ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಫೀ ವಿತ್ ಕರಣ್ ವಿವಾದ: ಪಾಂಡ್ಯ, ರಾಹುಲ್ ಪರ ಗಂಗೂಲಿ ಬ್ಯಾಟಿಂಗ್!

Sourav Ganguly has his say on the matter, says lets not take it too far

ನವದೆಹಲಿ, ಜನವರಿ 17: ಕೊಹ್ಲಿ ಸೇರಿದಂತೆ ಇಡೀ ಭಾರತ ಕ್ರಿಕೆಟ್ ತಂಡದ ಯಾವ ಆಟಗಾರರೂ ಕೂಡ ಕಾಫೀ ವಿತ್ ಕರಣ್‌ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡದ್ದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರನ್ನು ಬೆಂಬಲಿಸಿಲ್ಲ. ಆದರೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಯುವ ಆಟಗಾರರ ಬೆನ್ನಿಗೆ ನಿಂತಿದ್ದಾರೆ.

ಭಾರತ vs ಆಸೀಸ್, ಏಕದಿನ: ಭಾರತದ XI ಆಟಗಾರರ ಸಂಭಾವ್ಯ ತಂಡಭಾರತ vs ಆಸೀಸ್, ಏಕದಿನ: ಭಾರತದ XI ಆಟಗಾರರ ಸಂಭಾವ್ಯ ತಂಡ

ಜನಪ್ರಿಯ ಟಿವಿ ಟಾಕ್ ಶೋ 'ಕಾಫೀ ವಿತ್ ಕರಣ್' ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಎಲ್ಲೆ ಮೀರಿ ನಡೆದುಕೊಂಡಿದ್ದು ಎಡಗೈ ಬ್ಯಾಟ್ಸ್ಮನ್ ಗಂಗೂಲಿಗೆ ದೊಡ್ಡ ತಪ್ಪಾಗಿ ಕಾಣಿಸಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಯುವ ಆಟಗಾರರ ಭವಿಷ್ಯದ ಬಗ್ಗೆ ಯೋಚಿಸಿರುವ ಗಂಗೂಲಿ, ಒಬ್ಬ ಹಿರಿಯ ಆಟಗಾರರಿಗಿರುವ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಗೆಳತಿ ಇಶಾ ನೇಗಿ ಜೊತೆ ರಿಷಬ್ ಪಂತ್: ಇನ್ಸ್ಟಾಗ್ರಾಮ್‌ ಚಿತ್ರ ವೈರಲ್ಗೆಳತಿ ಇಶಾ ನೇಗಿ ಜೊತೆ ರಿಷಬ್ ಪಂತ್: ಇನ್ಸ್ಟಾಗ್ರಾಮ್‌ ಚಿತ್ರ ವೈರಲ್

ನಾವು ಮನುಷ್ಯರೆಲ್ಲರೂ ಒಂದಿಲ್ಲೊಂದು ತಪ್ಪು ಮಾಡುವವರೆ. ಇತರರೂ ತಪ್ಪು ಮಾಡಿದಾಗ ಅದನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕೇ ವಿನಃ ಉಗ್ರವಾಗಿ ಶಿಕ್ಷಿಸೋದು ಸರಿಯಲ್ಲ ಎಂಬಂತೆ ಮಾತನಾಡಿರುವ ಗಂಗೂಲಿ ಮಾತಲ್ಲಿ ಅರ್ಥವೂ ಇದೆ.

ದೊಡ್ಡದು ಮಾಡಬೇಡಿ

ದೊಡ್ಡದು ಮಾಡಬೇಡಿ

ಮುಂಬೈನಲ್ಲಿ ಗುರುವಾರ (ಜನವರಿ 17) ಮಾತನಾಡುತ್ತ ಗಂಗೂಲಿ, 'ಮನುಷ್ಯರೆಲ್ಲರೂ ತಪ್ಪು ಮಾಡುತ್ತಾರೆ. ಹಾಗೆಯೇ ಇವರೂ ಮಾಡಿದ್ದಾರೆ. ಇದನ್ನು ತುಂಬಾ ದೊಡ್ಡದು ಮಾಡುವ ಅಗತ್ಯವಿಲ್ಲ.
ಪಾಂಡ್ಯ-ರಾಹುಲ್ ಇಬ್ಬರಿಗೂ ಈಗ ತಪ್ಪಿನ ಅರಿವಾಗಿದೆ. ಇನ್ಮುಂದೆ ಅವರು ಒಳ್ಳೆತನವನ್ನು ಬೆಳೆಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ' ಎಂದರು.

