ಶಕೀಬ್ ಅಲ್ ಹಸನ್, ಸ್ಟಫಾನಿ ಟೇಲರ್‌ಗೆ ಜುಲೈ ತಿಂಗಳ ಐಸಿಸಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ

ದುಬೈ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಮತ್ತು ವೆಸ್ಟ್‌ ಇಂಡೀಸ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಟಫಾನಿ ಟೇಲರ್ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜುಲೈ ತಿಂಗಳ ಪ್ಲೇಯರ್ ಆಫ್ ದ ಮಂಥ್ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದಾರೆ. ಜುಲೈ ತಿಂಗಳಿಗಾಗಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ವಿಭಾಗದ ತಿಂಗಳ ಆಟಗಾರ ಅಥವಾ ಆಟಗಾರ್ತಿ ಪ್ರಶಸ್ತಿಗೆ ಇಬ್ಬರು ಹೆಸರಿಸಲ್ಪಟ್ಟಿದ್ದಾರೆ.

ಎನ್‌ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆಎನ್‌ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆ

ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧ ಸರಣಿಯ ವೇಳೆ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಶಕೀಬ್ ಅಲ್ ಹಸನ್ ಕೊಡುಗೆಯಿಂದ ಬಾಂಗ್ಲಾದೇಶ ತಂಡ ಸರಣಿಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಈ ಸಾಧನೆಗಾಗಿ ಶಕೀಬ್ ಈ ಬಾರಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿಗೆ ಆರಿಸಲ್ಪಟ್ಟಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶಕೀಬ್ ಉತ್ತಮ ಪ್ರದರ್ಶನ

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶಕೀಬ್ ಉತ್ತಮ ಪ್ರದರ್ಶನ

ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶಕೀಬ್ ಉತ್ತಮ ಪ್ರದರ್ಶನ ನೀಡಿದ್ದರು. ಜಿಂಬಾಬ್ವೆ ವಿರುದ್ಧ ಶಕೀಬ್ ದ್ವಿತೀಯ ಏಕದಿನ ಪಂದ್ಯದಲ್ಲಿ ಅಜೇಯ 96 ರನ್ ಗಳಿಸಿದ್ದರು. ಈ ರನ್ ಬಲದಿಂದ ಬಾಂಗ್ಲಾದೇಶ ತಂಡ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಜಯ ಕಂಡಿತ್ತು. ಹರಾರೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಟಿ20ಐ ಸರಣಿಯಲ್ಲಿ ಶಕೀಬ್ 7ರ ಎಕಾನಮಿಯಂತೆ ಮೂರು ವಿಕೆಟ್‌ ಮುರಿದಿದ್ದರು. ಹೀಗಾಗಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾದೇಶ ಸರಣಿ ಗೆದ್ದಿತ್ತು. ಅಷ್ಟೇ ಅಲ್ಲ, ಟಿ20ಐ ಕ್ರಿಕೆಟ್‌ನಲ್ಲಿ ಆಲ್ ರೌಂಡರ್‌ಗಳಲ್ಲಿ ಶಕೀಬ್ ಸದ್ಯ ನಂ.1 ಸ್ಥಾನದಲ್ಲಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಹಸನ್ ತಿಂಗಳ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದಾರೆ. "2021 ಜುಲೈ ತಿಂಗಳಿಗಾಗಿ ಐಸಿಸಿ ಪುರುಷರ ಪ್ಲೇಯರ್ ಆಫ್‌ ದಿ ಮಂಥ್ ಪ್ರಶಸ್ತಿಗೆ ಮತದಾನ ಮಾಡಲ್ಪಟ್ಟಿದ್ದಕ್ಕಾಗಿ ನಾನು ಖುಷಿಯಾಗಿದ್ದೇನೆ. ಜುಲೈ ತಿಂಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅನೇಕ ಆಟಗಾರರಿದ್ದಾರೆ. ಇದೇ ಕಾರಣಕ್ಕೆ ಜುಲೈನಲ್ಲಿ ನಾನು ತಿಂಗಳ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದಕ್ಕಾಗಿ ಖುಷಿಗೊಂಡಿದ್ದೇನೆ," ಎಂದು ಶಕೀಬ್ ಹೇಳಿದ್ದಾರೆ. ಪ್ರಶಸ್ತಿಗಾಗಿ ಹೆಸರು ಸೂಚಿಸಲಾಗಿದ್ದ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಮತ್ತು ವೆಸ್ಟ್‌ ಇಂಡೀಸ್‌ನ ಹೇಡನ್ ವಾಲ್ಶ್ ಜೂನಿಯರ್ ಅವರನ್ನು ಹಿಂದಿಕ್ಕಿ ಶಕೀಬ್ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪಾಕಿಸ್ತಾನ್ ವಿರುದ್ಧ ಗಮನ ಸೆಳೆದಿದ್ದ ಸ್ಟಫಾನಿ ಟೇಲರ್

