ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಿದ್ದು, ಸೆಹ್ವಾಗ್ ಗೆ ಇಷ್ಟವಾಗಿರಲಿಲ್ಲ ಎಂಬ ಸುದ್ದಿಯಿದೆ. 2014ರಲ್ಲಿ ಪ್ಲೇ ಆಫ್ ತನಕ ತಲುಪಿದ್ದೇ ಪಂಜಾಬ್ ತಂಡದ ಉತ್ತಮ ಸಾಧನೆಯಾಗಿದೆ. ಇಲ್ಲಿ ತನಕ ಐಪಿಎಲ್ ಕಪ್ ಗೆಲ್ಲುವ ಕನಸು ನನಸಾಗಿಲ್ಲ.

Story first published: Sunday, November 4, 2018, 10:11 [IST]
Other articles published on Nov 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X