ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಿಂದೂ ಎಂಬ ಕಾರಣಕ್ಕೆ ಪಾಕ್ ತಂಡದಲ್ಲಿ ಕೆಟ್ಟದಾಗಿ ನಡೆಸಿಕೊಂಡರು: ಅಫ್ರಿದಿ ಬಣ್ಣ ಬಯಲು ಮಾಡಿದ ಸಹ ಆಟಗಾರ!

Shahid Afridi didnt let me to play ODI tournament and he is characterless person says Danish Kaneria

ಕ್ರಿಕೆಟ್, ಇದು ಧರ್ಮ ಹಾಗೂ ಭಾಷೆಯನ್ನೂ ಮೀರಿದ ಒಂದು ಗೌರವಾನ್ವಿತ ಕ್ರೀಡೆ. ಭಾರತ ಕ್ರಿಕೆಟ್ ತಂಡದಲ್ಲಿ ಎಲ್ಲಾ ಧರ್ಮದ ಆಟಗಾರರೂ ಸಹ ಇದ್ದು, ಇಲ್ಲಿಯ ತನಕ ಯಾರೂ ಸಹ ಧರ್ಮದ ಹೆಸರಿನಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದಾಗಲಿ ಅಥವಾ ವಿವಾದ ಮಾಡಿಕೊಂಡ ಉದಾಹರಣೆಯಾಗಲಿ ಇಲ್ಲ. ಇನ್ನು ಭಾರತ ಮೂಲದ ಹಲವಾರು ಕ್ರಿಕೆಟಿಗರು ಹಲವಾರು ವಿದೇಶಿ ತಂಡಗಳನ್ನು ಯಶಸ್ವಿಯಾಗಿ ಪ್ರತಿನಿಧಿಸಿದ ಉದಾಹರಣೆಗಳಿವೆ.

ಬೆನ್‌ ಸ್ಟೋಕ್ಸ್‌ಗೆ ನಾಯಕತ್ವ ಪಟ್ಟ: ನಿನ್ನೊಂದಿಗೆ ಪ್ರತಿ ಹೆಜ್ಜೆಯಲ್ಲೂ ಜೊತೆಗಿರುವೆ ಎಂದ ಜೋ ರೂಟ್‌ಬೆನ್‌ ಸ್ಟೋಕ್ಸ್‌ಗೆ ನಾಯಕತ್ವ ಪಟ್ಟ: ನಿನ್ನೊಂದಿಗೆ ಪ್ರತಿ ಹೆಜ್ಜೆಯಲ್ಲೂ ಜೊತೆಗಿರುವೆ ಎಂದ ಜೋ ರೂಟ್‌

ಹೀಗೆ ತಮ್ಮ ತಂಡ ಗೆಲ್ಲಬೇಕೆಂಬ ಹುಮ್ಮಸ್ಸಿನಿಂದ ಕಣಕ್ಕಿಳಿಯುವ ಆಟಗಾರರು ಸಾಮಾನ್ಯವಾಗಿ ಧರ್ಮದ ವಿಷಯದಲ್ಲಿ ಕಿತ್ತಾಡಿಕೊಳ್ಳುವ ಅಥವಾ ಧರ್ಮದ ಹೆಸರಿನಲ್ಲಿ ತಂಡದ ಆಟಗಾರರನ್ನು ಕೆಟ್ಟದಾಗಿ ನೋಡುವ ಕೆಲಸಕ್ಕೆ ಕೈಹಾಕುವುದಿಲ್ಲ. ಹೀಗೆ ಧರ್ಮದ ಹೆಸರಿನಿಂದ ತಮ್ಮ ಸಹ ಆಟಗಾರರ ವಿರುದ್ಧ ದ್ವೇಷ ಕಾರುವ ಘಟನೆಗಳು ಕ್ರಿಕೆಟ್ ಇತಿಹಾಸದಲ್ಲಿ ಹೆಚ್ಚಾಗಿ ಕಂಡುಬರುವುದೂ ಇಲ್ಲ. ಇನ್ನು ಆಟಗಾರರ ನಡುವೆ ಇಂತಹ ಗಂಭೀರ ವಿವಾದ ಹೆಚ್ಚಾಗಿ ಕೇಳಿಬಂದಿರುವುದು ದಕ್ಷಿಣ ಆಫ್ರಿಕಾ ತಂಡದಲ್ಲಿ. ವರ್ಣದ ಕುರಿತಾದ ಹಲವು ವಿವಾದ ದಕ್ಷಿಣ ಆಫ್ರಿಕಾ ತಂಡದಲ್ಲಿ ಉಂಟಾಗಿದ್ದು, ಈ ತಂಡವನ್ನು ಬಿಟ್ಟರೆ ಉಳಿದ ತಂಡಗಳಲ್ಲಿ ಈ ರೀತಿಯ ಗಂಭೀರ ವಿವಾದ ಅಷ್ಟೇನೂ ಕೇಳಿಬಂದಿಲ್ಲ. ಆದರೆ, ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿರುದ್ಧ ಅದೇ ತಂಡದ ಸಹ ಆಟಗಾರ ಮಾಡಿರುವ ಆರೋಪ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದು, ದೊಡ್ಡ ವಿವಾದವಾಗಿದೆ.

