ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಿಮ ಪಂದ್ಯದಲ್ಲಿ ವಿಂಡೀಸ್ ಆರಂಭಿಕಕಾರ ಶಾಯ್ ಹೋಪ್ ದಾಖಲೆ!

Shai Hope faster than Viv Richards, Babar Azam to 3000 ODI runs

ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಶಾಯ್ ಹೋಪ್ ಹೊಸ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಕೆರೇಬಿಯನ್ ಆಟಗಾರರ ಪೈಕಿ ಶಾಯ್ ಹೋಪ್ ಅತಿ ವೇಗದ 3000 ರನ್ ದಾಖಲಿಸಿದ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಕಟಕ್‌ನಲ್ಲಿ ಇಂದು ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಶಾಯ್ ಹೋಪ್ ಈ ದಾಖಲೆಯನ್ನು ಮಾಡಿದ್ದಾರೆ.

ಮಾತ್ರವಲ್ಲದೆ ಒಟ್ಟಾರೆಯಾಗಿ ಅತಿ ವೇಗವಾಗಿ ಇಷ್ಟು ರನ್ ಕಲೆ ಹಾಕಿದ ಎರಡನೇ ಆಟಗಾರ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. ಶಾಯ್ ಹೋಪ್ ಈ ಮೈಲುಗಲ್ಲಿ ಮುಟ್ಟಲು 67 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಆಟಗಾರ ಹಾಶೀಂ ಆಮ್ಲಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಮ್ಲಾ ಈ ಸಾಧನೆಗೆ ಕೇವಲ 57 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.

ವೆಸ್ಟ್‌ ಇಂಡೀಸ್‌ನ ಲೆಜೆಂಡರಿ ಆಟಗಾರ ವಿವಿಯನ್ ರಿಚರ್ಡ್ ಅವರ ದಾಖಲೆಯನ್ನು ಮುರಿಯುವಲ್ಲಿ ಶಾಯ್ ಹೋಪ್ ಯಶಸ್ವಿಯಾಗಿದ್ದಾರೆ. ಶಾಯ್ ಹೋಪ್ ಈ ದಾಖಲೆಗಾಗಿ 69 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ಥಾನದ ಬಾಬರ್ ಅಜಮ್ ಮೂರನೇ ಸ್ಥಾನದಲ್ಲಿದ್ದು ಈ ಮೈಲಿಗಲ್ಲು ತಲುಪಲು 68 ಇನ್ನಿಂಗ್ಸ್ ಬಳಸಿಕೊಂಡಿದ್ದಾರೆ.

ಶಾಯ್ ಹೋಪ್ ಈ ಸಾಧನೆಯ ಜೊತೆಗೆ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. ವೆಸ್ಟ್‌ ಇಂಡೀಸ್ ಆಟಗಾರನೊಬ್ಬ ಕ್ಯಾಲೆಂಡರ್ ವರ್ಷವೊಂದರಲ್ಲಿ ಗಳಿಸಿದ ರನ್‌ಗಳಲ್ಲಿ ಶಾಯ್ ಹೋಪ್ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ವೆಸ್ಟ್‌ ಇಂಡೀಸ್‌ನ ಮತ್ತೋರ್ವ ಲೆಜೆಂಡಿರಿ ಆಟಗಾರ ಬ್ರಿಯಾನ್ ಲಾರಾ ದಾಖಲೆ ಹಿಮ್ಮೆಟ್ಟಿಸಲು ಕೇವಲ ನಾಲ್ಕು ರನ್‌ನಿಂದ ಹೋಪ್ ಹಿಂದುಳಿದರು. 1993ರಲ್ಲಿ ಬ್ರಿಯಾನ್ ಲಾರಾ 1349 ರನ್ ಬಾರಿಸಿದ್ದರು. ಆದರೆ ಶಾಯ್ ಹೋಪ್ 1345 ರನ್ ಬಾರಿಸಿದ್ದಾರೆ.

ಶಾಯ್ ಹೋಪ್ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. 2019ರಲ್ಲಿ ಹೋಪ್ 1300ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಆದರೆ ಇದಕ್ಕಾಗಿ ಹೋಪ್ ಕೇವಲ 28 ಪಂದ್ಯಗಳನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಶಾಯ್ ಹೋಪ್ ಈ ವರ್ಷ ರನ್ ಗಳಿಕೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಟೀಮ್ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ ಇದ್ದಾರೆ.

Story first published: Sunday, December 22, 2019, 18:38 [IST]
Other articles published on Dec 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X