ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧವನ್‌ಗೆ ತಲೆ ನೋವಾಯ್ತು ಕೆಎಲ್ ರಾಹುಲ್ ಪ್ರದರ್ಶನ: ಸ್ಪರ್ಧೆಯ ಬಗ್ಗೆ ತುಟಿ ಬಿಚ್ಚಿದ ಶಿಖರ್

Shikhar Dhawan on Competition for t20 World Cup Opening Spots

ಟೀಮ್ ಇಂಡಿಯಾದ ಬ್ಯಾಟಿಂಗ್ ಅಗ್ರ ಕ್ರಮಾಂಕದಲ್ಲಿ ಸಾಕಷ್ಟು ಪೈಪೋಟಿ ಇರುವುದಂತು ನಿಜ. ಆರಂಭಿಕರಾಗಿ ಸಾಕಷ್ಟು ಉತ್ತಮ ಇನ್ನಿಂಗ್ಸ್‌ ನೀಡಿರುವ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅದ್ಭುತ ಆಟ ನೀಡುತ್ತಿರುವಂತೆಯೇ ಅಲ್ಲಿಗೆ ಕೆಎಲ್ ರಾಹುಲ್ ಕೂಡ ಸ್ಪರ್ಧೆಗೆ ಇಳಿದಿದ್ದಾರೆ. ಇದು ಮ್ಯಾನೇಜ್‌ಮೆಂಟ್‌ಗೆ ತಲೆ ನೋವಾಗಿರೋದಂತು ಸುಳ್ಳಲ್ಲ.

ವಿರಾಟ್ ಮತ್ತು ತೆಂಡೂಲ್ಕರ್ ನಡುವಿನ ವ್ಯತ್ಯಾಸ ಹೇಳಿದ ವಾಸಿಮ್ ಅಕ್ರಮ್ವಿರಾಟ್ ಮತ್ತು ತೆಂಡೂಲ್ಕರ್ ನಡುವಿನ ವ್ಯತ್ಯಾಸ ಹೇಳಿದ ವಾಸಿಮ್ ಅಕ್ರಮ್

ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಒಬ್ಬರ ಹಿಂದೆ ಒಬ್ಬರಂತೆ ಗಾಯಗೊಂಡ ಸಂದರ್ಭದಲ್ಲಿ ಆ ಸ್ಥಾನವನ್ನು ತುಂಬಿದ್ದು ಕೆಎಲ್ ರಾಹುಲ್. ಮಾತ್ರವಲ್ಲ ಎಲ್ಲರೂ ಹುಬ್ಬೇರಿಸುವಂತೆ ಸೀಮಿತ ಓವರ್‌ಗಳಲ್ಲಿ ರಾಹುಲ್ ಪ್ರದರ್ಶನವನ್ನು ನೀಡಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ಅವರು ಆರಂಭಿಕ ಸ್ಥಾನವನ್ನು ತುಂಬಲು ತುದಿಗಾಲಲ್ಲಿ ನಿಂತಿರೋದು ಸುಳ್ಳಲ್ಲ. ಈ ಬಗ್ಗೆ ಶಿಖರ್ ಧವನ್ ಹೇಳಿಕೆಯನ್ನು ನೀಡಿದ್ದಾರೆ.

ಆಯ್ಕೆಗಾರರರೇ ನಿರ್ಧರಿಸುತ್ತಾರೆ

ಆಯ್ಕೆಗಾರರರೇ ನಿರ್ಧರಿಸುತ್ತಾರೆ

ಆಟದ ಕ್ರಮಾಂಕದ ವಿಚಾರದಲ್ಲಿ ಸ್ಪರ್ಧೆಗಳಿರುವುದು ನಿಜಕ್ಕೂ ಉತ್ತಮವಾದ ವಿಚಾರವೇ ಆಗಿದೆ. ಆದರೆ ತಂಡಕ್ಕೆ ಆಯ್ಕೆಯಾಗುವ ಸಂಗತಿ ನಮ್ಮ ಕೈಯ್ಯಲ್ಲಿ ಇಲ್ಲ. ಅದು ಆಯ್ಕೆಗಾರರೇ ನಿರ್ಣಯಿಸುತ್ತಾರೆ. ನಮ್ಮ ಕೆಲಸ ಉತ್ತಮವಾಗಿ ರನ್ ಗಳಿಸುವುದು. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಳ್ಳುವುದಾಗಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.