ಸತತ ಸೋಲುಂಡ ಆರ್‌ಸಿಬಿ ಮತ್ತೆ ಗೆಲ್ಲಲು ಬೆಂಚ್ ಕಾಯುತ್ತಿರುವ ಈ ಉತ್ತಮ ಆಟಗಾರನಿಗೆ ಅವಕಾಶ ನೀಡಲೇಬೇಕು!ಸತತ ಸೋಲುಂಡ ಆರ್‌ಸಿಬಿ ಮತ್ತೆ ಗೆಲ್ಲಲು ಬೆಂಚ್ ಕಾಯುತ್ತಿರುವ ಈ ಉತ್ತಮ ಆಟಗಾರನಿಗೆ ಅವಕಾಶ ನೀಡಲೇಬೇಕು!

ಹೌದು, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ವಿರುದ್ಧ ಆತನ ಸಹ ಆಟಗಾರನೇ ಗಂಭೀರ ಆರೋಪವನ್ನು ಮಾಡಿದ್ದು, ತಾನು ಹಿಂದೂ ಎಂಬ ಕಾರಣಕ್ಕೆ ತನ್ನ ವಿರುದ್ಧ ಅಫ್ರಿದಿ ಪಿತೂರಿ ನಡೆಸಿದ್ದರು ಹಾಗೂ ಕೆಟ್ಟದಾಗಿ ನಡೆಸಿಕೊಂಡರು ಎಂಬ ವಿಷಯವನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಹಿಂದೂ ಎಂಬ ಕಾರಣಕ್ಕೆ ಆಡುವ ಅವಕಾಶ ನೀಡುತ್ತಿರಲಿಲ್ಲ

ಹಿಂದೂ ಎಂಬ ಕಾರಣಕ್ಕೆ ಆಡುವ ಅವಕಾಶ ನೀಡುತ್ತಿರಲಿಲ್ಲ

ನ್ಯೂಸ್ ಏಜೆನ್ಸಿ ಐಎಎನ್ಎಸ್ ಸಂದರ್ಶನದಲ್ಲಿ ಭಾಗವಹಿಸಿದ್ದ ದನೀಶ್ ಕನೇರಿಯಾ ಶಾಹಿದ್ ಅಫ್ರಿದಿ ವಿರುದ್ಧ ಆರೋಪ ಮಾಡಿದ್ದಾರೆ. ತಾನು ಹಿಂದೂ ಎಂಬ ಕಾರಣಕ್ಕೆ ಅಫ್ರಿದಿ ತನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದರು ಎಂದಿರುವ ದನೀಶ್ ಕನೇರಿಯಾ ತಂಡದ ಆಡುವ ಬಳಗದಲ್ಲಿ ತನಗೆ ಸ್ಥಾನ ನೀಡುತ್ತಿರಲಿಲ್ಲ ಎಂದೂ ಸಹ ಆರೋಪಿಸಿದ್ದಾರೆ. "ಅಫ್ರಿದಿ ಓರ್ವ ಸುಳ್ಳುಗಾರ ಹಾಗೂ ಆತ ಚಾರಿತ್ಯ್ರಹೀನ ವ್ಯಕ್ತಿ. ನನಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡುತ್ತಿರಲಿಲ್ಲ. ಆದರೆ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ನಾನು ನನ್ನ ಪಾಡಿಗೆ ಆಟವಾಡುತ್ತಿದ್ದೆ. ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೆ, ಆದರೆ ಇದನ್ನು ಸಹಿಸದ ಅಫ್ರಿದಿ ನನ್ನ ವಿರುದ್ಧ ತಂಡದ ಇತರೆ ಆಟಗಾರರನ್ನು ಎತ್ತಿಕಟ್ಟುತ್ತಿದ್ದರು. ಆದರೆ, ಪಾಕಿಸ್ತಾನದ ಪರ ಆಡಿದ ಹೆಮ್ಮೆ ನನಗಿದೆ" ಎಂದು ದಾನಿಶ್ ಕನೇರಿಯಾ ಹೇಳಿಕೆ ನೀಡಿದ್ದಾರೆ.

