ಅಂತಿಮ ಏಕದಿನ ಪಂದ್ಯ ಗೆದ್ದ ಆಸ್ಟ್ರೇಲಿಯಾ: 3-2 ಅಂತರದಿಂದ ಲಂಕಾ ವಶಕ್ಕೆ ಸರಣಿ

ಆಸ್ಟ್ರೇಲಿಯಾ ಹಾಗೂ ಶ್ರಿಲಂಕಾ ವಿರುದ್ಧದ ಏಕಲದಿನ ಸರಣಿಯ ಅಂತಿಮ ಪಂದ್ಯ ಮುಕ್ತಾಯವಾಗಿದ್ದು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿ ಸೋಲಿನ ಅಂತರವನ್ನು 3-2ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾದ ಬ್ಯಾಟರ್‌ಗಳು ಸಂಪೂರ್ಣವಾಗಿ ವಿಫಲವಾದರು. ಹೀಗಾಗಿ ಆಸಿಸ್ ಪಡೆಗೆ ಸುಲಭ ಸವಾಲು ದೊರೆತಿತ್ತು.

ಆಸ್ಟ್ರೇಲಿಯಾದ ಅಗ್ರ ಕ್ರಮಾಂಕ ಈ ಪಂದ್ಯದಲ್ಲಿ ಕೂಡ ಮತ್ತೊಮ್ಮೆ ವೈಫಲ್ಯ ಅನುಭವಿಸಿತು. ಆದರೆ ಕೆಳ ಕ್ರಮಾಂಕದ ದಾಂಡಿಗರಿಂದ ಜವಾಬ್ಧಾರಿಯುತ ಪ್ರದರ್ಶನ ಬಂದ ಕಾರಣ ಆಸ್ಟ್ರೇಲಿಯಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಆಸ್ಟ್ರೇಲಿಯಾ ದಾಂಡಿಗ ಅಲೆಕ್ಸ್ ಕ್ಯಾರಿ 45 ರನ್ ಬಾರಿಸಿದರೆ ಕ್ಯಾಮರೂನ್ ಗ್ರೀನ್ 25 ರನ್‌ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುIRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವತ್ತ ಸಾಗಿದ ಲಂಕಾ

ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವತ್ತ ಸಾಗಿದ ಲಂಕಾ

ಈ ಪಂದ್ಯದಲ್ಲಿ ಶ್ರಿಲಂಕಾದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾಯುತು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾದ ದಾಂಡಿಗರು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾದರು. ಯಾರು ಕೂಡ ಹೆಚ್ಚಿನ ಮೊತ್ತ ಗಳಿಸಲು ಸಫಲವಾಗಲೇ ಇಲ್ಲ. ಶ್ರೀಲಂಕಾ ತಂಡಕ್ಕೆ ಅಗತ್ಯವಾಗಿದ್ದ ಜೊತೆಯಾಟ ಕೂಡ ದೊರೆಯಲಿಲ್ಲ. ಇದರ ಪರಿಣಾಮವಾಗಿ ಶ್ರೀಲಂಕಾ 85 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವತ್ತ ಸಾಗಿತ್ತು.

ಲಂಕಾ ಪಡೆಗೆ ಆಸರೆಯಾದ ಕರುಣರತ್ನೆ

ಲಂಕಾ ಪಡೆಗೆ ಆಸರೆಯಾದ ಕರುಣರತ್ನೆ

ಆದರೆ ಈ ಹಂತದಲ್ಲಿ ಶ್ರೀಲಂಕಾದ ವೇಗದ ಬೌಲರ್ ಚಾಮಿಕ ಕರುಣರತ್ನೆ ಶ್ರೀಲಂಕಾ ಪರವಾಗಿ ಅದ್ಭುತ ಇನ್ನಿಂಗ್ಸ್‌ವೊಂದನ್ನು ಆಡಿದರು. ಪ್ರಮೋದ್ ಮದುಶನ್ ಅವರ ನೆರವಿನೊಂದಿಗೆ 9ನೇ ವಿಕೆಟ್‌ಗೆ ಜವಾನ್ಧಾರಿಯುತ ಬ್ಯಾಟಿಂಗ್ ನಡೆಸಿದರು ಕರುಣರತ್ನೆ. ಭರ್ಜರಿ 75 ರನ್‌ಗಳ ಕೊಡುಗೆ ಅವರ ಬ್ಯಾಟ್‌ನಿಂದ ಬಂದಿದೆ. ಹೀಗಾಗಿ ಶ್ರೀಲಂಕಾ 160 ರನ್‌ಗಳಿಸಲು ಸಾಧ್ಯವಾಯಿತು.

ಐಪಿಎಲ್ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಐರ್ಲೆಂಡ್ ತಂಡದ ನಾಯಕ

6 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಆಸಿಸ್ ಪಡೆ

6 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಆಸಿಸ್ ಪಡೆ

ಇನ್ನು ಶ್ರೀಲಂಕಾ ನೀಡಿದ ಈ ಸುಲಭ ಗುರಿಯನ್ನು ಆಸ್ಟ್ರೇಲಿಯಾ ತಂಡ ಪರದಾಡಿಕೊಂಡೇ ತಲುಪಿತು. ಅಂತಿಮ ಹಂತದಲ್ಲಿ ವಿಕೆಟ್ ಕೀಪರ್ ನೆಲಕಚ್ಚಿ ನಿಂತ ಪರರಿಣಾಮವಾಗಿ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿಯೂ ನಾಯಕ ಫಿಂಚ್ ಸಹಿತ ಆಸಿಸ್ ಪಡೆಯ ಬಹುತೇಕ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದಾರೆ.

ಟೆಸ್ಟ್ ಇತಿಹಾಸದಲ್ಲಿ 90 ವರ್ಷಗಳಿಂದ ಅಸಾಧ್ಯವಾಗಿದ್ದ ದಾಖಲೆ ಬರೆಯಲು ಭಾರತಕ್ಕೆ ಅಪೂರ್ವ ಅವಕಾಶ!

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಶ್ರೀಲಂಕಾ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ದಿನೇಶ್ ಚಂಡಿಮಲ್, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಚಾಮಿಕ ಕರುಣಾರತ್ನೆ, ಜೆಫ್ರಿ ವಂಡರ್ಸೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ

ಬೆಂಚ್: ನಿರೋಶನ್ ಡಿಕ್ವೆಲ್ಲಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಭಾನುಕಾ ರಾಜಪಕ್ಸೆ, ದುಷ್ಮಂತ ಚಮೀರ, ಲಹಿರು ಮಧುಶಂಕ, ರಮೇಶ್ ಮೆಂಡಿಸ್, ಅಸಿತ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ, ನುವಾನ್ ತುಷಾರ

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹ್ಯಾಜಲ್‌ವುಡ್

ಬೆಂಚ್: ಝೇ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 24, 2022, 22:05 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X