ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಏಷ್ಯಾ ಕಪ್: 100ನೇ ಪಂದ್ಯವಾಡಿದ ಸ್ಮತಿ ಮಂಧಾನ: ಥಾಯ್ಲೆಂಡ್ ವಿರುದ್ಧದ ಪ್ರದರ್ಶನಕ್ಕೆ ಹರ್ಷ

Smriti Mandhana said special to be playing 100th T20I for India praises teams performance against Thailand

ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಸೋಮವಾರ ಥಾಯ್ಲೆಂಡ್ ವಿರುದ್ಧ ಲೀಗ್ ಹಂತದ ಅಂತಿಮ ಪಂದ್ಯವನ್ನಾಡಿದ್ದ ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಕೇವಲ 37 ರನ್‌ಗಳಿಗೆ ಆಲೌಟ್ ಆದ ಥಾಯ್ಲೆಂಡ್ ತಂಡವನ್ನು ಒಂದು ವಿಕೆಟ್ ಕಳೆದುಕೊಂಡು ಭಾರತ 6 ಓವರ್‌ಗಳಲ್ಲಿಯೇ ಪಂದ್ಯವನ್ನು ಮುಗಿಸುವಲ್ಲಿ ಯಶಸ್ವಿಯಾಗಿತ್ತು.

ಈ ಪಂದ್ಯದ ಬಳಿಕ ಭಾರತ ಮಹಿಳಾ ತಂಡದ ಉಪ ನಾಯಕಿ ಸ್ಮೃತಿ ಮಂಧಾನ ಮಾತನಾಡಿದ್ದು ತಂಡದ ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ ಮೂಲಕ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಸಾಧನೆ ಮಾಡಿದ ಮಂಧಾನ ಈ ದಿನ ತಮ್ಮ ಪಾಲಿಗೆ ಅತ್ಯಂತ ವಿಶೇಷವಾದ ದಿನವಾಗಿದೆ ಎಂದಿದ್ದಾರೆ.

ಸೆಮಿಫೈನಲ್‌ಗೆ ಕಠಿಣ ಶ್ರಮ: ಈ ಸಂದರ್ಭದಲ್ಲಿ ಸ್ಮೃತಿ ಮಂಧಾನ ಸೆಮಿಫೈನಲ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆದ ಮೊದಲ ತಂಡವಾಗಿದೆ. ಹೀಗಾಗಿ ಸೆಮಿಫೈನಲ್‌ನಲ್ಲಿ ಯಾವ ತಂಡ ಭಾರತಕ್ಕೆ ಎದುರಾಳಿಯಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರೊ ಕಬಡ್ಡಿ ಲೀಗ್ ಸೀಸನ್ 9: ಪುಣೇರಿ ಪಲ್ಟಾನ್ ವಿರುದ್ಧ ರೋಚಕವಾಗಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್ಪ್ರೊ ಕಬಡ್ಡಿ ಲೀಗ್ ಸೀಸನ್ 9: ಪುಣೇರಿ ಪಲ್ಟಾನ್ ವಿರುದ್ಧ ರೋಚಕವಾಗಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್

ಇದು ವಿಶೇಷ ಅನುಭವ: 100ನೇ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ನಿಜಕ್ಕೂ ವಿಶೇಷ ಅನುಭವವಾಗಿದೆ. ತಂಡದ ಆಟಗಾರ್ತಿಯರು ಇದನ್ನು ವಿಶೇಷವಾಗಿಸಿದರು. ಈ ತಂಡದಲ್ಲಿರುವುದು ಮಜವಾದ ಅನುಭವವಾಗಿದೆ. ಈ ಟೂರ್ನಮೆಂಟ್‌ನಲ್ಲಿ ಥಾಯ್ಲೆಂಡ್ ಅದ್ಭುತವಾದ ಪ್ರದರ್ಶನ ನೀಡಿದೆ. ಮುಂದಿನ ಹಂತದಲ್ಲಿ ಆಡುವುದಕ್ಕಾಗಿ ನಾವು ಎದುರುನೋಡುತ್ತಿದ್ದೇವೆ. ನಮ್ಮ ಬೌಲರ್‌ಗಳು ಭರ್ಜರಿಯಾಗಿ ಪ್ರದರ್ಶನ ನೀಡಿದ್ದಾರೆ. ಮೂವರು ಬ್ಯಾಟರ್‌ಗಳು ಕೂಡ ಉತ್ತಮವಾಗಿ ಆಡಿದ್ದಾರೆ. ಎರಡು ದಿನಗಳಲ್ಲಿ ನಾವು ಸೆಮಿಫೈನಲ್ ಆಡಲಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದಿದ್ದಾರೆ ಸ್ಮತಿ ಮಂಧಾನ

ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಭಾರತ ತಂಡ ಕೇವಲ 37 ರನ್‌ಗಳಿಗೆ ಥಾಯ್ಲೆಂಡ್ ತಂಡವನ್ನು ಆಲೌಟ್ ಮಾಡಿತ್ತು. ಆರಂಭಿಕ ಆಟಗಾರ್ತಿ ಕೊಂಚರೊಂಕೈ ಮಾತ್ರವೇ ತಂಡದ ಪರವಾಗಿ ಎರಡಂಕಿ ದಾಟುವಲ್ಲಿ ಯಶಸ್ವುಯತಾಗಿದ್ದಾರೆ. ಉಳಿದೆಲ್ಲಾ ಆಟಗಾರ್ತಿರು ಒಂದಂಕಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಭಾರತದ ಪರವಾಗಿ ಸ್ನೇಹ್ ರಾಣಾ 3 ವಿಕೆಟ್ ಪಡೆದು ಮಿಂಚಿದ್ದಾರೆ.

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಭಾರತೀಯ ಮಹಿಳಾ ತಂಡ ಈ ಮೊತ್ತವನ್ನು 6 ಓವರ್‌ಗಳಲ್ಲಿ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಮೇಘನಾ 20 ಹಾಗೂ ಪೂಜಾ ವಸ್ತ್ರೇಕರ್ 12 ರನ್‌ಗಳಿಸಿ ಅಜೇಯವಾಗುಳಿದರೆ ಶಫಾಲಿ ವರ್ಮಾ 8 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಮೂಲಕ 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ ಭಾರತ.

Story first published: Monday, October 10, 2022, 20:22 [IST]
Other articles published on Oct 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X