ಶೋಯೆನ್ ಅಖ್ತರ್‌ಗೆ ಕೃತಜ್ಞತೆ ಸಲ್ಲಿಸಿದ ಕನೇರಿಯಾ

ಶೋಯೆನ್ ಅಖ್ತರ್‌ಗೆ ಕೃತಜ್ಞತೆ ಸಲ್ಲಿಸಿದ ಕನೇರಿಯಾ

ಇನ್ನೂ ಮುಂದುವರೆದು ಮಾತನಾಡಿದ ದನೀಶ್ ಕನೇರಿಯಾ ಈ ವಿಷಯವನ್ನು ಈ ಹಿಂದೆಯೇ ಬಿಚ್ಚಿಟ್ಟಿದ್ದ ತನ್ನ ಸಹ ಆಟಗಾರ ಶೊಯಬ್ ಅಖ್ತರ್‌ಗೆ ಧನ್ಯವಾದ ತಿಳಿಸಿದ್ದಾರೆ. "ನನ್ನ ಸಮಸ್ಯೆ ಕುರಿತಾಗಿ ಬಹಿರಂಗವಾಗಿ ಮೊದಲು ಮಾತನಾಡಿದ ವ್ಯಕ್ತಿ ಶೋಯಬ್ ಅಖ್ತರ್. ಈ ವಿಷಯವನ್ನು ಬಹಿರಂಗಪಡಿಸಿದ ಅವರಿಗೆ ಹ್ಯಾಟ್ಸ್ ಆಫ್. ಆದರೆ, ನಂತರದ ದಿನಗಳಲ್ಲಿ ಕೆಲವರು ಶೋಯಬ್ ಅಖ್ತರ್ ಅವರ ಬಾಯನ್ನು ಮುಚ್ಚಿಸಿಬಿಟ್ಟರು. ಆದರೆ, ನನಗೆ ಆ ರೀತಿ ನಡೆದದ್ದು ನಿಜ, ಅಫ್ರಿದಿ ನನ್ನನ್ನು ಕಡೆಗಣಿಸಿದ್ದರು ಹಾಗೂ ಏಕದಿನ ಪಂದ್ಯಗಳ ಆಡುವ ಬಳಗದಲ್ಲಿ ಅವಕಾಶ ನೀಡದೇ ಬೆಂಚ್ ಕಾಯುವಂತೆ ಮಾಡಿದ್ದರು" ಎಂದು ದನೀಶ್ ಕನೇರಿಯಾ ಹೇಳಿಕೆ ನೀಡಿದ್ದಾರೆ.

ದನೀಶ್ ಕನೇರಿಯಾ ಕಿರು ಪರಿಚಯ

ದನೀಶ್ ಕನೇರಿಯಾ ಕಿರು ಪರಿಚಯ

ದನೀಶ್ ಪ್ರಭಾ ಶಂಕರ್ ಕನೇರಿಯಾ 1980ರ ಡಿಸೆಂಬರ್ 16ರಂದು ಸಿಂಧ್‌ನ ಕರಾಚಿಯಲ್ಲಿ ಜನಿಸಿದರು. ಪ್ರಭಾಶಂಕರ್‌ಭಾಯ್‌ ಲಾಲ್‌ಜೀಭಾಯ್ ಕನೇರಿಯಾ ಹಾಗೂ ಬಬಿತಾ ಪ್ರಭಾಶಂಕರ್‌ಭಾಯ್‌ ಕನೇರಿಯಾ ಈ ಇಬ್ಬರು ದನೀಶ್ ಕನೇರಿಯಾ ಅವರ ತಂದೆ ಮತ್ತು ತಾಯಿ. 2000 - 2010ರವರೆಗೆ ಪಾಕಿಸ್ತಾನ ಅಂತರರಾಷ್ಟ್ರೀಯ ತಂಡದ ಪರ ಆಡಿರುವ ದನೀಶ್ ಕನೇರಿಯಾ 61 ಟೆಸ್ಟ್ ಪಂದ್ಯಗಳನ್ನಾಡಿ 261 ವಿಕೆಟ್‌ಗಳನ್ನು ಪಡೆದಿದ್ದಾರೆ ಹಾಗೂ ಕೇವಲ 18 ಪಂದ್ಯಗಳನ್ನಾಡಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Friday, April 29, 2022, 17:32 [IST]
Other articles published on Apr 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X