ವಿವಾದವೇನು?

ವಿವಾದವೇನು?

ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೊಹರ್ ನಡೆಸಿಕೊಡುವ ಕಾಫೀ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್-ಪಾಂಡ್ಯ ಸ್ವೇಚ್ಛಾಚಾರದ ಹೇಳಿಕೆ ನೀಡಿದ್ದರು. ಮಹಿಳೆಯ ಬಗ್ಗೆ ಕೀಳು ಅಭಿರುಚಿಯನ್ನು ತೋರಿಕೊಂಡಿದ್ದರು. ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಇದು ಸಾರ್ವಜನಿಕರು ಮತ್ತು ಬಿಸಿಸಿಐ ಕೆಂಗಣ್ಣಿಗೆ ಕಾರಣವಾಗಿತ್ತು.

ನಾವೇನು ಯಂತ್ರವಲ್ಲ

ನಾವೇನು ಯಂತ್ರವಲ್ಲ

'ನಾವೆಲ್ಲರೂ ಮನುಷ್ಯರೇ ಹೊರತು ಯಂತ್ರಲ್ಲ. ಯಂತ್ರವಾಗಿದ್ದರೆ ಎಲ್ಲವನ್ನೂ ಪರ್ಫೆಕ್ಟ್ ಅನ್ನುವಂತೆ ಮಾಡಬಹುದಿತ್ತು. ನಾವು ಹಾಗಲ್ಲವಲ್ಲ? ಇಲ್ಲಿ ನಾವೂ ಚಂದವಾಗಿ ಬದುಕಬೇಕು. ಇತರರೂ ಬದುಕೋಕೆ ಅವಕಾಶ ಮಾಡಿಕೊಡಬೇಕು. ತಪ್ಪನ್ನೇ ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ' ಎಂದು ಸೌರವ್ ಹೇಳಿದ್ದಾರೆ.

ಸರಣಿಯಿಂದ ಅಮಾನತು

ಸರಣಿಯಿಂದ ಅಮಾನತು

ಟಾಕ್ ಶೋ ವೇಳೆ ಪಾಂಡ್ಯ ಅವರೇ ಹೆಚ್ಚು ಎಲ್ಲೆ ಮೀರಿ ಮಾತನಾಡಿದ್ದು. ಅಂದು ಪಾಂಡ್ಯ ತಾನು ಹೆಣ್ಣನ್ನು ಹೇಗೆ ಗಮನಿಸುತ್ತೇನೆ ಎಂದೆಲ್ಲ ಹೇಳಿದ್ದರಲ್ಲದೆ ಮಹಿಳೆಯರನ್ನು ಸೆಕ್ಸಿಸ್ಟ್ ಎಂದು ಪರಿಗಣಿಸಿರುವ ರೀತಿಯಲ್ಲಿ ಮಾತನಾಡಿದ್ದರು. ರಾಹುಲ್ ಅವರು ಮಹಿಳೆಯರ ಬಗ್ಗೆ ಮಾತನಾಡಿದ್ದಕ್ಕಿಂತಲೂ ಡ್ರೆಸ್ಸಿಂಗ್ ರೂಮ್‌ನ ಸೀಕ್ರೆಟ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇದು ವಿವಾದ ಸೃಷ್ಟಿಸಿತ್ತು. ಪರಿಣಾಮ ಇಬ್ಬರೂ ಆಟಗಾರರು ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಅಮಾನತುಗೊಂಡಿದ್ದರು.

Story first published: Thursday, January 17, 2019, 18:37 [IST]
Other articles published on Jan 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X