ಬಾಬರ್, ಕೊಹ್ಲಿ ಅಲ್ಲ 2019ರಿಂದ ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು 50+ ರನ್ ಬಾರಿಸಿರುವ ಆಟಗಾರ ಈತ!

ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಶ್ರೇಷ್ಠ ಆಟಗಾರರು ಎನಿಸಿಕೊಂಡಿರುವ ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಯಾರಾದರೂ ಇಬ್ಬರು ಆಟಗಾರರ ನಡುವೆ ಹೋಲಿಕೆ ಮಾಡಿ ಚರ್ಚೆ ನಡೆದಿದೆ ಎಂದರೆ ಅದು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ನಡುವಿನ ಚರ್ಚೆಯಾಗಿದೆ.

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕಾಮನ್‍ವೆಲ್ತ್ ಗೇಮ್ಸ್‌ನಿಂದ ಹೊರಕ್ಕೆ?ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕಾಮನ್‍ವೆಲ್ತ್ ಗೇಮ್ಸ್‌ನಿಂದ ಹೊರಕ್ಕೆ?

ಹೌದು, ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಈ ಇಬ್ಬರೂ ಆಟಗಾರರ ಹೆಸರು ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿದ್ದು, ಇಬ್ಬರಲ್ಲಿ ಯಾರು ಉತ್ತಮರು ಎಂಬ ಚರ್ಚೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಕೇವಲ ನೆಟ್ಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲದೇ ಹಲವಾರು ದಿಗ್ಗಜ ಕ್ರಿಕೆಟಿಗರು ಹಾಗೂ ಸಕ್ರಿಯ ಕ್ರಿಕೆಟಿಗರು ಕೂಡ ಕೆಲ ಸಂದರ್ಶನಗಳಲ್ಲಿ ಈ ಇಬ್ಬರಲ್ಲಿ ಯಾರು ಉತ್ತಮರು ಎಂಬ ಚರ್ಚೆಯ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

IND vs WI: ಸರಣಿ ಗೆದ್ದ ಬಳಿಕ ಪಾರ್ಟಿ ಮೂಡ್‌ನಲ್ಲಿ ಟೀಮ್ ಇಂಡಿಯಾ; ಚಿತ್ರ ಹಂಚಿಕೊಂಡ ಸೂರ್ಯಕುಮಾರ್ ಪತ್ನಿIND vs WI: ಸರಣಿ ಗೆದ್ದ ಬಳಿಕ ಪಾರ್ಟಿ ಮೂಡ್‌ನಲ್ಲಿ ಟೀಮ್ ಇಂಡಿಯಾ; ಚಿತ್ರ ಹಂಚಿಕೊಂಡ ಸೂರ್ಯಕುಮಾರ್ ಪತ್ನಿ

ಇನ್ನು ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷದಿಂದ ಶತಕ ಬಾರಿಸದೇ ನಿರಾಸೆ ಮೂಡಿಸಿದ್ದರೆ, ಬಾಬರ್ ಅಜಮ್ ಮಾತ್ರ ಶತಕದ ಮೇಲೆ ಶತಕ ಬಾರಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಶತಕ ಬಾರಿಸದೇ ಇದ್ದರೂ ಸಹ 2019ರಿಂದ ಇಲ್ಲಿಯವರೆಗೂ ನಡೆದಿರುವ ಏಕದಿನ ಪಂದ್ಯಗಳಲ್ಲಿ ಹಲವಾರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ 2019ರಿಂದ ಇಲ್ಲಿಯವರೆಗೂ ನಡೆದಿರುವ ಏಕದಿನ ಪಂದ್ಯಗಳ ಪೈಕಿ ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿಗಿಂತ ಅತಿ ಹೆಚ್ಚು 50+ ರನ್ ಬಾರಿಸಿದ ಆಟಗಾರನೋರ್ವ ಇದ್ದು, 2019ರಿಂದೀಚೆಗೆ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ 50+ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹಾಗಿದ್ದರೆ ಏಕದಿನ ಕ್ರಿಕೆಟ್‍ನಲ್ಲಿ 2019ರಿಂದ ಇಲ್ಲಿಯವರೆಗೂ ಅತಿ ಹೆಚ್ಚು ಬಾರಿ 50+ ರನ್ ಕಲೆಹಾಕಿದ ಆಟಗಾರರ ಟಾಪ್ 3 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರು ಯಾರು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಶಾಯ್ ಹೋಪ್