ಪಾಕಿಸ್ತಾನ್ ವಿರುದ್ಧ ಗಮನ ಸೆಳೆದಿದ್ದ ಸ್ಟಫಾನಿ ಟೇಲರ್

ವೆಸ್ಟ್‌ ಇಂಡೀಸ್ ಮಹಿಳಾ ಕ್ರಿಕೆಟ್ ಆಲ್ ರೌಂಡರ್ ಸ್ಟಫಾನಿ ಟೇಲರ್ ಜುಲೈ ತಿಂಗಳಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಮತ್ತು ಟಿ20ಐ ಎರಡರಲ್ಲೂ ತಂಡವನ್ನು ಮುನ್ನಡೆಸಿದ್ದರಲ್ಲದೆ ಸರಣಿ ಗೆಲ್ಲುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಟೇಲರ್ ಜೊತೆಗೆ ಅವರದೇ ತಂಡದ ಹೇಲಿ ಮ್ಯಾಥ್ಯೂಸ್, ಪಾಕಿಸ್ತಾನ ತಂಡದ ಫಾತಿಮಾ ಸನಾ ಕೂಡ ಜುಲೈ ತಿಂಗಳ ಐಸಿಸಿ ಆಟಗಾರ್ತಿ ಪ್ರಶಸ್ತಿಗೆ ಶಿಫಾರಸಾಗಿದ್ದರು. ಆದರೆ ಸ್ಟೆಫಾನಿ ಅವರ ಆಲ್ ರೌಂಡರ್ ಆಟದಿಂದ ಅವರೆಲ್ಲರನ್ನೂ ಹಿಂದಿಕ್ಕಿ ಟೇಲರ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. "ಜುಲೈ ತಿಂಗಳ ಐಸಿಸಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ ಗೆದ್ದಿರುವುದು ನನಗೆ ಅಚ್ಚರಿ ನೀಡಿದೆ. ಆದರೆ ನನಗೆ ಖುಷಿಯೂ ಆಗಿದೆ. ಕಠಿಣ ಶ್ರಮಕ್ಕೆ ಬೆಲೆಯಿದೆ ಅನ್ನೋದು ಇದರಲ್ಲಿ ಗೊತ್ತಾಗುತ್ತದೆ. ನಾನು ಪಾಕಿಸ್ತಾನ ವಿರುದ್ಧ ಚೆನ್ನಾಗಿ ಆಡಿದ್ದೇನೆ, ಅದಕ್ಕೆ ಪ್ರಶಸ್ತಿ ಗೆದ್ದಿದ್ದೇನೆ. ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳು ಸರಣಿಯಲ್ಲಿ ಪೈಪೋಟಿಯ ಪಂದ್ಯ ಆಡಿದ್ದವು," ಎಂದು ಟೇಲರ್ ಹೇಳಿದ್ದಾರೆ.

ಶಕೀಬ್ ಅಲ್ ಹಸನ್ ಮತ್ತು ಸ್ಟಫಾನಿ ಟೇಲರ್ ಸಂಕ್ಷಿಪ್ತ ಮಾಹಿತಿ

ಶಕೀಬ್ ಅಲ್ ಹಸನ್ ಮತ್ತು ಸ್ಟಫಾನಿ ಟೇಲರ್ ಸಂಕ್ಷಿಪ್ತ ಮಾಹಿತಿ

34ರ ಹರೆಯದ ಆಲ್ ರೌಂಡರ್ ಆಗಿರುವ ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ಕ್ರಿಕೆಟ್ ತಂಡದ ಪರ 58 ಟೆಸ್ಟ್‌ ಪಂದ್ಯಗಳಲ್ಲಿ 3933 ರನ್, 5 ಶತಕ, 1 ದ್ವಿಶತಕ, 25 ಅರ್ಧ ಶತಕ, 215 ವಿಕೆಟ್ ಗಳಿಸಿದ್ದಾರೆ. ಇನ್ನು 215 ಏಕದಿನ ಪಂದ್ಯಗಳಲ್ಲಿ 6600 ರನ್, 9 ಶತಕ, 49 ಅರ್ಧ ಶತಕ, 277 ವಿಕೆಟ್‌ ದಾಖಲೆ ಹೊಂದಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ 84 ಪಂದ್ಯಗಳಲ್ಲಿ 1718 ರನ್, 9 ಅರ್ಧ ಶತಕ, 102 ವಿಕೆಟ್ ಗಳಿಸಿದ್ದಾರೆ. 30ರ ಹರೆಯದ ಸ್ಟಫಾನಿ ಟೇಲರ್, 130 ಏಕದಿನ ಪಂದ್ಯಗಳಲ್ಲಿ 4929 ರನ್, 6 ಶತಕ, 145 ವಿಕೆಟ್, 111 ಟಿ20ಐ ಪಂದ್ಯಗಳಲ್ಲಿ 3121 ರನ್, 21 ಅರ್ಧ ಶತಕ, 98 ವಿಕೆಟ್ ದಾಖಲೆ ಹೊಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 11, 2021, 19:20 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X