ಟಿ20 ವಿಶ್ವಕಪ್ ನನ್ನ ಗುರಿ

ಟಿ20 ವಿಶ್ವಕಪ್ ನನ್ನ ಗುರಿ

ನಾನು ಟಿ20 ವಿಶ್ವಕಪ್‌ನ್ನು ಗುರಿಯಾಗಿಟ್ಟುಕೊಂಡಿದ್ದೇನೆ. ಅದಕ್ಕಾಗಿ ತಯಾರಿಯನ್ನು ನಡೆಸುತ್ತಿದ್ದೇನೆ. ನನ್ನ ಫಿಟ್‌ನೆಸ್‌ ಬಗ್ಗೆಯೂ ನಾನು ಸಾಕಷ್ಟು ಗಮನ ನೀಡುತ್ತಿದ್ದೇನೆ. ಯಾವಾಗ ನನಗೆ ಆಡುವ ಅವಕಾಶ ಸಿಗುತ್ತದೋ ನಾನು ಆಗ ಆಡಲು ಸಿದ್ಧನಾಗಿದ್ದೇನೆ ಎಂದು ಶಿಖರ್ ಧವನ್ ಹೇಳಿಕೆಯನ್ನು ನೀಡಿದ್ದಾರೆ.

ಗಾಯಗೊಳ್ಳುವುದು ವಾಪಾಸ್ಸಾಗುವುದೇ ಆಯ್ತು

ಗಾಯಗೊಳ್ಳುವುದು ವಾಪಾಸ್ಸಾಗುವುದೇ ಆಯ್ತು

ಆಯ್ಕೆ ಯಾಗುವುದು ನನ್ನ ಕೈಯ್ಯಲ್ಲಿ ಇಲ್ಲ. ನಾನು ಉತ್ತಮ ಪ್ರದರ್ಶನ ನೀಡಬೇಕು. ಕಳೆದ ಒಂದು ವರ್ಷದಲ್ಲಿ ಹಲವಾರು ಬಾರಿ ಗಾಯಗೊಂಡು ಮತ್ತೆ ತಂಡಕ್ಕೆ ವಾಪಾಸ್ ಬರುವುದೇ ಆಗಿ ಹೋಯ್ತು. ಆಟದಲ್ಲಿ ಇದೆಲ್ಲಾ ಒಂದು ಭಾಗ ಎಂದು ಶಿಖರ್ ಧವನ್ ಹೇಳಿದ್ದಾರೆ. ಇರ್ಫಾನ್ ಪಠಾಣ್ ಜೊತೆಗೆ ಇನ್ಸ್ಟಾಗ್ರಾಮ್ ಲೈವ್‌ಗೆ ಬಂದಿದ್ದ ಶಿಖರ್ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

2019 ಧವನ್ ಪಾಲಿಗೆ ಕಠಿಣ

2019 ಧವನ್ ಪಾಲಿಗೆ ಕಠಿಣ

ಶಿಖರ್ ಧವನ್‌ಗೆ 2019 ನಿಜಕ್ಕೂ ದೊಡ್ಡ ಸವಾಲಾಗಿತ್ತು. ಗಾಯ ದೊಡ್ಡ ಮಟ್ಟದಲ್ಲಿ ಧವನ್‌ಗೆ ಕಾಡಿದರೆ ಪ್ರದರ್ಶನದಲ್ಲೂ ಧವನ್ ಕಳೆಗುಂದಿದಂತೆ ಕಂಡು ಬಂದಿದ್ದರು. 12 ಪಂದ್ಯಗಳಲ್ಲಿ ಧವನ್ 22ರ ಸರಾಸರಿಯಲ್ಲಿ 272 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಟಿ20 ಕ್ರಿಕೆಟ್‌ನಲ್ಲಿ ಧವನ್ ಸ್ಟ್ರೈಕ್‌ರೇಟ್ ಕೂಡ ಸಾಕಷ್ಟು ಪ್ರಶ್ನೆಯನ್ನು ಹುಟ್ಟುಹಾಕಿತ್ತು. 110 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಲಷ್ಟೇ ಧವನ್ ಶಕ್ತರಾಗಿದ್ದರು.

Story first published: Thursday, May 14, 2020, 14:47 [IST]
Other articles published on May 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X