ಶಾಯ್ ಹೋಪ್

ವೆಸ್ಟ್ ಇಂಡೀಸ್ ತಂಡದ ಆರಂಭಿಕ ಆಟಗಾರ ಶಾಯ್ ಹೋಪ್ 2019ರಿಂದೀಚೆಗೆ 54 ಏಕದಿನ ಇನ್ನಿಂಗ್ಸ್‌ ಆಡಿದ್ದು, 22 ಬಾರಿ 50+ ರನ್ ಕಲೆ ಹಾಕುವುದರ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ 2019ರಿಂದ ಇಲ್ಲಿಯವರೆಗೂ ಒಟ್ಟು 45 ಏಕದಿನ ಇನ್ನಿಂಗ್ಸ್ ಆಡಿದ್ದು 21 ಬಾರಿ 50+ ರನ್ ಕಲೆ ಹಾಕುವುದರ ಮೂಲಕ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಬಾಬರ್ ಅಜಮ್

ಬಾಬರ್ ಅಜಮ್

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ 2019ರಿಂದ ಇಲ್ಲಿಯವರೆಗೂ ಒಟ್ಟು 35 ಏಕದಿನ ಇನ್ನಿಂಗ್ಸ್ ಆಡಿದ್ದು 19 ಬಾರಿ 50+ ರನ್ ಕಲೆ ಹಾಕುವುದರ ಮೂಲಕ ಈ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ. ಬಾಬರ್ ಅಜಮ್ ಶಾಯ್ ಹೋಪ್ ಮತ್ತು ವಿರಾಟ್ ಕೊಹ್ಲಿಗಿಂತ ಕಡಿಮೆ ಪಂದ್ಯಗಳನ್ನಾಡಿರುವುದರಿಂದ ಈ ಪಟ್ಟಿಯಲ್ಲಿ ಹಿಂದುಳಿದಿದ್ದಾರೆ ಎನ್ನಬಹುದು.

*50+ರನ್ ಎಂದರೆ ಕೇವಲ ಅರ್ಧಶತಕ ಮಾತ್ರವಲ್ಲ, 50ಕ್ಕಿಂತ ಹೆಚ್ಚು ರನ್ ಬಾರಿಸಿದ ಎಲ್ಲಾ ಇನ್ನಿಂಗ್ಸ್‌ನ ರನ್ ಕೂಡ ಸೇರಿವೆ. ಅಂದರೆ ಇದರಲ್ಲಿ ಆಟಗಾರರು ಬಾರಿಸಿದ ಶತಕಗಳೂ ಸಹ ಸೇರಿವೆ.

ಕಳೆದ ಪಂದ್ಯದಲ್ಲಿ ಶತಕ ಬಾರಿಸಿರುವ ಶಾಯ್ ಹೋಪ್

ಕಳೆದ ಪಂದ್ಯದಲ್ಲಿ ಶತಕ ಬಾರಿಸಿರುವ ಶಾಯ್ ಹೋಪ್

ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆಟಗಾರ ಶಾಯ್ ಹೋಪ್ 135 ಎಸೆತಗಳಲ್ಲಿ 115 ರನ್ ಕಲೆಹಾಕಿ ಆಕರ್ಷಕ ಶತಕ ಬಾರಿಸಿ ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಶಾಯ್ ಹೋಪ್ ತಮ್ಮ ನೂರನೇ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ, ನೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಹತ್ತನೇ ಆಟಗಾರ ಹಾಗೂ ವೆಸ್ಟ್ ಇಂಡೀಸ್ ತಂಡದ ನಾಲ್ಕನೇ ಆಟಗಾರ ಎನಿಸಿಕೊಂಡರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 26, 2022, 15:17 [IST]
Other articles published on Jul 26, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X